ತೀರ್ಥಹಳ್ಳಿ ದಸರಾಕ್ಕೆ ವಿದ್ಯುತ್ ಅಲಂಕಾರದ ರಂಗು!
– ಕುಶಾವತಿ ಪಾರ್ಕಲ್ಲಿ ವಿಶೇಷ ಬೆಳಕಿನ ಅಲಂಕಾರ
– ಪಟ್ಟಣದ ಎಲ್ಲೆಡೆ ಮಳಿಗೆಗೂ ಬೆಳಕಿನ ಚಿತ್ತಾರ
– ಮೊದಲ ದಿನವೇ ಕವಿಗೋಷ್ಠಿ, ಮಕ್ಕಳಿಗೆ ಸ್ಪರ್ಧೆ
NAMMUR EXPRESS NEWS
ತೀರ್ಥಹಳ್ಳಿ: ದಸರಾಗೆ ತೀರ್ಥಹಳ್ಳಿ ಸಿಂಗಾರಗೊಂಡಿದೆ. ಕುಶಾವತಿ ಉದ್ಯಾನವನದಲ್ಲಿ ವಿಶೇಷವಾಗಿ ವಿದ್ಯುತ್ ಬೆಳಕಿನ ಅಲಂಕಾರ ಮಾಡಲಾಗಿದೆ. ಅಲ್ಲದೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಿದ್ಯುತ್ ದೀಪಗಳಿಂದ ಜಗಮಗಗೊಳಿಸಲಾಗಿದೆ.
ತೀರ್ಥಹಳ್ಳಿ ಪಟ್ಟಣದ ದೇವಾಲಯಗಳು, ಕೆಲವು ಅಂಗಡಿಗಳು ವಿದ್ಯುತ್ ದೀಪದಿಂದ ಅಲಂಕೃತಗೊಂಡಿವೆ.
ಜನರು, ವಾಹನಗಳು ಕೂಡ ಪಟ್ಟಣದಲ್ಲಿ ಹೆಚ್ಚಿವೆ. ತೀರ್ಥಹಳ್ಳಿಯ ಮುನ್ನ ಮತ್ತು ರಾಘವೇಂದ್ರ ಅವರ ಎಂ. ಎಸ್ ಸೌಂಡ್ಸ್ ಅಂಡ್ ಪ್ಲವರ್ ಡೇಕೋರೇಷನ್ ಸಂಸ್ಥೆ I ಈ ಬಾರಿ ಅದ್ದೂರಿ ಬೆಳಕಿನ ಅಲಂಕಾರ ಮಾಡಿದೆ. ಪಟ್ಟಣದಲ್ಲಿ ಶ್ರೀ ಅಯ್ಯಪ್ಪ ಸೌಂಡ್ಸ್ ಅವರು ಅಲಂಕಾರ ಮಾಡಿದ್ದಾರೆ. ಕೊಪ್ಪ ಸರ್ಕಲ್ ಅಲ್ಲಿ ದುರ್ಗಿಯ ಫೋಟೋ ಮತ್ತು ಅಲಂಕಾರ ಗಮನ ಸೆಳೆದಿದೆ.
ರಾಜ್ಯ ಮಟ್ಟದ ಕವಿಗೋಷ್ಠಿ: ಮಕ್ಕಳಿಗೆ ಸ್ಪರ್ಧೆ
ತೀರ್ಥಹಳ್ಳಿ ಪಟ್ಟಣದ ಶಾಂತವೇರಿಗೋಪಾಲ ಗೌಡ ರಂಗ ಮಂದಿರದಲ್ಲಿ ರಾಜ್ಯ ಮಟ್ಟದ ದಸರಾ ಕವಿಗೋಷ್ಠಿ ನಡೆದಿದ್ದು ಸುಮಾರು 25ಕ್ಕೂ ಹೆಚ್ಚು ಕವಿಗಳು ಆಗಮಿಸಿದ್ದರು. ಡಾನ್ ರಾಮಣ್ಣ ನಡೆಸಿಕೊಟ್ಟರು. ಡಾ. ಗಣಪತಿ, ಸುದೀಷ್ಣಕುಮಾರಿ ತೀರ್ಪುಗಾರರಾಗಿದರು.
ಮಕ್ಕಳಿಗೆ ವಿವಿಧ ಸ್ಪರ್ಧೆ
ಕುಶಾವತಿಯಲ್ಲಿ ಸಂಜೆ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ದಸರಾ ಸಮಿತಿ ಸಂಚಾಲಕರಾದ ಸಂದೇಶ್ ಜವಳಿ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಸೊಪ್ಪುಗುಡ್ಡೆ ರಾಘವೇಂದ್ರ ಸೇರಿದಂತೆ ಹಲವರು ಇದ್ದರು.
