Categories
ತೀರ್ಥಹಳ್ಳಿ

ಕನ್ನಡ ಕಂಪು ಪಸರಿಸಿದ ತೀರ್ಥಹಳ್ಳಿ ಸಾಹಿತ್ಯ ಸಮ್ಮೇಳನ!

ಕನ್ನಡ ಕಂಪು ಪಸರಿಸಿದ ತೀರ್ಥಹಳ್ಳಿ ಸಾಹಿತ್ಯ ಸಮ್ಮೇಳನ!
– ಯುವ ಜನರಿಗೆ ಸಾಹಿತ್ಯ ಪಸರಿಸಬೇಕು: ಆರಗ
– ಸಮ್ಮೇಳನಕ್ಕೆ ಉತ್ತಮ ಜನ ಸ್ಪಂದನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯುತ್ತಿದೆ. ಇಡೀ ಸಮ್ಮೇಳನ ಕನ್ನಡ ಸಾಹಿತ್ಯದ ಕಂಪು ಪಸರಿಸಿದೆ. ಅಧ್ಯಕ್ಷರ ಭಾಷಣ ಮಾಡಿದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಚೆನ್ನಾಗಿ ಆಯೋಜನೆ ಮಾಡಲಾಗಿದೆ ಎಂದರು. ಸಾಹಿತ್ಯ ಮಾನವೀಯ ಮೌಲ್ಯವನ್ನು ಅರಳಿಸಬೇಕು. ನಮ್ಮ ಹೃದಯವನ್ನು ಸ್ವಚ್ಛಗೊಳಿಸಬೇಕು. ಹಿಂಸಾಚಾರ, ಜಗತ್ತಿನ ವಿದ್ಯಾಮಾನಗಳನ್ನು ನೋಡಿದಾಗ ಎಲ್ಲಿ ಹೋಗುತ್ತಿದೆ ಸಮಾಜ ಎಂಬ ಆತಂಕ ಇದೆ. ಈ ನಿಟ್ಟಿನಲ್ಲಿ ಯುವ ಜನರಿಗೆ ಸಾಹಿತ್ಯ ತಲುಪಿಸಬೇಕಿದೆ ಎಂದರು.

ತೀರ್ಥಹಳ್ಳಿಯಲ್ಲಿ ನೆನಪು ಮಾಡಿಕೊಳ್ಳಬೇಕು. ಸಾಹಿತ್ಯ, ನಾಡು ನುಡಿಗೆ ನಮ್ಮವರ ಕೊಡುಗೆ ಅಪಾರ. ಇಲ್ಲಿನ ಮಣ್ಣು ಪವಿತ್ರವಾದುದು. ಇಲ್ಲಿನ ಬಗ್ಗೆ ಸಂಶೋಧನೆ ಮಾಡಬೇಕು. ನಾವು ಹುಟ್ಟಿದ ಬಗ್ಗೆ ಹೆಮ್ಮೆ ಪಡಬೇಕು. ನವೀನ್ ಕುಮಾರ್ ನನ್ನ ಸ್ನೇಹಿತ. ಒಳ್ಳೆಯ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದರು. ಸಾಹಿತ್ಯ ಚಟುವಟಿಕೆ ಬೆಳೆಯಬೇಕು. ಸಾಹಿತ್ಯವನ್ನು ನಾವೆಲ್ಲ ಬೆಳೆಸಬೇಕು. ಕಸ್ತೂರಿ ರಂಗನ್ ವರದಿಯನ್ನು ನಾವು ಪರಿಸರ ಹಾಳಾಗುವ ದೃಷ್ಟಿಯಿಂದ ವಿರೋಧಿಸಿದ್ದೇವೆ. ಅರಣ್ಯ ಕಾಯ್ದೆಗಳು ಮಲೆನಾಡ ಬದುಕನ್ನು ಕಸಿದಿದೆ ಎಂದರು.

ಸಮ್ಮೇಳನ ಅಧ್ಯಕ್ಷರಾದ ನವೀನ್ ಕುಮಾರ್ ಮಾತನಾಡಿ, ತೀರ್ಥಹಳ್ಳಿ ಮತ್ತು ತಮ್ಮ ಸಾಹಿತ್ಯ ಒಡನಾಟ ಹಂಚಿಕೊಂಡರು.
ಸಾಹಿತ್ಯ ಕ್ಷೇತ್ರದ ಪ್ರಮುಖರಾದ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ್, ಸಹಕಾರಿಗಳಾದ ನಾಗರಾಜ್ ಶೆಟ್ಟಿ, ಮುನ್ನೂರು ಮೋಹನ್ ಶೆಟ್ಟಿ, ಕೌಲಾನಿ ಧರ್ಮಯ್ಯ, ಗೀತಾ ರಮೇಶ್, ಆಡಿನಸರ ಸತೀಶ್, ಸತೀಶ್, ಮಹಾಬಲೇಶ್ವರ ಹೆಗಡೆ, ಶರತ್ ಕಲ್ಕೋಡು ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.