ಟಾಪ್ ನ್ಯೂಸ್ ತೀರ್ಥಹಳ್ಳಿ
– ಇಂದು ತೀರ್ಥಹಳ್ಳಿಯಲ್ಲಿ ನಂದಿ ರಥಯಾತ್ರೆ!
– ಸಂಜೆ 5:30ಕ್ಕೆ ಆಗುಂಬೆ ಬಸ್ ಸ್ಟಾಂಡ್ ನಿಂದ ಮೆರವಣಿಗೆ
– ತೋಟಗಾರಿಕೆ ಬೆಳೆಗಳ ಕುರಿತು ಶೈಕ್ಷಣಿಕ ಪ್ರವಾಸ
– ಮೊದಲು ಹೆಸರು ನೋಂದಾಯಿಸಿದವರಿಗೆ ಮೊದಲ ಅವಕಾಶ
NAMMUR EXPRESS NEWS
ಗೋ ಸೇವಾ ಗತಿನಿಧಿ ಕರ್ನಾಟಕ ರಾಧ ಸುರಬಿ ಗೋ ಮಂದಿರ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಬ್ರಹ್ಮಗಿರಿ ಗೋವಿನ ತೋಟ ಇವರಿಂದ ನಂದಿ ರಥಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಂದಿ ರಥಯಾತ್ರೆ ತೀರ್ಥಹಳ್ಳಿಯಲ್ಲಿ 16 ಜನವರಿ ಗುರುವಾರ ಇಂದು ಸಂಜೆ 5:30ಕ್ಕೆ ಆಗುಂಬೆ ಬಸ್ಟಾಂಡ್ ನಿಂದ ರಥಬೀದಿಯ ಶ್ರೀರಾಮಚಂದ್ರಪುರ ಮಠದ ಆವರಣದವರೆಗೆ ನಂದಿ ರಥಯಾತ್ರೆ ಹಾಗೂ ನಂದಿ ಪೂಜಾ ಕಾರ್ಯಕ್ರಮ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಆಯೋಜಕರು ಕೋರಿದ್ದಾರೆ.
ತೋಟಗಾರಿಕೆ ಬೆಳೆಗಳ ಕುರಿತು ಶೈಕ್ಷಣಿಕ ಪ್ರವಾಸ
– ಜ. 19 ರಂದು ತೋಟಗಾರಿಕೆ ಬೆಳೆಗಳ ರೋಗ ರುಜಿನಗಳ ಬಗ್ಗೆ ಸಮಗ್ರ ಮಾಹಿತಿ ತಿಳಿಯುವ ಪ್ರವಾಸ
ಮಲ್ನಾಡ್ ಕ್ಲಬ್ (ರಿ) ತೀರ್ಥಹಳ್ಳಿ, ವಿಹಂಗಮ ಪರಿಸರಾಧ್ಯಯನ ಕೇಂದ್ರ, ಲಯನ್ಸ್ ಕ್ಲಬ್ ತೀರ್ಥಹಳ್ಳಿ ಹಾಗೂ ಕೃಷಿಕ ಸಮಾಜ ತೀರ್ಥಹಳ್ಳಿ ಇವರುಗಳ ಸಹಯೋಗದಲ್ಲಿ ಅಡಿಕೆ, ಕಾಳು ಮೆಣಸು, ಕಾಫಿ, ಏಲಕ್ಕಿ ಇತ್ಯಾದಿ ತೋಟಗಾರಿಕೆ ಬೆಳೆಗಳ ಕುರಿತು ಹಾಗೂ ರೋಗ ರುಜಿನಗಳ ಬಗ್ಗೆಯೂ ಸಮಗ್ರ ಮಾಹಿತಿಯನ್ನು ಪಡೆಯಲು ದಿನಾಂಕ 19-01-2025 ನೇ ಭಾನುವಾರ ಒಂದು ದಿನದ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ. ಪ್ರವಾಸ ಬೆಳಗ್ಗೆ 7:30ಕ್ಕೆ ಸರಿಯಾಗಿ ಪ್ರಾರಂಭವಾಗುತ್ತದೆ. ಕೊಪ್ಪ ಮಾರ್ಗದಲ್ಲಿರುವ ಹೊಳೆಕೊಪ್ಪ ಸತ್ಯಮೂರ್ತಿಯವರ ಹಡಗಿನಮಕ್ಕಿ ತೋಟಕ್ಕೆ ಭೇಟಿಕೊಟ್ಟು ಅಲ್ಲಿಯೇ ಬೆಳಗಿನ ಉಪಹಾರವನ್ನು ಮುಗಿಸಿ ಅವರ ಅಡಿಕೆ ಕಾಳು ಮೆಣಸು ಹಾಗೂ ಕಾಫಿ ಬೆಳೆಗಳನ್ನು ಹಾಗೂ ಇತರ ಬೆಳೆಗಳನ್ನು ವೀಕ್ಷಿಸಿ ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡು ಅಲ್ಲಿಂದ ಕೊಪ್ಪ – ಬಿಜಿ ಕಟ್ಟೆ ಮಾರ್ಗವಾಗಿ ತಲುವಾನಿ ಎಸ್ಟೇಟ್ ತಲುಪುವುದು. ತಲುವಾನಿ ಪ್ರಕಾಶ್ ಮತ್ತು ಸಹೋದರರ ದೊಡ್ಡ ಹಿಡುವಳಿಯ ಕಾಫಿ ತೋಟ ಅಡಿಕೆ ತೋಟ ಹಾಗೂ ಹಳದಿ ರೋಗ ಪೀಡಿತ ಅಡಿಕೆಯ ತೋಟದಲ್ಲಿ ಉಪಬೆಳೆಯಾಗಿ ಬೆಳೆದಿರುವ ಕಾಫಿ ತೋಟವನ್ನು ಹಾಗೂ ಕಾಳುಮೆಣಸು ಇತ್ಯಾದಿ ಬೆಳೆಗಳನ್ನು ವೀಕ್ಷಿಸಿ ಅವರುಗಳೊಂದಿಗೆ ವಿಚಾರ ವಿನಿಮಯ ನಡೆಸಿ ಅಲ್ಲಿಯೇ ಭೋಜನವನ್ನು ಮಾಡಿಕೊಂಡು ಮಾರ್ಗ ಮಧ್ಯದಲ್ಲಿ ಕೆಳಕೊಡಿಗೆ ಎಸ್ಟೇಟ್ ನ ಸತ್ಯ ಪ್ರಕಾಶರ ಹಳದಿ ಎಲೆ ರೋಗ ಬಂದಿರುವ ಅಡಿಕೆ ತೋಟದಲ್ಲಿ ಕಾಳುಮೆಣಸು ಹಾಗೂ ಕಾಫಿಯನ್ನು ಮುಖ್ಯ ಬೆಳೆಯಾಗಿ ಬದಲಾಯಿಸಿಕೊಂಡಿರುವ ತೋಟವನ್ನು ವೀಕ್ಷಿಸಿ ಸಂಜೆಯ ಹೊತ್ತಿಗೆ ಊರಿಗೆ ಮರಳುವುದು. ದಾರಿ ಉದ್ದಕ್ಕೂ ಸುಂದರ ರಮಣೀಯ ಭೂ ದೃಶ್ಯಗಳನ್ನು ಸವಿಯುವುದು. ಈ ಕೃಷಿ ಪ್ರವಾಸಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ. ಕೇವಲ 40 ಜನರಿಗೆ ಮಾತ್ರ ಅವಕಾಶವಿರುತ್ತದೆ. ಪುರುಷರು ಮಹಿಳೆಯರು ಮತ್ತು ಮಕ್ಕಳು ಹಾಗೂ ಆಸಕ್ತ ಸಾರ್ವಜನಿಕರು ಎಂದಿನಂತೆ ಭಾಗವಹಿಸಬಹುದು. ಮೊದಲು ಹೆಸರು ನೋಂದಾಯಿಸಿದವರಿಗೆ ಮೊದಲ ಅವಕಾಶ. ಎಲ್ಲಾ ಖರ್ಚು ವೆಚ್ಚಗಳು ಲಾಭ ನಷ್ಟವಿಲ್ಲದೆ ಸಮಾನವಾಗಿ ನಿರ್ವಹಿಸಲ್ಪಡುತ್ತದೆ. ಆಸಕ್ತರು ಮಲ್ನಾಡ್ ಕ್ಲಬ್ ನ ಮ್ಯಾನೇಜರ್ ಹತ್ತಿರ ಮುಂಗಡ ರೂ. 1000.00 ಹಣ ಕೊಟ್ಟು ಹೆಸರು ನೊಂದಾಯಿಸಬೇಕು. ಪ್ರವೇಶಕ್ಕೆ ಕೊನೆಯ ದಿನಾಂಕ 17.01.2025.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ಎಸ್. ರಾಘವೇಂದ್ರ
ಮಲ್ನಾಡ್ ಕ್ಲಬ್ (ರಿ) ತೀರ್ಥಹಳ್ಳಿ
98803 83789.
ಕೆ.ಆರ್.ದಯಾನಂದ್ ವಿಹಂಗಮ ಪರಿಸರಾಧ್ಯಾಯನ ಕೇಂದ್ರ : 94485 02641
ಎನ್ ಎಸ್ ಮುರಳಿ ಅಧ್ಯಕ್ಷರು ಲಯನ್ಸ್ ಕ್ಲಬ್ ತೀರ್ಥಹಳ್ಳಿ: 94484 44622
ಎಚ್ ಎಮ್ ಸತೀಶ್, ಅಧ್ಯಕ್ಷರು ಕೃಷಿಕ ಸಮಾಜ ತೀರ್ಥಹಳ್ಳಿ: 94499 54017
ಶರತ್ ಮ್ಯಾನೇಜರ್ ಮಲ್ನಾಡ್ ಕ್ಲಬ್ ತೀರ್ಥಹಳ್ಳಿ : 82963 16835
