ತೀರ್ಥಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್, ಸ್ವೆಟರ್ ಭಾಗ್ಯ..!
– ಕೇಂದ್ರ ಸರ್ಕಾರದ ಯೋಜನೆಯ ಮೂಲಕ ಹಂಚಿಕೆ: ರಾಘವೇಂದ್ರ
– ತೀರ್ಥಹಳ್ಳಿ ಪಟ್ಟಣ ಪಂಚಾಯತ್ ವತಿಯಿಂದ ಸನ್ಮಾನ
– ಶಾಲಾ ಮಕ್ಕಳು, ಪೋಷಕರ ಮೊಗದಲ್ಲಿ ಸಂಭ್ರಮ!
NAMMUR EXPRESS NEWS
ತೀರ್ಥಹಳ್ಳಿ : ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಸ್ವೆಟರ್ ವಿತರಣಾ ಕಾರ್ಯಕ್ರಮ ಗೋಪಾಲಗೌಡ ರಂಗಮಂದಿರದಲ್ಲಿ ಶುಕ್ರವಾರ ನಡೆಯಿತು. ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆಯನ್ನು ಸಂಸದ ಬಿ ವೈ ರಾಘವೇಂದ್ರ ನೆರವೇರಿಸಿದರು. ಸಾಂಕೇತಿಕವಾಗಿ ಮಕ್ಕಳಿಗೆ ಬ್ಯಾಗ್ ಮತ್ತು ಸ್ವೆಟರ್ ವಿತರಣೆ ಮಾಡಿ ಮಾತನಾಡಿದ ಸಂಸದ ಬಿ, ವೈ ರಾಘವೇಂದ್ರ, ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ವತಿಯಿಂದ ಕಳೆದ ವರ್ಷ ಒಂದು ಲಕ್ಷ ಬ್ಯಾಗನ್ನು ನಮ್ಮ ಜಿಲ್ಲೆಗೆ ಕೊಡುವಂತ ಪ್ರಯತ್ನವಾಗಿತ್ತು ಅದು ನಮ್ಮ ತೀರ್ಥಹಳ್ಳಿ ಈ ಭಾಗಕ್ಕೆ ಬರುವಲ್ಲಿ ತಡವಾಯಿತು, ಅದನ್ನು ಈ ವರ್ಷದಲ್ಲಿ ಇಡೀ ಜಿಲ್ಲೆಯಲ್ಲಿ ಒಂದನೇ ತರಗತಿಯಿಂದ ನಾಲ್ಕನೇ ತರಗತಿವರೆಗೆ ಬ್ಯಾಗ್ ಮತ್ತು ಸ್ವೆಟರ್ ಅನ್ನು ವಿತರಿಸಲಾಗುವುದು ಹಾಗೂ 7ನೇ ತರಗತಿಯ ಮಕ್ಕಳಿಗೆ ಬ್ಯಾಗನ್ನು ವಿತರಿಸಲಾಗುವುದು ಎಂದು ಹೇಳಿದರು. ಈ ಕಾರ್ಯಕ್ರಮವನ್ನು ಇವತ್ತು ಅಧಿಕೃತವಾಗಿ ಈ ತಾಲೂಕಿನಲ್ಲಿ ಪ್ರಥಮವಾಗಿ ಪ್ರಾರಂಭ ಮಾಡಿದ್ದೇವೆ. ನಮ್ಮ ಜಿಲ್ಲೆಗೆ ಒಂದು ಲಕ್ಷ ಬ್ಯಾಗನ್ನು ಹಾಗೂ 60,000 ಸ್ವೆಟರ್ ಗಳನ್ನು ನೀಡಲಾಗಿದೆ. ತಾಲೂಕಿನ ಸರಕಾರಿ ಶಾಲೆಯ ಮಕ್ಕಳಿಗೆ 3000 ಸ್ವೆಟರ್ ಮತ್ತು 6,000 ಬ್ಯಾಗ್ ವಿತರಿಸಲಾಗುವುದು ಎಂದರು.
ಕ್ಷೇತ್ರದ ಶಾಸಕರು ಮಾತನಾಡಿ ಸಂಸದರು ಬಿ ವೈ ರಾಘವೇಂದ್ರ ಕೇಂದ್ರದಿಂದ ಅನುದಾನವನ್ನು ತಂದು ಈಗಾಗಲೇ ರಸ್ತೆ ಹಾಗೂ ವಿಮಾನ ನಿಲ್ದಾಣ ಸೇತುವೆ, ಮುಖ್ಯವಾಗಿ ರೈತರಿಗೆ ನೆರವಾಗುವ ಸೌಲಭ್ಯವನ್ನು ಮತ್ತು ಹಲವಾರು ಜನಪರ ಕಾರ್ಯಕ್ರಮಗಳನ್ನು ನಮ್ಮ ಜಿಲ್ಲೆಗೆ ತಂದಿದ್ದಾರೆ. ಅವರು ಸಂಸತ್ತಿನಲ್ಲಿ ಪ್ರಬಲ ಸಂಸದರಾಗಿ ಹೊರಹಮ್ಮಿದ್ದಾರೆ. ಅವರ ಕಾರ್ಯ ವೈಖರಿ ನೋಡಿ ತುಂಬಾ ಖುಷಿಯ ವಿಚಾರ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಫೈ.ಗಣೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್ತುಲ್ಲಾ ಅಸಾದಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ರಮೇಶ್, ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಶಿಕ್ಷಕರು ಮತ್ತು ಪೋಷಕರು ಮತ್ತು ಮಕ್ಕಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ವತಿಯಿಂದ ಸನ್ಮಾನ
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವತಿಯಿಂದ ಸಂಸದ ಬಿ ವೈ ರಾಘವೇಂದ್ರ ಅವರಿಗೆ ಸನ್ಮಾನ ಸಮಾರಂಭವನ್ನು ಅಧ್ಯಕ್ಷ ಅಸಾದಿ ನೇತೃತ್ವದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಎಲ್ಲಾ ಸದಸ್ಯರು ಹಾಜರಿದ್ದರು.
ಶಾಲಾ ಮಕ್ಕಳು, ಪೋಷಕರ ಮೊಗದಲ್ಲಿ ಸಂಭ್ರಮ!
ತೀರ್ಥಹಳ್ಳಿ ತಾಲೂಕಿನ ಎಲ್ಲಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಬ್ಯಾಗ್ ಹಾಗೂ ಸ್ವೆಟರ್ ವಿತರಣೆ ಮಾಡಲಾಯಿತು. ಈ ವೇಳೆ ಪೋಷಕರು ಮತ್ತು ಶಾಲಾ ಶಿಕ್ಷಕರು, ಮಕ್ಕಳ ಮೊಗದಲ್ಲಿ ಸಂತಸ ಕಂಡು ಬಂತು.
