ಸಹಕಾರಿ ದಿಗ್ಗಜ ವಿಜಯ್ ದೇವ್ ಅವರಿಗೆ ಗೌರವ
– ಶಿವಮೊಗ್ಗ ಜಿಲ್ಲಾ ಕೆಡಿಪಿಗೆ ಬಸವಾನಿ ವಿಜಯ್ ದೇವ್ ನೇಮಕ
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಕೆಡಿಪಿಗೆ ರಾಜ್ಯದ ಹಿರಿಯ ಸಹಕಾರಿಗಳೂ,ಅಪೆಕ್ಸ್ ನಿರ್ದೇಶಕರು ಆದ ಬಸವಾನಿ ವಿಜಯ್ ದೇವ ಅವರನ್ನು ಸರ್ಕಾರ ನಾಮಕರಣ ಮಾಡಿದೆ. ಈ ಮೂಲಕ ಅಭಿವೃದ್ಧಿ ವಿಚಾರದಲ್ಲಿ ಸಲಹೆ ಮಾರ್ಗದರ್ಶನ ನೀಡಬಹುದಾಗಿದೆ. ತ್ರೈಮಾಸಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ವಿವಿಧ ಕ್ಷೇತ್ರಗಳ ಒಟ್ಟು 16 ಮಂದಿಯನ್ನು ಸರ್ಕಾರ ನಾಮಕರಣಗೊಳಿಸಿದೆ. ರಾಜ್ಯದ ಭೂ ಬ್ಯಾಂಕ್ ವತಿಯಿಂದ ವಿಜಯ್ ದೇವ್ ಸಹಕಾರಿ ಕ್ಷೇತ್ರವನ್ನು ಕೆಡಿಪಿ ಯಲ್ಲಿ ಪ್ರತಿನಿಧಿಸಲಿದ್ದಾರೆ.