Categories
ತೀರ್ಥಹಳ್ಳಿ

ಆರಗ ಕಲಾನಾಥ ಸೊಸೈಟಿಗೆ ಸಂದೀಪ್ ಸಾರಥಿ!

ಆರಗ ಕಲಾನಾಥ ಸೊಸೈಟಿಗೆ ಸಂದೀಪ್ ಸಾರಥಿ!
– ಉಪಾಧ್ಯಕ್ಷರಾಗಿ ಪ್ರಕಾಶ್: ಆರಗ ತವರಿನ ಸಹಕಾರಿ ಕಾಂಗ್ರೆಸ್ ಪಾಲು
– ಸಂದೀಪ್ ಅವರಿಗೆ ಸ್ನೇಹಿತರ ಶುಭಾಶಯಗಳು

NAMMUR EXPRESS NEWS
ತೀರ್ಥಹಳ್ಳಿ: ಶತಮಾನೋತ್ಸವ ಇತಿಹಾಸ ಹೊಂದಿರುವ ತೀರ್ಥಹಳ್ಳಿ ತಾಲೂಕಿನ ಪ್ರತಿಷ್ಠಿತ ಆರಗ ಕಲಾನಾಥ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಯುವ ಸಹಕಾರಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಸಂದೀಪ್ ಕಲ್ಗುಂಡಿ, ಉಪಾಧ್ಯಕ್ಷರಾಗಿ ಪ್ರಕಾಶ್ ಆಯ್ಕೆಯಾಗಿದ್ದಾರೆ.ಈ ಮೂಲಕ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರಿನ ಸಹಕಾರಿ ಕಾಂಗ್ರೆಸ್ ಪಾಲಾಗಿದೆ. ಸಹಕಾರಿಯಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ 13 ನಿರ್ದೇಶಕರ ಬಲ ಹೊಂದಿರುವ
ಈ ಸಹಕಾರಿಯಾಲ್ಲಿ ಆರು ಬಿಜೆಪಿ ಬೆಂಬಲಿತ, ಏಳು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿದ್ದು, ಸಂದೀಪ್ ಅವರು ಏಳು ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಸಹಕಾರಿಯಲ್ಲಿ ಈ ಹಿಂದೆ ಶಾಸಕ ಆರಗ ಜ್ಞಾನೇಂದ್ರ, ಮಹಾಬಲೇಶ್ ಸೇರಿದಂತೆ ಕ್ಷೇತ್ರದ ಅನೇಕ ರಾಜಕೀಯ ದಿಗ್ಗಜರುಗಳು ಈ ಸಹಕಾರಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಈ ಪ್ರತಿಷ್ಠಿತ ಸಹಕಾರಿಗೆ ಸಂದೀಪ್ ಕಲ್ಗುಂಡಿ ಅವರು ಎರಡನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.

ಸ್ನೇಹಿತರ ಸಂಭ್ರಮ..!

ಸಂದೀಪ್ ತಾಲೂಕಿನಲ್ಲಿ ಅಪಾರ ಸ್ನೇಹಿತ ವಲಯವನ್ನು ಹೊಂದಿದ್ದು, ಅವರ ಆಯ್ಕೆಗೆ ಸ್ನೇಹಿತ ವರ್ಗ ಸಂತಸ ವ್ಯಕ್ತಪಡಿಸಿದೆ. ಪ್ರಮುಖರಾದ ರಾಜೇಶ್ ಕುಳಗೇರಿ, ಅರ್ಜುನ್ ನಂಟೂರು, ಪ್ರಜ್ವಲ್ ಕುಳಗೇರಿ, ನವೀಶ್ ಸೇರಿದಂತೆ ಹಲವರು ಹಾರ ಹಾಕಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.