Categories
ತೀರ್ಥಹಳ್ಳಿ

ಟಾಪ್ ನ್ಯೂಸ್ ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಜಿಂಕೆ, ಕಾಡು ಕೋಣದ ಕೊಂಬು ವಶ!
– ನೂರಾರು ವರ್ಷದ ಹಿಂದಿನ ವಸ್ತು ಸೀಜ್: ವಯಸ್ಸಾದ ಮನೆ ಮಾಲೀಕನ ಬಂಧನ ಖಂಡಿಸಿ ಪ್ರತಿಭಟನೆ
– ಆಗುಂಬೆ ಭಾಗದಲ್ಲಿ ಕಾಡುಕೋಣ ಕಾಟ!
– ಘನ ತ್ಯಾಜ್ಯ ವಸ್ತು ನಿರ್ವಹಣೆಗೆ ಹೊಸ ಯಂತ್ರದ ವಾಹನ

NAMMUR EXPRESS NEWS
ತೀರ್ಥಹಳ್ಳಿ ತಾಲೂಕು ಹಣಗೆರೆ ಸಮೀಪದ ಬಸವನಗದ್ದೆಯ ಬ್ರಾಹ್ಮಣ ಕುಟುಂಬದ ಪ್ರಸನ್ನ ಎಂಬುವವರ ಮನೆಯಲ್ಲಿ ನೂರಾರು ವರ್ಷಗಳ ಹಿಂದಿನ ಕಾಡಿನಲ್ಲಿ ಬಿದ್ದ ಜಿಂಕೆ ಕೊಂಬು ಮತ್ತು ಕಾಡುಕೋಣದ ಕೊಂಬುಗಳಿದ್ದಿದ್ದನ್ನು ಅರಣ್ಯಾಧಿಕಾರಿ ಗಳು ವಶಪಡಿಸಿಕೊಂಡಿದ್ದಾರೆ.

ಆರಗ ನೇತೃತ್ವದಲ್ಲಿ ಪ್ರತಿಭಟನೆ

ನೂರಾರು ವರ್ಷದ ಹಿಂದಿನ ಪ್ರಾಣಿ ವಸ್ತು ಇಟ್ಟ ಆರೋಪದ ಮೇಲೆ ಕುಟುಂಬದ ವಯಸ್ಸಾಗಿ ಅನಾರೋಗ್ಯದಲ್ಲಿರುವ ಯಜಮಾನನ್ನು ಬಂಧಿಸಲು ಮುಂದಾಗಿದ್ದನ್ನು ಖಂಡಿಸಿ ಶಾಸಕ ಆರಗ ಜ್ಞಾನೇಂದ್ರರವರು ಗ್ರಾಮಸ್ಥರೊಂದಿಗೆ ಅರಣ್ಯಾಧಿಕಾರಿಗಳ ನಡೆ ಖಂಡಿಸಿದ್ದಾರೆ.

ಘನ ತ್ಯಾಜ್ಯ ವಸ್ತು ನಿರ್ವಹಣೆಗೆ ಹೊಸ ಯಂತ್ರದ ವಾಹನ

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ನಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಘನ ತ್ಯಾಜ್ಯ ವಸ್ತು ನಿರ್ವಹಣೆಯ ವಿಲೇವಾರಿ ಯಂತ್ರದ ವಾಹನವನ್ನು ಉದ್ಘಾಟನೆ ಮಾಡಲಾಯಿತು. 26 ಲಕ್ಷ ಮೊತ್ತದ ವೆಚ್ಚದಲ್ಲಿ 6000 ಲೀಟರ್ ನಷ್ಟು ಘನ ತ್ಯಾಜ್ಯ ವಸ್ತು ಶೇಖರಿಸುವ ಅತೀ ದೊಡ್ಡ ವಾಹನವನ್ನು ಉದ್ಘಾಟನೆ ಮಾಡಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.ಪ. ಪಂ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷರಾದ ರೆಹಮಾತುಲ್ಲ ಅಸಾದಿ, ಮುಖ್ಯಾಧಿಕಾರಿ ಕುರಿಯಾಕೋಸ್, ಸದಸ್ಯರುಗಳಾದ ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಮಂಜುಳಾ ನಾಗೇಂದ್ರ, ಜ್ಯೋತಿ ಮೋಹನ್, ಶಬನಮ್, ರತ್ನಾಕರ್ ಶೆಟ್ಟಿ, ಸುಶೀಲ ಶೆಟ್ಟಿ ಸೇರಿ ಹಲವರು ಇದ್ದರು.

ಆಗುಂಬೆ ಭಾಗದಲ್ಲಿ ಕಾಡುಕೋಣ ಕಾಟ!

ತೀರ್ಥಹಳ್ಳಿ ತಾಲೂಕಿನ ಆಗುಂಬೆ ಭಾಗದಲ್ಲಿ ಕಾಡುಕೋಣಗಳ ಕಾಟ ಹೆಚ್ಚಾಗಿದೆ. ಇತ್ತೀಚಿಗೆ ಕುಂದಾದ್ರಿ ಬಿದರಗೋಡು ಭಾಗದಲ್ಲಿ ಕಾಡು ಕೋಣಗಳು ರಸ್ತೆ ಮೇಲೆ ನಿಂತಿರುತ್ತವೆ. ಇತ್ತೀಚಿಗೆ ಬೈಕ್ ಸವಾರರೊಬ್ಬರು ಕಾಡು ಕೋಣಕ್ಕೆ ಹೆದರಿ ಬೈಕ್ ಅಪಘಾತಗೊಂಡ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.