Categories
ತೀರ್ಥಹಳ್ಳಿ

ಧರ್ಮಸ್ಥಳ ಪರ ಮಳೆಯಲ್ಲೇ ಸಾವಿರಾರು ಜನರ ಹೋರಾಟದ ನಡಿಗೆ!

ಧರ್ಮಸ್ಥಳ ಪರ ಮಳೆಯಲ್ಲೇ ಸಾವಿರಾರು ಜನರ ಹೋರಾಟದ ನಡಿಗೆ!
– ತೀರ್ಥಹಳ್ಳಿಯಲ್ಲಿ ಬೃಹತ್ ಪ್ರತಿಭಟನಾ ಸಭೆ: ಪಟ್ಟಣ ಬಂದ್
– ಪಕ್ಷಾತೀತವಾಗಿ ನಡೆದ ಹೋರಾಟದಲ್ಲಿ 3 ಸಾವಿರ ಮಂದಿ ಭಾಗಿ
– ಆರಗ, ವಸಂತ್ ಗಿಳಿಯಾರ್ ಸೇರಿ ಅನೇಕರ ಭಾಷಣ

NAMMUR EXPRESS NEWS
ತೀರ್ಥಹಳ್ಳಿ: ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರಲು ಒಳ ಸಂಚು ನಡೆಸಿರುವವರ ವಿರುದ್ಧ ಇದೀಗ ತೀರ್ಥಹಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಮಳೆಯಲ್ಲಿ ಸುಮಾರು 3000 ಮಂದಿ ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆ ಪರ ದನಿ ಎತ್ತಿದರು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಪ್ರಮುಖರು, ಕಾರ್ಯಕರ್ತರು ಹೋರಾಟಕ್ಕೆ ಕೈ ಜೋಡಿಸಿದರು.
ತೀರ್ಥಹಳ್ಳಿಯ ಆರ್.ಎಂ.ಸಿಯ ಆವರಣದಿಂದ ಹೊರಟಂತಹ ಪ್ರತಿಭಟನೆ ಸೊಪ್ಪುಗುಡ್ಡೆ ರಾಘವೇಂದ್ರ ಅವರ ಸಂಚಾಲಕತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ಆರಗ ಜ್ಞಾನೇಂದ್ರ, ಡಾ. ಆರ್ ಎಂ ಮಂಜುನಾಥ್ ಗೌಡ, ಹಾಗೂ ಡಾ. ಜೀವoದರ್ ಜೈನ್, ಗೀತಾ ರಮೇಶ್, ಹೆದ್ದೂರು ನವೀನ್, ಕುಕ್ಕೆ ಪ್ರಶಾಂತ್, ಚಂದವಳ್ಳಿ ಸೋಮಶೇಖರ್ ಸೇರಿ ಧರ್ಮಸ್ಥಳ ಭಕ್ತಾದಿಗಳು, ಸಾವಿರಾರು ಮಂದಿ ಧರ್ಮಸ್ಥಳ ಪರ ಭಕ್ತರು ಈ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಮುಖ ಭಾಷಣಕಾರರಾಗಿ ಧರ್ಮಸ್ಥಳ ಸಂರಕ್ಷಣಾ ಸಮಿತಿಯ ವಸಂತ ಗಿಳಿಯಾರ್ ಮಾತನಾಡಿ, ಧರ್ಮಸ್ಥಳ ರಕ್ಷಣೆಗೆ ನಾವೆಲ್ಲರೂ ಜತೆಯಾಗೋಣ. ಧರ್ಮಸ್ಥಳ ಷಡ್ಯಂತ್ರ ತಡೆಯೋಣ ಎಂದು ಕರೆ ನೀಡಿದರು.

ಒಂದು ಗಂಟೆಗಳ ಕಾಲ ಅಂಗಡಿ, ಮುಂಗಟ್ಟು ಬಂದ್!

ಪ್ರತಿಭಟನೆ ಅಂಗವಾಗಿ ಅಂಗಡಿ ಮುಗ್ಗಟ್ಟುಗಳನ್ನು ಒಂದು ಗಂಟೆಯವರೆಗೆ ಮುಚ್ಚಲಾಗಿತ್ತು. ಸಾವಿರಾರು ಮಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೊಪ್ಪ ಸರ್ಕಲ್ ಯಿಂದ, ಚರ್ಚ್ ಸರ್ಕಲ್ ವರೆಗೆ ಹಾಗೂ ಆಜಾದ್ ರಸ್ತೆ ವರೆಗೆ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಪ್ರತಿಭಟನೆ ಮುಗಿಯುವವರೆಗೂ ಕೂಡ ರಸ್ತೆ ಸಂಚಾರ ಬಂದ್ ಮಾಡಲಾಗಿತ್ತು. ವಾಹನ ಸಂಚಾರ ಮಾಡುವ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಎದುರಾಗಿತ್ತು. ಸಾವಿರಾರು ಭಕ್ತಾದಿಗಳು ಸೇರ್ಪಡೆಯಾಗಿರುವುದರಿಂದ ಯಶಸ್ವಿಯ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯನ್ನು ನೆರವೇರಿಸಲಾಯಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.