ತೀರ್ಥಹಳ್ಳಿ ಸಾಧಕ ವಿದ್ಯಾರ್ಥಿಗಳು
– ಸಾನಿಕ ಎಂ ಹೆಗಡೆ, ಕನ್ನಿಕಾ ಗಿರೀಶ್ ಶೆಟ್ಟಿ 5ನೇ ರ್‍ಯಾಂಕ್
– ಯಡೂರು ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳ ಸಾಧನೆ
ಸಾನಿಕ ಎಂ ಹೆಗಡೆ 5ನೇ ರ್‍ಯಾಂಕ್
ತೀರ್ಥಹಳ್ಳಿಯ ವಾಗ್ದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಸಾನಿಕ ಎಂ ಹೆಗಡೆ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದಿದ್ದಾಳೆ.
ಇವಳು ಶಿಕ್ಷಕ ದಂಪತಿಗಳಾದ ಶ್ರೀಮತಿ ರೇಣುಕಾ ಹೆಗಡೆ ಮತ್ತು ಶ್ರೀ ಮಹಾಬಲೇಶ್ವರ ಹೆಗಡೆ ಇವರ ಪುತ್ರಿ.
ಕನ್ನಿಕಾ ಗಿರೀಶ್ ಶೆಟ್ಟಿ ಸಾಧನೆ
ಶ್ರೀ ಗಿರೀಶ್ ಶೆಟ್ಟಿ ಮತ್ತು ಶ್ರೀಮತಿ ಪವಿತ್ರ ಗಿರೀಶ್ ದಂಪತಿಗಳ ಸುಪುತ್ರಿ ಕುಮಾರಿ ಕನ್ನಿಕಾ ಗಿರೀಶ್ ಶೆಟ್ಟಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 621 ಅಂಕ ಗಳಿಸುವ ಮುಖಾಂತರ ಶೇ.99 ರೊಂದಿಗೆ ರಾಜ್ಯಕ್ಕೇ 5 ನೇ ರ್‍ಯಾಂಕ್ ಪಡೆದಿದ್ದಾಳೆ. ಈಕೆ ವಾಗ್ದೇವಿ ಶಾಲೆ ವಿದ್ಯಾರ್ಥಿನಿ.
ಯಡೂರು ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳ ಸಾಧನೆ
ಸರ್ಕಾರಿ ಪ್ರೌಢಶಾಲೆ ಯಡೂರು 98.1% ಪಡೆದುಕೊಂಡಿದೆ. ವಿದ್ಯಾರ್ಥಿನಿ ನಿಧಿ ಬಿ ಕೆ 625ಕ್ಕೆ 621 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿರುತ್ತಾರೆ, ರಿಫಾ : 615/625, ವೈಷ್ಣವಿ ಜೆ ಕೆ : 614/625, ನಿಶಾ ಯು ಜಿ : 605/625, ರೀಫಾ : 605/625 ಇವರುಗಳು 600ಕ್ಕೂ ಹೆಚ್ಚು ಅಂಕ ಪಡೆದಿರುತ್ತಾರೆ.ಒಟ್ಟು 18 ಡಿಸ್ಟಿಂಕ್ಷನ್, 30ಕ್ಕೂ ಹೆಚ್ಚು ವಿದ್ಯಾರ್ಥಿಗಳು 500ಕ್ಕೂ ಹೆಚ್ಚಿನ ಅಂಕ ಪಡೆದಿರುವುದು ಶಾಲೆಗೆ ಮತ್ತು ಊರಿಗೆ ಹೆಮ್ಮೆಯ ವಿಷಯ..lಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು
ಸರ್ಕಾರಿ ಪ್ರೌಢಶಾಲಾ ಸಿಬ್ಬಂದಿವರ್ಗ, ಎಸ್ ಡಿ ಎಂ ಸಿ ಅಧ್ಯಕ್ಷರು-ಸದಸ್ಯರು, ದಾನಿಗಳು, ಪ್ರೋತ್ಸಹ ನೀಡಿದ ಎಲ್ಲಾ ಗ್ರಾಮಸ್ಥರಿಗೆ ಶಾಲಾ ಹಳೆ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆಗಳು.
