Categories
ಕರಾವಳಿ

ಜ. 18ಕ್ಕೆ ಪಟ್ಲದಲ್ಲಿ ಪಾಡ್ದನ ಆಧಾರಿತ ಪರಮಾತ್ಮೆ ಪಂಜುರ್ಲಿ ತುಳು ನಾಟಕ

ಜ. 18ಕ್ಕೆ ಪಟ್ಲದಲ್ಲಿ ಪಾಡ್ದನ ಆಧಾರಿತ ಪರಮಾತ್ಮೆ ಪಂಜುರ್ಲಿ ತುಳು ನಾಟಕ
– ಪಟ್ಲ ಸ್ಪೋರ್ಟ್ಸ್ ಕ್ಲಬ್ 26ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜನೆ
– ಕಾರ್ಯಕ್ರಮಗಳ ವಿವರಣೆ ಹೇಗಿದೆ ನೋಡಿ? ಸರ್ವರಿಗೂ ಸ್ವಾಗತ!

NAMMUR EXPRESS NEWS
ಉಡುಪಿ: ಹಿರೇಬೆಟ್ಟು, ಅಂಚೆ ಪಟ್ಲ, ವಯಾ ಪರ್ಕಳ ಪಟ್ಲ ಸ್ಪೋರ್ಟ್ಸ್ ಕ್ಲಬ್ 26ನೇ ವಾರ್ಷಿಕೋತ್ಸವದ ಪ್ರಯುಕ್ತ ಪಟ್ಲ ಹಳೆಯ ಶ್ರೀ ಗಣಪತಿ ಶಾಲಾ ವಠಾರದಲ್ಲಿ
ಜ. 18ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ 26ನೇ ವಾರ್ಷಿಕೋತ್ಸವ ಸಮಾರಂಭ ಜೊತೆಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಳಾಯಿ ಕುಡ್ಲ ಅರ್ಪಿಸುವ, ಪಾಡ್ದನ ಆಧಾರಿತ ಪರಮಾತ್ಮೆ ಪಂಜುರ್ಲಿ ತುಳು ನಾಟಕವನ್ನು ರಾತ್ರಿ 9 ಗಂಟೆಗೆ ಆಯೋಜಿಸಲಾಗಿದೆ.

ಕಾರ್ಯಕ್ರಮಗಳ ವಿವರಣೆ ಹೀಗಿದೆ!

ಪೂಜಾ ಸಂಕಲ್ಪ, ಮಹಿಳಾ ಭಜನಾ ಮಂಡಳಿಗಳಿಂದ ‘ಕುಣಿತ ಭಜನೆ’, ಮಂಗಳಾರತಿ ಮತ್ತು ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ದಿವಾಕರ ಭಟ್ ಲಾಗ್ವಣ್ ಕರ್, ಪಟ್ಲ ಅವರಿಂದ ಪೌರೋಹಿತ್ಯ ಹಾಗೂ ಪುಷ್ಪಾ ಸಂಜೀವ ಮೂಲ್ಯ, ಪಟ್ಲ ಶ್ರೀ ಪ್ರಸನ್ನ ಆಚಾರ್ಯ, ಪಟ್ಲ ಅವರಿಂದ ಸಿಹಿತಿಂಡಿ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
26ನೇ ವಾರ್ಷಿಕೋತ್ಸವದ ಪ್ರಯುಕ್ತ ಸಂಜೆ 06.30ರಿಂದ ಸಭಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ‘ಶ್ರೀ ನವಾಕ್ಷರೀ’, ಬಾರ್ಕೂರು ಎನ್. ಆರ್. ದಾಮೋದರ ಶರ್ಮಾ ಅವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.ಜೊತೆಗೆ ಹತ್ತು ಹಲವು ಮುಖ್ಯ ಅತಿಥಿಗಳು ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಪಾಡ್ದನ ಆಧಾರಿತ ತುಳು ನಾಟಕ ಪರಮಾತ್ಮೆ ಪಂಜುರ್ಲಿ!

ರಾತ್ರಿ 07.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶಾಲಾ ಮಕ್ಕಳಿಂದ, ಊರ ಪ್ರತಿಭೆಗಳಿಂದ “ನೃತ್ಯ ವೈವಿಧ್ಯಗಳು” ಮತ್ತು ಸಂಘದ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 08.30ರಿಂದ ನಾಗೇಶ್ ಕುಲಾಲ್ ನಿರ್ಮಾಣ & ಸಾರಥ್ಯದ, ಕಾರ್ತಿಕ್ ಕುಲಾಲ್ ಅವರ ನಿರ್ದೇಶನದ, ತುಳು ಯಕ್ಷ ಬ್ರಹ್ಮ ಮಾಧವ ಭಂಡಾರಿ ಕುಳಾಯಿ ಸಾಹಿತ್ಯ & ಸಂಭಾಷಣೆಯಲ್ಲಿ ರಚಿಸಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಳಾಯಿ ಅರ್ಪಿಸುವ ಪಾಡ್ದನ ಆಧಾರಿತ ತುಳು ನಾಟಕ ಪರಮಾತ್ಮೆ ಪಂಜುರ್ಲಿ ಅದ್ದೂರಿಯಾಗಿ ನಡೆಯಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.