ಹಳೆ ತುಂಗಾ ಸೇತುವೆ ಮೇಲಿನ ಸಂಚಾರ ನಾಳೆ ಬಂದ್ !
– ಸೇತುವೆ ಮರು ಡಾಂಬರೀಕರಣ: ಸಂಚಾರ ನಿರ್ಬಂಧ
– ಹೊಸ ಸೇತುವೆ ಮೇಲೆ ಸಂಚಾರಕ್ಕೆ ಮನವಿ
NAMMUR EXPRESS NEWS
ತೀರ್ಥಹಳ್ಳಿ: ಪ್ರಸಿದ್ಧ ಜಯಚಾಮರಾಜೇಂದ್ರ ತುಂಗಾ ಕಮಾನು ಸೇತುವೆ ಮರು ಡಾಂಬರೀಕರಣ ಮಾಡಲಾಗುತ್ತಿರುವ ಹಿನ್ನಲೆಯಲ್ಲಿ ಫೆ.14 ರಂದು ಈ ಸೇತುವೆ ಮೇಲೆ ಇಡೀ ದಿನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು, ವಾಹನ ಚಾಲಕರು ಹೊಸದಾಗಿ ನಿರ್ಮಾಣವಾಗಿರುವ ತುಂಗಾ ಸೇತುವೆಯನ್ನು ಸಂಚಾರಕ್ಕೆ ಬಳಸಬೇಕು ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಕುರುವಳ್ಳಿಯಿಂದ ಬಾಳೆಬೈಲುವರೆಗೆ ಹೊಸ ಸೇತುವೆ ನಿರ್ಮಾಣಗೊಂಡಿದ್ದು ಈಗಾಗಲೇ ಸಂಚಾರ ಶುರುವಾಗಿದೆ.
