ತೀರ್ಥಹಳ್ಳಿಗೆ ಬಂದಿದೆ ಖತರ್ನಾಕ್ ಗ್ಯಾಂಗ್!
* ಹೊರ ರಾಜ್ಯದ ಕಳ್ಳರಿಂದ, ಕೋಣಂದೂರಿನ ಅಂಗಡಿಯಲ್ಲಿ ಕಮಾಲ್
* ದಿನಸಿ ಅಂಗಡಿ, ಬಟ್ಟೆ ಅಂಗಡಿಗಳೇ ಮೈನ್ ಟಾರ್ಗೆಟ್,ಎಚ್ಚರ,!
* ದೇವಂಗಿ ಬಳಿ ವ್ಯಾಗನಾರ್ ಕಾರು ಅಪಘಾತ!
ವರದಿ: ಉಮೇಶ್ ದೇಮ್ಲಾಪುರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಪಟ್ಟಣದಲ್ಲಿ ಆಗಸ್ಟ್ 18ರ ಮಧ್ಯಾಹ್ನ ಸುಮಾರು 3 ಗಂಟೆಗೆ ವ್ಯಾಗನಾರ್ ಕಾರಿನಲ್ಲಿ ಬಂದ ಮೂರು ಜನ ಅಂತರ್ ರಾಜ್ಯ ಕಳ್ಳರು ದಿನಸಿ ಅಂಗಡಿಗೆ ಬಂದು ಮೋಸ ಮಾಡಿ ಪರಾರಿ ಆಗಿದ್ದಾರೆ.
500 ರೂಪಾಯಿಗಳನ್ನು ಕೊಟ್ಟು 50 ರೂಪಾಯಿಯ ವಸ್ತು ಖರೀದಿಸಿ ಹಣ ಕೊಟ್ಟ ನಂತರ ನನಗೆ ಇದು ಬೇಡ ಎಂದು ವಾಪಸ್ ಕೊಟ್ಟು ಹಣವನ್ನು ಪುನಃ ತನ್ನ ಜೇಬಿಗೆ ಇಳಿಸಿಕೊಂಡು ನನಗೆ ಇದರಲ್ಲಿ ಬೇರೆ ಬ್ರಾಂಡ್ ಕೊಡಿ ಎಂದು ಕೇಳಿ ದ ಬೇರೆ ಬ್ರಾಂಡ್ ಕೊಟ್ಟ ಬಳಿಕ ನಾನು ಕೊಟ್ಟ 500 ರೂಪಾಯಿಯ ಚಿಲ್ಲರೆ ಕೊಡಿ ಎಂದು ಕೇಳಿದ್ದಾರೆ, ಇದರಿಂದ ಗಲಿಬಿಲಿಗೊಂಡ ಅಂಗಡಿ ಮಾಲೀಕ 500 ರೂಪಾಯಿ ಚಿಲ್ಲರೆಯನ್ನ ಕೊಟ್ಟು ಕಳುಹಿಸಿರುತ್ತಾರೆ. ನಂತರ ಅವರು ಆಲೋಚಿಸಿದಾಗ ನನಗೆ ಅವರು ಮೋಸ ಮಾಡಿದ್ದಾರೆ ಎಂದು ಮನಗಂಡು ಅವರನ್ನು ಹಿಂಬಾಲಿಸಿಕೊಂಡು ಬಂದಾಗ ಆ ಕಳ್ಳರು ಸಿ ಕೆ ರೋಡ್ ನಲ್ಲಿರುವ ದಿನಸಿ ಅಂಗಡಿಯಲ್ಲಿ ಇದೇ ಪ್ರಕ್ರಿಯೆಯನ್ನು ಮಾಡುತ್ತಿದ್ದರು. ತಕ್ಷಣ ಎಚ್ಚುತ್ತಾ ದಿನಸಿ ಅಂಗಡಿ ಮಾಲೀಕ ಗದರಿಸಿ ಕಳಿಸಿದ್ದಾರೆ, ನಂತರ ಈ ಚೋರರು ವ್ಯಾಗನಾರ್ ಕಾರಿನಲ್ಲಿ ತೀರ್ಥಹಳ್ಳಿ ಮಾರ್ಗವಾಗಿ ವೇಗದಿಂದ ತೆರಳಿದ್ದಾರೆ. ಅಲ್ಪಸ್ವಲ್ಪ ಕನ್ನಡ ಮಾತನಾಡುತ್ತಾರೆ ಹಿಂದಿಯನ್ನು ಬಹುತೇಕ ಮಾತನಾಡಿ ಜನರನ್ನು ಗಲಿಬಿಲಿ ಗೊಳಿಸುತ್ತಾರೆ, ಒಂದೇ ಬಾರಿ ಇಬ್ಬರು ಮಾತನಾಡಿ ಅಂಗಡಿ ಮಾಲೀಕನನ್ನು ವಿಚಲಿತಗೊಳಿಸುತ್ತಾರೆ.
ಒಂದು ಕಡೆ ಮನೆಗಳ್ಳರ ಹಾವಳಿಯಾದರೆ ಇನ್ನೊಂದು ಕಡೆ ಡಿಜಿಟಲ್ ಚೋರರು ಜನರ ನೆಮ್ಮದಿ ಕೆಡಿಸುತ್ತಿದ್ದಾರೆ ಎಲ್ಲೆಂದರಲ್ಲಿ ಕಳ್ಳರು ಇರುವ ಪರಿಸ್ಥಿತಿಯಲ್ಲಿ ಇರುವಾಗ ಈ ಚಿಲ್ಲರೆ ಕಳ್ಳರ ಹಾವಳಿಯು ಮಿತಿಮೀರುವಂತೆ ಕಾಣುತ್ತಿದೆ, ಪೋಲಿಸ್ ಇಲಾಖೆಯು ಶೀಘ್ರವಾಗಿ ಈ ಕಳ್ಳರನ್ನು ಬಂಧಿಸಿ ಈ ಮೋಸದ ಜಾಲಕ್ಕೆ ಕಡಿವಾಣ ಹಾಕಬೇಕಾಗಿ ಜನರಲ್ಲಿ ಆಗ್ರಹ ಕೇಳಿ ಬರುತ್ತಿದೆ.
ದೇವಂಗಿ ಬಳಿ ವ್ಯಾಗನಾರ್ ಕಾರು ಅಪಘಾತ!
ತೀರ್ಥಹಳ್ಳಿ ತಾಲೂಕಿನ ದೇವಂಗಿ ಗ್ರಾಮದ ಬಳಿ ಆಗಸ್ಟ್ 18ರಂದು ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ತೀರ್ಥಹಳ್ಳಿಯಿಂದ ಕೊಪ್ಪ ಮಾರ್ಗವಾಗಿ ತೆರಳುತ್ತಿದ್ದ ವ್ಯಾಗನಾರ್ ಕಾರಿನಲ್ಲಿ ಮೂರು ಜನ ಪ್ರಯಾಣಿಸುತ್ತಿದ್ದರು, ಚಾಲಕನ ನಿಯಂತ್ರಣ ತಪ್ಪಿ ವ್ಯಾಗನಾರ್ ಕಾರು ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಕ್ಕದಲ್ಲಿದ್ದ ಧರೆಗೆ ಅಪ್ಪಳಿಸಿ ನಿಂತಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತರಹದ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
