Categories
ತೀರ್ಥಹಳ್ಳಿ

ವಿದ್ಯುತ್ ಅಲಂಕಾರದಲ್ಲಿ ಮಿಂದೆದ್ದ ತುಂಗಾ ಸೇತುವೆ!

ವಿದ್ಯುತ್ ಅಲಂಕಾರದಲ್ಲಿ ಮಿಂದೆದ್ದ ತುಂಗಾ ಸೇತುವೆ!
– ತೀರ್ಥಹಳ್ಳಿ ರಸ್ತೆ, ತುಂಗಾ ತೀರ, ರಾಮ ಮಂಟಪ ಜಗಮಗ

NAMMUR EXPRESS NEWS
ತೀರ್ಥಹಳ್ಳಿ ಎಳ್ಳಮಾವಾಸ್ಯೆ ಅಂಗವಾಗಿ ವಿದ್ಯುತ್ ಅಲಂಕಾರ ಮಾಡಲಾಗಿದೆ. ಇಡೀ ಪಟ್ಟಣ ಅಲಂಕಾರದಲ್ಲಿ ಮಿಂದೆದ್ದಿದೆ. ತುಂಗಾ ಸೇತುವೆ ಅಲಂಕಾರ ನೋಡುಗರ ಗಮನ ಸೆಳೆದಿದೆ. ತೀರ್ಥಹಳ್ಳಿ ರಸ್ತೆಗಳು ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತವೆ. ತುಂಗಾ ತೀರ, ರಾಮ ಮಂಟಪ, ನದಿ ತೀರ ಗಮನ ಸೆಳೆದಿದೆ. ಸೇತುವೆ ಅಲಂಕಾರವನ್ನು ಎಸ್. ಎಲ್. ವಿ
ಶ್ರೀ ಲಕ್ಷ್ಮಿ ವೆಂಕಟೇಶ್ವರ ಲೈಟ್ಸ್ ಇವೆಂಟ್ಸ್ ಆಕಾಶ್ ನೆತೃತ್ವದಲ್ಲಿಮಾಡಲಾಗಿದೆ. ರಸ್ತೆಯ ಅಲಂಕಾರವನ್ನು ತೀರ್ಥಹಳ್ಳಿ ಬೆಟ್ಟಮಕ್ಕಿಯ ಎಸ್. ಡಿ. ಎಸ್ ಆದರ್ಶ ಮಾಡಿದ್ದಾರೆ. ರಾಮ ಮಂಟಪ ಅಯ್ಯಪ್ಪ ಸೌಂಡ್ಸ್ ಮಾಡಿದ್ದು ರಾಮ ಮಂಟಪ ಹೊಳೆಯುತ್ತಿದೆ.

ಎಂ ಎಸ್ ಡೆಕೋರೇಟರ್ಸ್ ಅವರು ತುಂಗಾ ನದಿ ತೀರದಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಿಸಿ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. ಗುರುರಾಜ್ ಸೌಂಡ್ಸ್ನ ಶಶಿ ರಾಮೇಶ್ವರ ದೇವಸ್ಥಾನ ಆವರಣವನ್ನು ಅಲಂಕಾರ ಮಾಡಿದ್ದಾರೆ. ಮನು ಸೌಂಡ್ಸ್ ಭಾಸ್ಕರ ಅವರು ತುಂಗಾ ನದಿ ತೀರದ ಅಲಂಕಾರ ಮಾಡಿದ್ದಾರೆ. ತೆಪ್ಪೋತ್ಸವ ಮತ್ತು ವೇದಿಕೆಯನ್ನು ನಾಗರಾಜ್ ಗೌಡ, ತಪಸ್ವಿ ಎಸ್ ಸಿ ಎಸ್ ಮಾಡುತ್ತಿದ್ದಾರೆ. ಇಡೀ ಪಟ್ಟಣ ಬೆಳಕಿನಲ್ಲಿ ಕಂಗೊಳಿಸುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.