Categories
ತೀರ್ಥಹಳ್ಳಿ

ತೀರ್ಥಹಳ್ಳಿ ಸಹ್ಯಾದ್ರಿ ಶಾಲೆ ಬಾಲಕಿಯರು ಚಾಂಪಿಯನ್!

ತೀರ್ಥಹಳ್ಳಿ ಸಹ್ಯಾದ್ರಿ ಶಾಲೆ ಬಾಲಕಿಯರು ಚಾಂಪಿಯನ್!
– ಬಾಲಕಿಯರ ಗುಂಪು ಆಟಗಳಲ್ಲಿ ಸಮಗ್ರ ಪ್ರಶಸ್ತಿ
– ಸಹ್ಯಾದ್ರಿ ಶಾಲೆ ಮಕ್ಕಳು ಡಿವಿಜನ್ ಮಟ್ಟಕ್ಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಬಾಲಕಿಯರ ಗುಂಪು ಆಟಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸಹ್ಯಾದ್ರಿ ಪ್ರೌಢಶಾಲೆ ಕ್ರೀಡೆಯಲ್ಲೂ ಉತ್ತಮ ಸಾಧನೆ ಮಾಡಿದೆ. ಸೆಪ್ಟೆಂಬರ್ 7ಮತ್ತು 8ರಂದು ಸರ್ಕಾರಿ ಪ್ರೌಢಶಾಲೆ ಕಡ್ತೂರಿನಲ್ಲಿ ನಡೆದ ವಲಯ ಮತ್ತು ತಾಲ್ಲೂಕು ಮಟ್ಟದ ಬಾಲಕಿಯರ ಗುಂಪು ಆಟಗಳಲ್ಲಿ ಸಹ್ಯಾದ್ರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ವಲಯ ಮಟ್ಟದಲ್ಲಿ ಬಾಲಕಿಯರ ವಾಲಿಬಾಲ್ ಪ್ರಥಮ, ತ್ರೋಬಾಲ್ ಪ್ರಥಮ ಬಾಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಥ್ರೋಬಾಲ್ ದ್ವೀತೀಯ ಸ್ಥಾನ ಮತ್ತು ವಾಲಿಬಾಲ್ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಹಾಗೂ ಬಾಲಕಿಯರ ಗುಂಪು ಆಟಗಳ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಪ್ರತಿಭಾವಂತ ಕ್ರೀಡಾಪಟುಗಳನ್ನು ಹಾಗೂ ಇವರನ್ನು ತರಬೇತಿಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಜಗದೀಶ್ ಎಂ ಎಸ್*ಇವರನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಆಡಳಿತಾಧಿಕಾರಿಗಳು,ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.

“ಸಹ್ಯಾದ್ರಿ ಶಾಲೆ ಮಕ್ಕಳು ಡಿವಿಜನ್ ಗೆ”

ಸಹ್ಯಾದ್ರಿ ಶಾಲೆ, ಕುಶಾವತಿಯ ಮಕ್ಕಳು ಬಾಲಕಿಯರ ವಾಲಿಬಾಲ್ ಆಟದಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸುವುದರ ಜೊತೆಗೆ ವಿದ್ಯಾರ್ಥಿನಿಯರು ಡಿವಿಜನ್ ನಲ್ಲಿ ಆಡಲು ಅರ್ಹತೆಯನ್ನು ಪಡೆದಿರುತ್ತಾರೆ. ಮಕ್ಕಳಿಗೂ ಹಾಗೂ ಇವರನ್ನು ತರಬೇತಿಗೊಳಿಸಿದಂತಹ H.R ಶ್ರೀಧರ ರವರಿಗೆ ಶಾಲೆಯ ಆಡಳಿತ ಮಂಡಳಿ ,ಆಡಳಿತಾಧಿಕಾರಿಗಳು ಹಾಗೂ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಇದನ್ನೂ ಓದಿ : ಬೈಕ್ ಇಂಜಿನ್ ಒಳಗೆ ಇತ್ತು ಹಾವು!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.