ಟಾಪ್ 3 ನ್ಯೂಸ್…
– ತೀರ್ಥಹಳ್ಳಿ ಪಟ್ಟಣದಲ್ಲಿ 3 ದಿನ ನೀರು ಸರಬರಾಜು ಸ್ಥಗಿತ
– ಆಗುಂಬೆ ದೇಗುಲ ಕದ್ದವ 2 ಗಂಟೆಯೊಳಗೆ ಅರೆಸ್ಟ್!
– ಯಾರದೋ ತಪ್ಪಿಗೆ ಜೀವ ಕಳೆದುಕೊಂಡ ಯುವತಿ
NAMMUR EXPRESS NEWS
ತೀರ್ಥಹಳ್ಳಿ: ಪಟ್ಟಣ ಪಂಚಾಯಿತಿಯ ನೀರು ಸರಬರಾಜು ಘಟಕದ ಜಾಕ್ವೆಲ್ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 10,11 ಹಾಗೂ 12 ರಂದು ಮೂರು ದಿನಗಳ ಕಾಲ ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ನೀರು ಸರಬರಾಜು ವ್ಯವಸ್ಥೆ ಸ್ಥಗಿತವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗರಾಜ್ ವಿನಂತಿಸಿದ್ದಾರೆ.
ಆಗುಂಬೆ ದೇಗುಲ ಕದ್ದವ 2 ಗಂಟೆಯೊಳಗೆ ಅರೆಸ್ಟ್!
ತೀರ್ಥಹಳ್ಳಿ: ಆಗುಂಬೆ ಶ್ರೀ ರಾಮ ಮಂದಿರ ದೇವಸ್ಥಾನದಲ್ಲಿ ದಿನಾಂಕ 08/09/2025ರಂದು ರಾತ್ರಿ ಕಳ್ಳರು ದೇವಸ್ಥಾನದ ಬಾಗಿಲು ಒಡೆದು ಶ್ರೀ ರಾಮ ದೇವರ ವಿಗ್ರಹ, ದೇವರ ಕೈಯಲ್ಲಿ ಇದ್ದ ಬಿಲ್ಲು, ಕಾಣಿಕೆ ಹುಂಡಿಯಲ್ಲಿದ್ದ ಹಣ ವನ್ನು ಕಳ್ಳತನ ಮಾಡಿದ್ದೂ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶ್ರೀ ಮಿಥುನ್ ಕುಮಾರ್ ಪೊಲೀಸ್ ಅಧಿಕ್ಷಕರು ಶ್ರೀ ಕಾರ್ಯಪ್ಪ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಶ್ರೀ ರಮೇಶ್ ಪೊಲೀಸ್ ಅಧಿಕ್ಷಕರು, ಶ್ರೀ ಅರವಿಂದ್ ಕರಗುಜ್ಜಿ, ಪೊಲೀಸ್ ಉಪ ಅಧಿಕ್ಷಕರು ತೀರ್ಥಹಳ್ಳಿ ಉಪ ವಿಭಾಗ ಶ್ರೀ ಇಮ್ರಾನ್ ಬೇಗ್ ವೃತ್ತ ನೀರಿಕ್ಷಕರು ಮಾಳೂರು ವೃತ್ತ (ಪ್ರಭಾರ) ತೀರ್ಥಹಳ್ಳಿ ಠಾಣೆ, ರವರ ಮಾರ್ಗದರ್ಶನದಲ್ಲಿ ಶ್ರೀ ಶಿವನ ಗೌಡ ಪೊಲೀಸ್ ಉಪ ನಿರೀಕ್ಷಕರು ಆಗುಂಬೆ ಠಾಣೆ ರವರ ನೇತೃತ್ವದಲ್ಲಿ ಆಗುಂಬೆ ಠಾಣೆ ಸಿಬ್ಬಂದಿಗಳಾದ ಅನಿಲ್, ಸುರೇಶ್, ರಮೇಶ್, ನಾಗಾರ್ಜುನ, ಅವಿನಾಶ್, ಶ್ರೀ ಮತಿ ಚೇತನ, ಆದರ್ಶ ರವರು ಪ್ರಕರಣ ದಾಖಲಾದ ಎರಡು ಗಂಟೆಯೊಳಗೆ ಆರೋಪಿ ಮನೋಜ್@ ಗುಂಡ ತಂದೆ ಕಣ್ಣನ್ @ ಏಳು ಮಲೈ ವಾಸ ಸಂಕದ ಹೊಳೆ ತೀರ್ಥಹಳ್ಳಿ ಎಂಬಾತನನ್ನು ಬಂಧಿಸಿ ಕಳುವಾದ ಮಾಲನ್ನು ವಶಕ್ಕೆ ಪಡೆಯಲಾಯಿತು.
ಯಾರದೋ ತಪ್ಪಿಗೆ ಜೀವ ಕಳೆದುಕೊಂಡ ಯುವತಿ!
ಶಿವಮೊಗ್ಗ: ಮಲವಗೊಪ್ಪದ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಇನ್ನೇನು 15 ದಿನಗಳಲ್ಲಿ ಹನೆಮಣೆ ಏರಬೇಕಿದ್ದ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಮೃತ ಯುವತಿ ಕವಿತಾ ತನ್ನ ಸಹೋದರನ ಜೊತೆ ಬೈಕ್ನಲ್ಲಿ ಹೋಗುತ್ತಿದ್ದಾಗ ಈ ಆಘಾತ ಸಂಭವಿಸಿದೆ. ಇನ್ನೊಂದು ಬೈಕ್ನಲ್ಲಿ ಮಿತಿಮೀರಿದ ಲಗೇಜ್ ತುಂಬಿಕೊಂಡ ವ್ಯಕ್ತಿ ಇವರು ಹೋಗುತ್ತಿದ್ದ ಬೈಕ್ಗೆ ತಾಕಿಸಿದ್ದಾನೆ. ಈ ವೇಳೆ ಯುವತಿಯ ಸಹೋದರ ಫುಟ್ಪಾತ್ ಮೇಲೆ ಬಿದ್ದರೆ, ಆಕೆ ರಸ್ತೆಗೆ ಬಿದ್ದಿದ್ದಳು. ಈ ವೇಳೆ ಹಿಂದೆ ಇದ್ದ ಸಿಟಿ ಬಸ್ ಆಕೆಯ ಮೇಲೆ ಹರಿದಿದೆ. ಪರಿಣಾಮ ಕವಿತಾ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ
