ತೀರ್ಥಹಳ್ಳಿ ರಾಜ್ಯಕ್ಕೆ ಎಲ್ಲದರಲ್ಲೂ ನಂ.1
– ತೀರ್ಥಹಳ್ಳಿಯ ಬಗ್ಗೆ ಅವಧೂತ ವಿನಯ್ ಗುರೂಜಿ ಹೆಮ್ಮೆಯ ಮಾತು
– ಮೇಲಿನ ಕುರುವಳ್ಳಿಯಲ್ಲಿ ನೂತನ ಉದ್ಯಮ ಅನುಪ್ರಿಯ ಇನ್ ಉದ್ಘಾಟನೆ
– ದಾನ, ಸಹಕಾರ, ಮಾನವೀಯತೆಯೇ ಧರ್ಮ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಸಾಧಕರ ಊರು. ತೀರ್ಥಹಳ್ಳಿ ಇಂದಲೇ ರಾಜ್ಯದಲ್ಲಿ ಯಾವುದೇ ಹೊಸ ಬದಲಾವಣೆಯಾದರೂ ಶುರುವಾಗುತ್ತದೆ. ರಾಜಕೀಯದಲ್ಲೂ, ಹೋರಾಟದಲ್ಲೂ ತೀರ್ಥಹಳ್ಳಿ ಮೇಲುಗೈ. ಉದ್ಯಮ ಕ್ಷೇತ್ರದಲ್ಲೂ ಕೂಡ ತೀರ್ಥಹಳ್ಳಿ ಮುಂದಿದೆ. ಹೀಗಾಗಿ ತೀರ್ಥಹಳ್ಳಿಯ ಹಿರಿಮೆಯನ್ನು ಎಲ್ಲರೂ ಸೇರಿ ಹೆಚ್ಚಿಸಬೇಕಿದೆ ಎಂದು ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ. ತೀರ್ಥಹಳ್ಳಿಯ ಪಟ್ಟಣದ ಮೇಲಿನ ಕುರುವಳ್ಳಿಯಲ್ಲಿ ಮುತ್ತುಗುಂಡಿ ಪ್ರವೀಣ್ ಮತ್ತು ಅನಿತಾ ಮುತ್ತುಗುಂಡಿ ಪ್ರವೀಣ್ ಇವರ ನೂತನ ಉದ್ಯಮವನ್ನು ಉದ್ಘಾಟಿಸಿ ಮಾತನಾಡಿ, ತೀರ್ಥಹಳ್ಳಿ ಊರಲ್ಲಿ ಶಕ್ತಿ ಇದೆ. ದೇವಸ್ಥಾನಗಳಿಂದ ಹಿಡಿದು ಎಲ್ಲವೂ ಜನರು ಆರಾಧಿಸುವಂತದ್ದು ನಮ್ಮ ಊರಿನ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಇಲ್ಲಿನ ಸಾಧಕರನ್ನು ಉದ್ಯಮಿಗಳನ್ನು ನಾವು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಪ್ರವಾಸೋದ್ಯಮ, ಉಧ್ಯಮ, ನವ ಉದ್ಯಮದಲ್ಲಿ ತೀರ್ಥಹಳ್ಳಿಗರು ಹೆಚ್ಚಿದ್ದಾರೆ. ರಾಜ್ಯದಲ್ಲಿ ಏನೇ ಹೊಸತು ಶುರುವಾದರೂ ತೀರ್ಥಹಳ್ಳಿಯಲ್ಲಿ ಶುರುವಾಗಲಿದೆ ಎಂದರು. ಇತ್ತೀಚೆಗೆ ಯುವ ಜನತೆ ಧಾರ್ಮಿಕತೆ ಹಾಗೂ ಹಿಂದಿನ ಪದ್ಧತಿಗಳನ್ನು ಮರೆಯುತ್ತಿದ್ದಾರೆ. ಮಾನವ ಧರ್ಮದ ಮುಂದೆ ಯಾವುದೇ ಧರ್ಮವಿಲ್ಲ, ನಮ್ಮ ಅಜ್ಜ ಅಜ್ಜಿ, ಅಪ್ಪ, ಅಮ್ಮ,ಹಿಂದಿನವರು ನಡೆಸಿಕೊಂಡು ಬಂದ ಸನಾತನ ಧರ್ಮವನ್ನು ಮರೆಯುತ್ತಿದ್ದಾರೆ. ನಾವೆಲ್ಲರೂ ಗುರು ಹಿರಿಯರನ್ನು ಗೌರವಿಸಬೇಕು ಎಂದು ಕರೆ ನೀಡಿದರು. ತೀರ್ಥಹಳ್ಳಿಯ ಹೆಮ್ಮೆಯ ಬಗ್ಗೆ ಗುರೂಜಿ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಒಕ್ಕಲಿಗರ ಸಂಘದ ನಿರ್ದೇಶಕ ಸಿರಿಬೈಲ್ ಧರ್ಮೇಶ್, ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಂಡೆ ವೆಂಕಟೇಶ್, ಮುತ್ತು ಗುಂಡಿ ಪ್ರವೀಣ್ ಮತ್ತು ಅನಿತಾ ಮತ್ತುಗುಂಡಿ, ತಿಮ್ಮಪ್ಪ ಗೌಡ ಹಾಗೂ ಪ್ರೇಮ, ಹಿರಿಯರಾದ ಕೊಳಾವರ ನಾರಾಯಣ ಮೂರ್ತಿ, ಸಸಿತೋಟ ಸುಧಾಕರ್, ಮಣಿ ಹೆಗ್ಡೆ, ನೆಂಪೆ ದೇವರಾಜ್, ಬಸವಾನಿ ವಿಜಯದೇವ್ ಸೇರಿದಂತೆ ಹಲವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿ ನೂತನ ಉದ್ಯಮಕ್ಕೆ ಶುಭ ಕೋರಿದರು.