ಹೈಕೋರ್ಟ್‌ನಲ್ಲಿ ಶಾಸಕ ರಾಜೇಗೌಡಗೇ ಮತ್ತೆ ಹಿನ್ನಡೆ
* ಚುನಾವಣಾ ಅರ್ಜಿ ವಜಾಗೊಳಿಸಬೇಕೆಂದು 5ನೇ ಬಾರಿ ಸಲ್ಲಿಸಿದ್ದ ಅರ್ಜಿಗಳು ವಜಾ
* ಮಾಜಿ ಶಾಸಕ ಡಿ ಎನ್ ಜೀವರಾಜ್ ಸಲ್ಲಿಸಿದ್ದ ಚುನಾವಣಾ ಅರ್ಜಿ
NAMMMUR EXPRESS NEWS
ಎನ್ ಆರ್ ಪುರ: ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡರಿಗೆ ಹೈಕೋರ್ಟ್‌ನಲ್ಲಿ ಸತತ 5 ನೇ ಬಾರಿ ಹಿನ್ನಡೆಯಾಗಿದೆ.
ಹೌದು ವಿಧಾನಸಭಾ ಚುನಾವಣಾ ಫಲಿತಾಂಶ ಸಂಬಂಧ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಡಿ ಎನ್ ಜೀವರಾಜ್ ಚುನಾವಣಾ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು,ಈ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಶೃಂಗೇರಿ ಕ್ಷೇತ್ರದ ಹಾಲಿ ಶಾಸಕ ಟಿ ಡಿ ರಾಜೇಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು ಆದರೆ ಹೈಕೋರ್ಟ್ ಈ ಅರ್ಜಿಯನ್ನು ವಜಾ ಮಾಡಿದೆ.ಈ ಮೂಲಕ ಶಾಸಕ ರಾಜೇಗೌಡರಿಗೆ ಮತ್ತೆ ಹಿನ್ನಡೆಯಾಗಿದೆ.
* ಪದೇ ಪದೇ ಅರ್ಜಿಯನ್ನು ಕೋರ್ಟ್ ವಜಾಗೊಳಿಸದರು ಮತ್ತೆ ಮತ್ತೆ ಅರ್ಜಿ ಸಲ್ಲಿಸುತ್ತಿರುವ ಶಾಸಕ
ಮಾಜಿ ಶಾಸಕ ಡಿ ಎನ್ ಜೀವರಾಜ್ ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ವಜಾ ಮಾಡಬೇಕೆಂದು ಈ ಹಿಂದೆಯೂ 4 ಬಾರಿ ಶಾಸಕ ಟಿ ಡಿ ರಾಜೇಗೌಡ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದು,4 ಬಾರಿಯೂ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿ ಡಿ ಎನ್ ಜೀವರಾಜ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಎತ್ತಿಹಿಡಿದಿತ್ತು.
ಮೊದಲು 2024 ರ ಸೆ.27 ರಂದು ಅರ್ಜಿ ವಜಾಗಾಗಿ ಶಾಸಕ ಟಿ ಡಿ ರಾಜೇಗೌಡ ಅರ್ಜಿ ಸಲ್ಲಿಸಿ ಹೈಕೋರ್ಟ್ ಅದನ್ನು ವಜಾಗೊಳಿಸಿತ್ತು, ಅಂದು ವಕೀಲರಾದ ಅಭಿಷೇಕ್ ಮನುಸಿಂಗ್ವಿ ಮತ್ತು ಕಪಿಲ್ ಸಿಬಲ್ ರಾಜೇಗೌಡ ಪರವಾಗಿ ವಾದಿಸಿ ಹಿನ್ನಡೆ ಅನುಭವಿಸಿದ್ದರು.
ನಂತರ 2024 ನ.29 ರಂದು ಸಲ್ಲಿಸಿದ್ದ ಸ್ಟ್ರೈಕಿಂಗ್ ಆಫ್ ಪ್ಲೀಡಿಂಗ್ ಅರ್ಜಿಯನ್ನೂ ಸಹ ಹೈಕೋರ್ಟ್ ವಜಾಗೊಳಿಸತ್ತು, ನಂತರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಶಾಸಕರಿಗೆ 2025 ರ ಜ.03 ರಂದು ಎರಡನೇ ಬಾರಿಗೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಡಿ ಎನ್ ಜೀವರಾಜ್ ಸಲ್ಲಿಸಿದ್ದ ಅರ್ಜಿ ತನಿಖಾಗಬೇಕು ಎಂದು ತೀರ್ಪು ನೀಡಿತ್ತು. ಇದಾದ ಬಳಿಕವೂ ಹೈಕೋರ್ಟ್‌ಗೆ ಮತ್ತೆ ಅರ್ಜಿ ಸಲ್ಲಿಸಿ ಅರ್ಜಿ ವಜಾಗೊಂಡು 3 ನೇ ಬಾರಿ ಶಾಸಕರಿಗೆ ಹಿನ್ನಡೆಯಾಗಿತ್ತು.
2 ಬಾರಿ ಸುಪ್ರೀಂ ಕೋರ್ಟ್ ಹಾಗೂ 3 ಬಾರಿ ಹೈಕೋರ್ಟ್‌ನಲ್ಲಿ ಸೇರಿದಂತೆ ಒಟ್ಟು 5 ಬಾರಿ ಶಾಸಕರು ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಪ್ರಕರಣದ ತೀರ್ಪು ಏನಾಗಲಿದೆ,ಯಾರ ಪರವಾಗಿರಲಿದೇ ಎಂಬುದು ಈಗ ಕುತೂಹಲ ಮೂಡಿಸಿದೆ.
