Categories
ತೀರ್ಥಹಳ್ಳಿ

ಚೆಸ್: ರಾಷ್ಟ್ರ ಮಟ್ಟದಲ್ಲಿ ಮಿನುಗುತ್ತಿರುವ ತೀರ್ಥಹಳ್ಳಿ ಪ್ರತಿಭೆಗಳು!

ಚೆಸ್: ರಾಷ್ಟ್ರ ಮಟ್ಟದಲ್ಲಿ ಮಿನುಗುತ್ತಿರುವ ತೀರ್ಥಹಳ್ಳಿ ಪ್ರತಿಭೆಗಳು!
– ತೀರ್ಥಹಳ್ಳಿಯ ವಾಗ್ದೇವಿ ಪ್ರೌಢ ಶಾಲೆಯ ತೇಜಸ್ ರಾಷ್ಟ್ರಮಟ್ಟಕ್ಕೆ ಆಯ್ಕೆ
– ಸಹ್ಯಾದ್ರಿ ಪ್ರೌಢಶಾಲೆ ವಿದ್ಯಾರ್ಥಿನಿಯರ ಸಾಧನೆ

NAMMUR EXPRESS NEWS
ತೀರ್ಥಹಳ್ಳಿ: ಬೆಂಗಳೂರಲ್ಲಿ ನಡೆದ ರಾಜ್ಯ ಮಟ್ಟದ 17 ವರ್ಷದೊಳಗಿನ ಚೆಸ್ ಸ್ಪರ್ಧೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಸರ್ಕಾರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಮನೋಹರ್ ಅವರ ಪುತ್ರ ತೇಜಸ್ ಚೆಸ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ತೀರ್ಥಹಳ್ಳಿಯ ವಾಗ್ದೇವಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ ತೇಜಸ್ ಸತತ ಎರಡನೇ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾನೆ. ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ತೇಜಸ್ ಮತ್ತು ಇವರ ತಂದೆಯಾದ ಅಧ್ಯಾಪಕ ಮನೋಹರ್ ಅವರಿಗೆ ವಾಗ್ದೇವಿ ಸಂಸ್ಥೆ, ಎಲ್ಲಾ ತೀರ್ಥಹಳ್ಳಿ ಸಮಸ್ತ ಜನತೆ ಅಭಿನಂದನೆಗಳನ್ನು ಅರ್ಪಿಸಿದ್ದಾರೆ.

ಪಾವನಿ ಮತ್ತು ಗಾನವಿ ಚೆಸ್ ಪ್ರತಿಭೆಗಳು!
– ಸಹೋದರಿಯರ ಸಾಧನೆಗೆ ನಮ್ಮದೊಂದು ಸಲಾಂ

ಇತ್ತೀಚಿಗೆ ಶಿಕಾರಿಪುರದ ಲಯನ್ಸ್ ಬನಸಿರಿ ವಿದ್ಯಾಸಂಸ್ಥೆ ಯಲ್ಲಿ ನಡೆದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಶಿವಮೊಗ್ಗ ಜಿಲ್ಲಾಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಪಾವನಿ (ಅಂಡರ್ 14 ಪ್ರಥಮ ) ಹಾಗೂ ಗಾನವಿ (ಅಂಡರ್ 17 ದ್ವಿತೀಯ ) ಈ ಇಬ್ಬರು ಸಹೋದರಿ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಒಂದೇ ಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರು ಚೆಸ್ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದ್ದು , ಈ ಪ್ರತಿಭಾನ್ವಿತ ಕ್ರೀಡಾ ಪ್ರತಿಭೆಗಳನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಆಡಳಿತ ಅಧಿಕಾರಿಗಳು ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿದ್ದಾರೆ. ಈಗಾಗಲೇ ಹತ್ತಾರು ಪಂದ್ಯಾವಳಿಗಳಲ್ಲಿ ಈ ಸಹೋದರಿಯರು ತೀರ್ಥಹಳ್ಳಿಗೆ ಹೆಮ್ಮೆ ತಂದಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.