ತೀರ್ಥಹಳ್ಳಿಯಲ್ಲಿ ಕಾಣದ ರಾಜ್ಯೋತ್ಸವದ ರಂಗು!
– ನಾಡ ಹಬ್ಬ ಆಚರಣೆ ಮಂಕು: ಸರ್ಕಾರಿ ಕಚೇರಿಗಳಲ್ಲಿ ಹಾರದ ಬಾವುಟ
– ಮಕ್ಕಳ ಮೆರವಣಿಗೆ: ಸಭಾ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕದಾದ್ಯಂತ ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಘೋಷವಾಕ್ಯ ಮೂಲಕ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ. ಆದರೆ ತೀರ್ಥಹಳ್ಳಿಯಲ್ಲಿ ರಾಜ್ಯೋತ್ಸವದ ರಂಗು ಅಷ್ಟಾಗಿ ಕಾಣಲಿಲ್ಲ. ರಾಜ್ಯದ ಹಲವೆಡೆ, ತಾಲೂಕು ಕೇಂದ್ರ, ಪಟ್ಟಣದಲ್ಲಿ ಸಂಭ್ರಮ ಸಡಗರದಿಂದ ವಿದ್ಯುತ್ ದೀಪ ಅಲಂಕಾರ ಹಾಗೂ ಕನ್ನಡ ಬಾವುಟ, ತಳಿರು ತೋರಣಗಳಿಂದ ಸಿಂಗರಿಸಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ತೀರ್ಥಹಳ್ಳಿ ಪಟ್ಟಣದಲ್ಲಿ ಕನ್ನಡ ಕಹಳೆ ಮೊಳಗಲಿಲ್ಲ. ಸರ್ಕಾರಿ ಕಾರ್ಯಕ್ರಮ ಹೊರತುಪಡಿಸಿದರೆ ಬೇರೆಲ್ಲೂ ರಾಜ್ಯೋತ್ಸವದ ಸಂಭ್ರಮ ಕಾಣಲಿಲ್ಲ. ಬೆಳಗ್ಗೆಯ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಬೆರಳೆಣಿಕೆಯ ಅಧಿಕಾರಿಗಳು, ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹೊರತುಪಡಿಸಿದರೆ, ಇಲಾಖೆಯ ಅಧಿಕಾರಿಗಳು ಇದ್ದು ಚುನಾಯಿತ ಜನಪ್ರತಿನಿಧಿಗಳು ಕಾಣಲಿಲ್ಲ.
ಸರ್ಕಾರಿ ಕಚೇರಿಗಳಲ್ಲಿ ಕನ್ನಡಕ್ಕೆ ಅವಮಾನ
ತೀರ್ಥಹಳ್ಳಿ ಸರ್ಕಾರಿ ಕಚೇರಿಗಳಲ್ಲಿ ಕೂಡ ಸಿಬ್ಬಂದಿ ಕನ್ನಡ ಹಬ್ಬ ಆಚರಣೆ ಮಾಡಲಿಲ್ಲ. ಎಲ್ಲಿಯೂ ಭಾವುಟ, ಅಲಂಕಾರ ಕಾಣಲಿಲ್ಲ.
ತೀರ್ಥಹಳ್ಳಿಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮ
ತೀರ್ಥಹಳ್ಳಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ, ತಹಸೀಲ್ದಾರ್ ಲಿಂಗರಾಜ್, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಮುಖ್ಯ ಅಧಿಕಾರಿ ಕುರಿಯಾಕೋಸ್, ಕರವೇ ಅಧ್ಯಕ್ಷ ಸುರೇಂದ್ರ, ಇಒ ಶೈಲಾ, ಪಟ್ಟಣ ಪಂಚಾಯತ್ ಸದಸ್ಯರಾದ ಗಣಪತಿ, ರತ್ನಾಕರ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.