Categories
ತೀರ್ಥಹಳ್ಳಿ

ತೀರ್ಥಹಳ್ಳಿಗೆ ಸ್ಪೀಕರ್ ಯು.ಟಿ.ಖಾದರ್

ತೀರ್ಥಹಳ್ಳಿಗೆ ಸ್ಪೀಕರ್ ಯು.ಟಿ.ಖಾದರ್
– ಗುಡ್ಡೆಕೇರಿ ಶಾಲೆಗೆ ಭೇಟಿ ನೀಡಿ ಮೆಚ್ಚುಗೆ
– ತೀರ್ಥಹಳ್ಳಿ ರೈತರ ಸಮಸ್ಯೆಗಳಿಗೆ ಸ್ಪಂದನೆ
– ದೇಗುಲಗಳಿಗೆ ಭೇಟಿ ನೀಡಿದ ನಾಯಕ

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯ ವಿಧಾನಸಭಾ ಅಧ್ಯಕ್ಷ, ಸ್ಪೀಕರ್ ಯು ಟಿ ಖಾದರ್ ತೀರ್ಥಹಳ್ಳಿಗೆ ಭೇಟಿ ನೀಡಿ ತೀರ್ಥಹಳ್ಳಿ ಭಾಗದ ರೈತರ ಜತೆ ಮಾತುಕತೆ ನಡೆಸಿದರು. ಗುಡ್ಡೆಕೇರಿ ಪ್ರೌಢಶಾಲೆಗೆ ಭೇಟಿ ನೀಡಿ ಅಲ್ಲಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ, ರೈತ ಮುಖಂಡ ಮಹಾಬಲೇಶ್ ಹಸಿರುಮನೆ ಅವರ ಮನೆಗೆ ಭೇಟಿ ನೀಡಿ ಮಲೆನಾಡಿನ ಸಮಸ್ಯೆಗಳ ಬಗ್ಗೆ ರೈತ ಮುಖಂಡರು ಹಾಗೂ ಸ್ಥಳೀಯರೊಂದಿಗೆ ಚರ್ಚೆ ನಡೆಸಿದರು. ಮಲೆನಾಡಿನಲ್ಲಿ ಕಾಡುತ್ತಿರುವ ಎಲೆಚುಕ್ಕಿ ರೋಗದ ಸಂಬಂಧಪಟ್ಟ ಹಾಗೆ ಚರ್ಚೆ ನಡೆಸಿದ ಅವರು ಆಗುಂಬೆ ವೇಣುಗೋಪಾಲಸ್ವಾಮಿ, ಚರ್ಚ್ ಭೇಟಿ ನೀಡಿದರು. ಬಳಿಕ ಮೇಗರವಳ್ಳಿ ದುರ್ಗಾ ಪರಮೇಶಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಬಳಿಕ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರು ತೆರಳುವ ಮುನ್ನ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರು ಭೇಟಿ ಮಾಡಿದರು. ಈ ವೇಳೆ ಅಮರಪಾಲಿ ಸುರೇಶ್ ಮತ್ತಿತರರು ಇದ್ದರು.

ಸ್ಪೀಕರ್ ಸ್ವಾಗತಿಸಿದ ಆರಗ

ಆಗುಂಬೆಗೆ ಆಗಮಿಸಿದ ಸ್ಪೀಕರ್ ಅವರನ್ನು ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೆಂದ್ರ ಸ್ವಾಗತಿಸಿದರು. ಅಲ್ಲದೆ ಕಾರ್ಯಕ್ರಮಗಳಲ್ಲಿ ಅವರ ಜತೆ ಭಾಗಿಯಾದರು.

ಖಾದರ್ ಅವರಿಗೆ ಕಿಮ್ಮನೆ ಸಾಥ್

ಕಾಂಗ್ರೆಸ್ ನಾಯಕ ಹಸಿರುಮನೆ ಮಹಾಬಲೇಶ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಖಾದರ್ ಜತೆ ಸಾಥ್ ನೀಡಿದರು. ಅಲ್ಲದೆ ಪ್ರಸ್ತುತ ರಾಜಕೀಯ ಹಾಗೂ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.