Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪೊಲೀಸರ ಕಣ್ಣು ನಿಮ್ಮ ವಾಹನದ ಮ್ಯಾಲೆ!

ತೀರ್ಥಹಳ್ಳಿ ಪೊಲೀಸರ ಕಣ್ಣು ನಿಮ್ಮ ವಾಹನದ ಮ್ಯಾಲೆ!
– ಸಂಚಾರಿ ನಿಯಮ ಉಲ್ಲಂಘಿಸಿದರೆ ದಂಡ ಗ್ಯಾರಂಟಿ
– ಡಿ.ಎಲ್, ತ್ರಿಬ್ಬಲ್ ರೈಡಿಂಗ್, ಕಾನೂನು ಉಲ್ಲಂಘನೆ ವಿರುದ್ದ ಕಾರ್ಯಾಚರಣೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಚಾಲಕರ ಹಾಗೂ ಮಾಲೀಕರ ಮೇಲೆ ವಿಶೇಷ ಕಾರ್ಯಾಚರಣೆ ಕೈಗೊಂಡು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ತೀರ್ಥಹಳ್ಳಿ ಪಟ್ಟಣದಲ್ಲಿ ವಾಹನ ನಿಯಮ ಗಾಳಿಗೆ ತೂರುತ್ತಿರುವುದು ಕಂಡು ಬರುತ್ತಿದೆ. ಅದರಲ್ಲೂ ಯುವ ಜನತೆ ಅತೀ ವೇಗದ ಚಾಲನೆ, ತ್ರಿಬ್ಬಲ್ ರೈಡಿಂಗ್ ಸೇರಿ ಅನೇಕ ನಿಯಮ ಪಾಲನೆ ಮಾಡುತ್ತಿಲ್ಲ ಎಂಬ ಆರೋಪದ ನಡುವೆ ತೀರ್ಥಹಳ್ಳಿ ಪೊಲೀಸರು ಇದೀಗ ಪಟ್ಟಣ ಸೇರಿ ಹಳ್ಳಿಗಳಲ್ಲೂ ಕಣ್ಣಿಡಲಿದ್ದಾರೆ. ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲಿಸಲು ತೀರ್ಥಹಳ್ಳಿ ಪೊಲೀಸ್ ಮನವಿ ಮಾಡಿದೆ.

ಪೊಲೀಸರ ಕಣ್ಣು ಈಗ ವಾಹನ ಮೇಲೆ!

ನಿಷೇಧಿತ ವಲಯಗಳಲ್ಲಿ ಪಾರ್ಕಿಂಗ್, ಡಿ. ಎಲ್ ಇಲ್ಲದೆ ಚಾಲನೆ, ಹೆಲೈಟ್ ರಹಿತ ಚಾಲನೆ ಪ್ರಕರಣ, ಒನ್ ವೇ, ನೋಎಂಟ್ರಿ ಪ್ರದೇಶದಲ್ಲಿ ವಾಹನ ಚಾಲನೆ, ಸಮರ್ಪಕ ನಂಬರ್ ಪ್ಲೇಟ್ ಇಲ್ಲದಿರುವುದು,, ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಯ ಪ್ರಕರಣ, ಟಿಂಟ್ ಅಳವಡಿಕೆ, ಸೀಟ್ ಬೆಲ್ಟ್ ಇಲ್ಲದೆ ಸಾಗುವುದು, ಬೈಕ್‌ನಲ್ಲಿ ತ್ರಿವಳಿ ಸವಾರಿ, ವ್ಹಿಲಿಂಗ್ ಪ್ರಕರಣದ ಮೇಲೆ ಪೊಲೀಸರು ಗಮನ ವಹಿಸಲಿದ್ದಾರೆ.

ಪಾರ್ಕಿಂಗ್ ವ್ಯವಸ್ಥೆ ಇಲ್ಲ..!

ತೀರ್ಥಹಳ್ಳಿ ತಾಲೂಕು ಅತೀ ಹೆಚ್ಚು ವಾಹನ ಇರುವ ತಾಲೂಕು. ಕಾರು, ಬೈಕ್ ಮನೆಗೆ ಎರಡೆರಡು ಇದೆ. ಆದರೆ ತೀರ್ಥಹಳ್ಳಿ ಆಡಳಿತ ಹಾಗೂ ಶಾಸಕರು ಈವರೆಗೆ ತೀರ್ಥಹಳ್ಳಿ ಪಾರ್ಕಿಂಗ್ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿದ್ದಾರೆ. ಪ್ರತಿ ದಿನ ಪ್ರವಾಸಿಗರು ಸೇರಿ ಸಾವಿರಾರು ವಾಹನ ತೀರ್ಥಹಳ್ಳಿಗೆ ಬರುತ್ತವೆ. ಆದರೆ ಸರಿಯಾದ ಪಾರ್ಕಿಂಗ್ ವ್ಯವಸ್ಯೆ ಇಲ್ಲ. ಕೆಲವೊಮ್ಮೆ ಇಡೀ ಪಟ್ಟಣದಲ್ಲಿ ವಾಹನ ನಿಲ್ಲಿಸಲು ಜಾಗವೇ ಇರುವುದಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.