Categories
ತೀರ್ಥಹಳ್ಳಿ

ಟಾಪ್ 4 ನ್ಯೂಸ್ ತೀರ್ಥಹಳ್ಳಿ

ಟಾಪ್ 4 ನ್ಯೂಸ್ ತೀರ್ಥಹಳ್ಳಿ

– ಆಗುಂಬೆ ಲಯನ್ಸ್ ಕ್ಲಬ್ ವತಿಯಿಂದ ಮಾನವೀಯ ಕಾರ್ಯ!
– ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ಮತ್ತು ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಲ್ಪೋನ್ಸೋ ಪಿಂಟೋ ಅವರಿಗೆ ಸನ್ಮಾನ
– ತೀರ್ಥಹಳ್ಳಿ: ಆರೋಗ್ಯ ಇಲಾಖಾ ನೌಕರರ ಸಂಘದಿಂದ ನೂತನ ವೈದ್ಯಾಧಿಕಾರಿ ನೇಮಕ
– ಶಿವಮೊಗ್ಗ : ಜಿಲ್ಲಾ ಪೊಲೀಸ್ ವತಿಯಿಂದ ನಾಗರೀಕ ಬಂದೂಕು ತರಬೇತಿ ಶಿಬಿರ ಆಯೋಜನೆ

NAMMUR EXPRESS NEWS
ತೀರ್ಥಹಳ್ಳಿ: ಆಗುಂಬೆ ಬಸ್ ನಿಲ್ದಾಣ ಸಮೀಪದಲ್ಲಿ ಸುಮಾರು ಮೂರ್ನಾಲ್ಕು ದಿನಗಳಿಂದ ಉಕ್ಕಿನ ಕೆಲಸಕ್ಕೆ ಆಗಮಿಸಿದ ಮಧ್ಯಪ್ರದೇಶ ಮೂಲದ ಕುಟುಂಬಗಳಿಗೆ ಆಗುಂಬೆ ಲಯನ್ಸ್ ವತಿಯಿಂದ ಅಧ್ಯಕ್ಷರಾದ ಮಂಜುನಾಥ್ ಆಚಾರ್ಯ ಅವರ ನೇತೃತ್ವದಲ್ಲಿ ಕಾರ್ಯದರ್ಶಿಗಳಾದ ಸುಧೀಂದ್ರ ಮಲ್ಯ ಸಹಯೋಗದೊಂದಿಗೆ ಗೃಹೋಪಯೋಗಿ ನಿತ್ಯ ಬಳಕೆ ಬಟ್ಟೆ ಮತ್ತು ಆಹಾರ ಸಾಮಗ್ರಿ ಗಳನ್ನು ಮಕ್ಕಳಿಗೆ ಆಟಿಕೆ, ಸಿಹಿ ತಿಂಡಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶಶಿ ಭೂಷಣ್ ಬಾಯರ್ ಆಗುಂಬೆ, ಪ್ರಶಾಂತ್ ಕಾಳಿಂಗ ಫೌಂಡೇಶನ್ ,ಗಿರೀಶ್ ಕಲ್ಕೋಡು,ಅರುಣ್ ಗುಡ್ಡೆಕೇರಿ, ಆಗುಂಬೆ ರೆಸಿಡೆನ್ಸಿ ಮಾಲೀಕರು ಲಕ್ಷ್ಮಿನಾರಾಯಣ ಮಲ್ಯ ಇವರು ಸಲಹೆ ಸಹಕಾರ ನೀಡಿದರು. ಸುಬ್ರಮಣ್ಯ ಮಳಲಿ, ಶಿವಕುಮಾರ್, ರಾಘವೇಂದ್ರ ಗಾರ್ಡರಗೆದ್ದೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

– ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ಮತ್ತು ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಲ್ಪೋನ್ಸೋ ಪಿಂಟೋ ಅವರಿಗೆ ಸನ್ಮಾನ

ಅಲ್ಪೋನ್ಸೋ ಪಿಂಟೋ ಸೇವಾ ನಿವೃತ್ತಿ ಸನ್ಮಾನಿಸಿ ಅಭಿನಂದಿಸಿದ ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ಮತ್ತು ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ಅನೇಕ ವರ್ಷಗಳ‌ ಕಾಲ, ಶಿಕ್ಷಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ದಿನಾಂಕ 31.03.2025 ರಂದು ಸೇವಾ ನಿವೃತ್ತಿಯಾದ ಶ್ರೀ ಅಲ್ಪೋನ್ಸೋ ಪಿಂಟೋ ಅವರಿಗೆ ಮೇಗರವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅನೇಕ ಸಂಘ ಸಂಸ್ಥೆಗಳು, ಸ್ನೇಹಿತರು, ಹಿತೈಷಿಗಳು, ಮೇಗರವಳ್ಳಿ ಶಾಲಾ ಬಳಗ ಅನೇಕ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರು ಹಾಜರಿದ್ದು ಸನ್ಮಾನಿಸಿದರು.
ಈ ಸಮಯದಲ್ಲಿ ಮೇಗರವಳ್ಳಿ ಯಾವುದೇ ಇಲಾಖೆಯ ನೌಕರರು ವರ್ಗಾವಣೆಯಾದಾಗ, ನಿವೃತ್ತಿ ಆದಾಗ, ಸಾಧನೆ ಮಾಡಿದಾಗ ಸದಾ ನೌಕರರನ್ನು ಗೌರವಿಸುವ ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ಮತ್ತು ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ನ ವಿಜೇತ್ ಶೆಟ್ಟಿ ಎಂ ಕೆ ಮತ್ತು ಸ್ನೇಹ ಬಳಗ ಆಲ್ಪೋನ್ಸೋ ಪಿಂಟೋ ಅವರನ್ನು ಗೌರವಿಸಿ, ಸನ್ಮಾನಿಸಿ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು..

– ತೀರ್ಥಹಳ್ಳಿ: ಆರೋಗ್ಯ ಇಲಾಖಾ ನೌಕರರ ಸಂಘದಿಂದ ನೂತನ ವೈದ್ಯಾಧಿಕಾರಿ ನೇಮಕ

ತೀರ್ಥಹಳ್ಳಿ : ರೇಡಿಯಾಲಜಿಸ್ಟ್ ತಜ್ಞ ವೈದ್ಯಾಧಿಕಾರಿಗಳಾಗಿ ಜೆ ಸಿ ಆಸ್ಪತ್ರೆಗೆ ನೂತನವಾಗಿ ನೇಮಕವಾಗಿರುವ ಡಾ.ಅಕ್ಷತಾ ವಿ ಮತ್ತು ಪ್ರಾ.ಆ.ಕೇಂದ್ರ ಕಟಗಾರಿಗೆ ಗುತ್ತಿಗೆ ಆಧಾರದ ವೈದ್ಯಾಧಿಕಾರಿಯಾಗಿ ನೇಮಕವಾಗಿರುವ ಡಾ.ವಿಜಯ ರಾಜ್ ರನ್ನು ಜೆ ಸಿ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ, ಜೆ ಸಿ ಆಸ್ಪತ್ರೆಯಲ್ಲಿ ಬಹಳ ಕಾಲದಿಂದ ಖಾಲಿಯಿದ್ದ ರೇಡಿಯಾಲಜಿಸ್ಟ್ ಹುದ್ದೆಗೆ ನೇಮಕವಾಗಿರುವ ಡಾ.ಅಕ್ಷತಾರವರು ಈ ಹಿಂದೆ ಸೊರಬ ತಾಲ್ಲೂಕಿನ ಪ್ರಾ ಆ ಕೇಂದ್ರದ ವೈದ್ಯಾಧಿಕಾರಿಗಳಾಗಿ, ಅಲ್ಲಿನ ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಜನಪರ ಕಾಳಜಿಯಿಂದ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಪ್ರಾ.ಆ.ಕಟಗಾರಿಗೆ ಆಗಮಿಸಿರುವ ಡಾ.ವಿಜಯ್ ರಾಜ್ ಕೂಡ ಯುವ ಉತ್ಸಾಹಿಗಳಿದ್ದಾರೆ. ಇವರಿಂದ ನಮ್ಮ ತಾಲ್ಲೂಕಿನ ಬಡ ವರ್ಗ,ಅಸಹಾಯಕ ಸಮುದಾಯಕ್ಕೆ ಉತ್ತಮ ಸೇವೆ ದೊರಕುವ ವಿಶ್ವಾಸವಿದೆ. ನೂತನ ವೈದ್ಯಾಧಿಕಾರಿಗಳಿಂದ ಜನರಿಗೆ ಹೆಚ್ಚಿನ ವೈದ್ಯಕೀಯ ಸೇವೆ ದೊರಕಲಿ. ಅದರಿಂದ ಒಳ್ಳೆಯ ಹೆಸರುಗಳಿಸಿ ಜನ ಮನ್ನಣೆ ಪಡೆಯಲಿ ಎಂದು ಹಾರ್ದಿಕವಾಗಿ ಶುಭ ಹಾರೈಸುತ್ತಾ ಆತ್ಮೀಯವಾಗಿ ಸ್ವಾಗತಿಸುವುದಾಗಿ ತಿಳಿಸಿದರು.

– ಶಿವಮೊಗ್ಗ : ಜಿಲ್ಲಾ ಪೊಲೀಸ್ ವತಿಯಿಂದ ನಾಗರೀಕ ಬಂದೂಕು ತರಬೇತಿ ಶಿಬಿರ ಆಯೋಜನೆ

ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ, ದಿನಾಂಕ: 18-04-2025 ರಿಂದ 27-04-2025 ರವರೆಗೆ ಶಿವಮೊಗ್ಗ ನಗರದಲ್ಲಿ ನಾಗರೀಕ ಬಂದೂಕು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಶಿಬಿರದಲ್ಲಿ ಭಾಗವಹಿಸಲು ಇಚ್ಛೆಯುಳ್ಳ ಆಸಕ್ತ ನಾಗರೀಕರು ತಮ್ಮ ಸಮೀಪದ ಪೊಲೀಸ್ ಠಾಣೆಗಳಲ್ಲಿ ಅಥವಾ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಡಿಎಆರ್) ಸಾಗರ ರಸ್ತೆ, ಶಿವಮೊಗ್ಗ ಕಛೇರಿಯಿಂದ ಅರ್ಜಿಗಳನ್ನು ಪಡೆದುಕೊಂಡು, ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ, ಸದರಿ ಅರ್ಜಿಯೊಂದಿಗೆ ಇತ್ತೀಚಿನ 02 ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ನ ನಕಲು ಪ್ರತಿಯೊಂದಿಗೆ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ದಿನಾಂಕ: 17-04-2025 ರೊಳಗೆ ಅರ್ಜಿಯನ್ನು ಸಲ್ಲಿಸಲು ಕೋರಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.