ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ತೀರ್ಥಹಳ್ಳಿ ಖೋ ಖೋ ಪಂದ್ಯ
– ತೀರ್ಥಹಳ್ಳಿ ಇತಿಹಾಸದಲ್ಲೆ ಅವಿಸ್ಮರಣೆಯ ಟೂರ್ನಿ
– ಕ್ರೀಡಾಕೂಟವನ್ನು ವೀಕ್ಷಿಸಿದ 50,000 ಕ್ರೀಡಾಭಿಮಾನಿಗಳು
– ಗೆದ್ದವರು ಯಾರು ಯಾರು? ಏನಿದು ವಿಶೇಷ…?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಮಾರಿ ಜಾತ್ರೆ ಅಂಗವಾಗಿ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಹಾಗೂ ಶ್ರೀ ಮಾರಿಕಾಂಬಾ ದೇವಸ್ಥಾನ ವತಿಯಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಲು ನಿರೀಕ್ಷೆ ಮೀರಿ ಯಶಸ್ಸು ಕಂಡಿದೆ. ಇಡೀ ರಾಜ್ಯದಲ್ಲಿ ಈ ಪಂದ್ಯ ಗಮನ ಸೆಳೆದಿದೆ. ಮಾ.14 ರಿಂದ 17 ರವರೆಗೆ ತೀರ್ಥಹಳ್ಳಿಯ ಆಗುಂಬೆ ಪೆಟ್ರೋಲ್ ಬಂಕ್ ಬಳಿ ಇರುವ ಎಪಿಎಂಸಿ ಪಕ್ಕದ ಮೈದಾನದಲ್ಲಿ ಏರ್ಪಡಿಸಿದ್ದ ಈ ಪಂದ್ಯಾವಳಿಯು ತಾಲೂಕಿನ ಕ್ರೀಡಾ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಅವಿಸ್ಮರಣೀಯ ಟೂರ್ನಿಯಾಗಿ ಹೊರಹೊಮ್ಮಿದ್ದು, ಇಡೀ ರಾಜ್ಯದಲ್ಲೇ ಗಮನ ಸೆಳೆದಿದೆ.
ದೇಶದ ವಿವಿಧ ಭಾಗದಿಂದ ತಂಡ
ದೇಶದ ವಿವಿಧ ಭಾಗಗಳಿಂದ 14 ತಂಡಗಳು ಭಾಗವಹಿಸಿದ್ದು, 350 ಕ್ರೀಡಾಪಟುಗಳು ಆಗಮಿಸಿದ್ದರು ಕೇರಳ, ತಮಿಳುನಾಡು, ಮುಂಬೈ ಸೇರಿದಂತೆ ವಿವಿಧ ರಾಜ್ಯಗಳ ತಂಡಗಳು ಭಾಗವಹಿಸಿದ್ದು, ಸುಮಾರು 50,000 ಕ್ರೀಡಾಭಿಮಾನಿಗಳು ಕ್ರೀಡಾಕೂಟವನ್ನು ವೀಕ್ಷಿಸಿದ್ದಾರೆ. ತೀರ್ಥಹಳ್ಳಿಯ ಹಿರಿಮೆ ಕ್ರೀಡಾ ಕ್ಷೇತ್ರದಲ್ಲಿ ಕೂಡ ಈ ಟೂರ್ನಿ ಆಯೋಜನೆ ಮೂಲಕ ಮೆರಗು ನೀಡಿದ್ದು, ಮೂರು ದಿನಗಳ ಕಾಲ ಅತ್ಯುತ್ತಮವಾದ ಪ್ರದರ್ಶನವನ್ನು ನೀಡಿ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಗೆದ್ದವರು ಯಾರು ಯಾರು..?
ಫೈನಲ್ ನಲ್ಲಿ ಪುರುಷರ ವಿಭಾಗದಲ್ಲಿ ಪುಣೆ ತಂಡ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡರೆ, ಕರ್ನಾಟಕದ ಖೇಲೊ ಇಂಡಿಯಾ ದ್ವಿತೀಯ ಸ್ಥಾನ, ಕೇರಳ ತಂಡ ತೃತೀಯ ಸ್ಥಾನ, ವಿಹಂಗ್ ಮುಂಬೈ ಚತುರ್ಥ ಸ್ಥಾನ ಪಡೆದಿದೆ. ಇನ್ನು ಮಹಿಳಾ ವಿಭಾಗದಲ್ಲಿ ಕರ್ನಾಟಕ ತಂಡ ಪ್ರಥಮ ಸ್ಥಾನ, ಉಸ್ಮನಾಬಾದ್ ದ್ವಿತೀಯ ಸ್ಥಾನ, ಕೊಲ್ಲಾಪುರ್ ತಂಡ ತೃತೀಯ ಸ್ಥಾನ, ದೆಹಲಿ ತಂಡ ಚತುರ್ಥ ಸ್ಥಾನ ಪಡೆದಿದೆ. ನಾಲ್ಕು ದಿನಗಳ ಕಾಲ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ರೂಪಿಸಿ ಅಷ್ಟೇ ವ್ಯವಸ್ಥಿತವಾಗಿ ನಿರ್ವಹಿಸಿದ ಕ್ರೀಡಾಕೂಟದ ಆಯೋಜಕರಾದ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
