Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಭೀಮನಕಟ್ಟೆ ಬಳಿ ಇಬ್ಬರು ನದಿಯಲ್ಲಿ ನಾಪತ್ತೆ!

ತೀರ್ಥಹಳ್ಳಿಯ ಭೀಮನಕಟ್ಟೆ ಬಳಿ ಇಬ್ಬರು ನದಿಯಲ್ಲಿ ನಾಪತ್ತೆ!
– ಬೆಂಗಳೂರಿಂದ ಪ್ರವಾಸ ಬಂದಿದ್ದ ಯುವಕರು
– ಇಬ್ಬರ ಪತ್ತೆಗಾಗಿ ಸ್ಥಳೀಯರ ಹುಡುಕಾಟ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸಮೀಪದ ಭೀಮನಕಟ್ಟೆ ಬಳಿ ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಇಬ್ಬರು ತುಂಗಾ ನದಿಯಲ್ಲಿ ನಾಪತ್ತೆಯಾದ ಘಟನೆ ಭಾನುವಾರ ನಡೆದಿದೆ.
ತೀರ್ಥಹಳ್ಳಿಯ ಭೀಮನಕಟ್ಟೆ ಬಳಿ ಮೂವರು ನದಿಯಲ್ಲಿ ಇಳಿದಿದ್ದು ಈ ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ. ಬೆಂಗಳೂರಿಂದ ಪ್ರವಾಸ ಬಂದಿದ್ದ ಯುವಕರು ನದಿಯಲ್ಲಿ ಈಜಲು ಹೋಗಿದ್ದರು ಎನ್ನಲಾಗಿದೆ.
ಇಬ್ಬರ ಪತ್ತೆಗಾಗಿ ಸ್ಥಳೀಯರ ಹುಡುಕಾಟ ನಡೆಸುತ್ತಿದ್ದಾರೆ. ಕೆಲ ತಿಂಗಳು ಹಿಂದಷ್ಟೇ ತೀರ್ಥಮುತ್ತೂರು ಬಳಿ ತುಂಗೆ ನದಿಯಲ್ಲಿ ಕಾರ್ಕಳದ ಇಬ್ಬರು ಉಪನ್ಯಾಸಕರು ಈಜಲು ಹೋಗಿ ನೀರುಪಾಲಾಗಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.