ಟಾಪ್ 3 ನ್ಯೂಸ್ ತೀರ್ಥಹಳ್ಳಿ
– ವರಾಹಿ ಅಣೆಕಟ್ಟು 7 ವರ್ಷಗಳ ಬಳಿಕ ಗರಿಷ್ಠ ನೀರು!
– ಶ್ರೇಯಸ್ ಅರೋಗ್ಯ ವಿಚಾರಿಸಿದ ಸಿರಿಬೈಲ್ ಧರ್ಮೇಶ್
– ಸೆ. 6ಕ್ಕೆ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟ
NAMMUR EXPRESS NEWS
ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಯಡೂರಿನ ವರಾಹಿ ಅಣೆಕಟ್ಟು 7 ವರ್ಷಗಳ ಬಳಿಕ ಅತಿ ಹೆಚ್ಚು ನೀರು ಶೇಖರಣೆಗೊಂಡಿದ್ದು, ಅಣೆಕಟ್ಟಿನಿಂದ ನೀರನ್ನು ಹೊರಬಿಡಲಾಗುತ್ತಿದೆ. ನೀರು ಹೊರ ಬರುತ್ತಿರುವ ದೃಶ್ಯ ಇದೀಗ ಇಲ್ಲಾ ಕಡೆ ವೈರಲ್ ಆಗುತ್ತಿದೆ. ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ನದಿ ಹಳ್ಳ ಕೊಳ್ಳಗಳು ತುಂಬಿವೆ.
ಶ್ರೇಯಸ್ ಅರೋಗ್ಯ ವಿಚಾರಿಸಿದ ಸಿರಿಬೈಲ್ ಧರ್ಮೇಶ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಅರ್ಬನ್ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೇಯಸ್ ರಾವ್ ಸೀಬಿನಕೆರೆ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿದು ಶಿವಮೊಗ್ಗದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಶ್ರೀ ಎಸ್.ಕೆ ಧರ್ಮೇಶ್ ಸಿರಿಬೈಲ್ ಅವರಿಗೆ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸೆ. 6ಕ್ಕೆ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟ
ತೀರ್ಥಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಸೀಬಿನಕೆರೆ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ (ಕುವೆಂಪು), ತೀರ್ಥಹಳ್ಳಿ ಹಾಗೂ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕೋಳಿಕಾಲುಗುಡ್ಡ ಮೂರು ಶಾಲೆಗಳ ಆಶ್ರಯದಲ್ಲಿ
2025-26ನೇ ಸಾಲಿನ 14 ವರ್ಷದೊಳಗಿನ ಬಾಲಕ / ಬಾಲಕಿಯರ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟ 06-09-2025 ಡಾ. ಯು.ಆರ್. ಅನಂತಮೂರ್ತಿ ಸರ್ಕಾರಿ ಪ್ರೌಢಶಾಲಾ ಕ್ರೀಡಾಂಗಣ, ತೀರ್ಥಹಳ್ಳಿಯಲ್ಲಿ ನಡೆಯಲಿದೆ. ಸರ್ವರನ್ನು ಆಯೋಜಕರು ಸ್ವಾಗತಿಸಿದ್ದಾರೆ.
