ಫೋಟೋ ವೈರಲ್::ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ!
– ಕೊಪ್ಪ: ಮಂಗಳೂರಿನ ಆಸ್ಪತ್ರೆಗೆ ರವಾನೆ
– ಅಜ್ಜಂಪುರ: ಎತ್ತಿನ ನೊಗ ಹೊಡೆದು ಯುವಕ ಸಾವು
– ಶಿವಮೊಗ್ಗ: ಯುವತಿಯರ ಡ್ರಾಪ್ ವಿಚಾರದಲ್ಲಿ ಗಲಾಟೆ: ದೂರು ದಾಖಲು
– ಶಿವಮೊಗ್ಗದ ನವವಧುವಿಗೆ ಒಂದೇ ದಿನ ಎರಡು ಪರೀಕ್ಷೆ
NAMMUR EXPRESS NEWS
ಚಿಕ್ಕಮಗಳೂರು: ಎತ್ತಿನಗಾಡಿನ ಸ್ಪರ್ಧೆಯಲ್ಲಿ ನೊಗ ಬಡಿದು ಯುವಕ ಸಾವು ಕಂಡಿರುವ ದುರಂತ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಭರತ್ (25) ಮೃತ ಪಟ್ಟ ಯುವಕ. ಎತ್ತಿನ ಗಾಡಿ ಸ್ಪರ್ಧೆ ವೇಳೆ ಈ ದುರಂತ ಸಂಭವಿಸಿದೆ.
ಕೊಪ್ಪ ಕಾಡಿನಲ್ಲಿ ಯುವತಿ ಪತ್ತೆ: ಆತ್ಮಹತ್ಯೆ ಯತ್ನ!
ಕೊಪ್ಪದ ಕಾಡಿನಲ್ಲಿ ಅನ್ಯ ಕೋಮಿನ ಹುಡುಗರ ಜತೆ ಪತ್ತೆಯಾಗಿ ಅಲ್ಲಿ ಕೆಲವರು ನೈತಿಕ ಪೊಲೀಸ್ ಗಿರಿಗೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ನಡೆದಿದೆ. ಕಳೆದ ಎರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಅವಮಾನ ತಾಳಲಾರದೆ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ವಿದ್ಯಾರ್ಥಿನಿ ಸ್ಥಿತಿ ಗಂಭೀರವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಬಳಿಕ ಎಚ್ಚೆತ್ತ ಪೊಲೀಸರು ಇದೀಗ ನೈತಿಕ ಪೊಲೀಸ್ ಗಿರಿ ನಡೆಸಿದವರ ವಿರುದ್ಧ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಯುವತಿ ಡ್ರಾಪ್ ವಿಚಾರಕ್ಕೆ ಗಲಾಟೆ!
ಯುವತಿಯರನ್ನ ಡ್ರಾಪ್ ಮಾಡಲು ತೆರಳಿದ್ದ ಖಾಸಗಿ ಸಂಸ್ಥೆಯ ಮ್ಯಾನೇಜರ್ ಮೇಲೆ ಅವ್ಯಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಘಟನೆ ಮತ್ತೊಂದು ತಿರುವು ಪಡೆದುಕೊಂಡಿದೆ. ಮ್ಯಾನೇಜರ್ ವಿರುದ್ಧ ಶಿವರಾಜ ಎಂಬುವರೇ ದೊಡ್ಡಪೇಟೆ ಪೊಲೀಸ್ ಠಾಣೆಗೆ ಪ್ರತಿದೂರು ನೀಡಿದ್ದಾರೆ. 10-30ರ ಸಮಯದಲ್ಲಿ, ಕುಂಬಾರಗುಂಡಿಯ ಕಾಂಚನಾ ಟೆಕ್ಸ್‌ಟೈಲ್ಸ್ ಹತ್ತಿರ ಶಿವರಾಜು ಎಂಬುವರು ಮಗಳಿಗೆ ಕಟ್ಟೆಯ ಮೇಲೆ ನಾನ್ ವೆಜ್ ತಿನ್ನಿಸುತ್ತಿರುವಾಗ ಸಂಜಯ್ ಕುಮಾರ್ ಎಂಬುವವರು ಬೈಕ್ ನಲ್ಲಿ ಇಬ್ಬರು ಹೆಣ್ಣುಮಕ್ಕಳನ್ನು ಕರೆದುಕೊಂಡು ಕತ್ತಲಲಿ ನಿಂತು ಮಾತನಾಡುತ್ತಿರುವಾಗ ಯುವತಿಯರಿಗೆ ಮತ್ತು ಮ್ಯಾನೇಜರ್ ಗೆ ರಾತ್ರಿಯ ಹೊತ್ತು ಮನೆಗೆ ಹೋಗಿ ಎಂದು ಬುದ್ದಿವಾದ ಹೇಳಿದ್ದಾರೆ. ಹೆಣು ಮಕ್ಕಳಿಗೆ ಮಾನವೀಯತೆ ಇಂದ ರಾತ್ರಿ ಆಗಿದೆ ಸರಿಯಿಲ್ಲ ಮನೆಗೆ ಹೋಗಿ ಅಂತ ಹೇಳಿದಕ್ಕೆ ಸಂಜಯ್ ಕುಮಾರ್ ಅವಾಚ್ಯಶಬ್ದಗಳಿಂದ ಬೈದು ನೀನು ಯಾರು ಇದನ್ನೆಲ್ಲಾ ಹೇಳಲು ಎಂದು ಬೈದು ಹೆಲ್ಮೆಟ್ ನಿಂದ ಹಲ್ಲೆ ಮಾಡಿದ್ದು ತಲೆಗೆ ಮೂಗಿಗೆ ಹೊಡೆತ ಬಿದ್ದಿದೆ. ತಕ್ಷಣ ಮೆಗಾನ್ ಆಸ್ಪತ್ರೆಗೆ ಬಂದು ದಾಖಲಾಗಿ ತಲೆಗೆ ಮೂಗಿಗೆ ಪೆಟ್ಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಯ ನನ್ನ ಡಿಸ್ಪಾರ್ಜ್ ಆಗಿ ಈ ದಿವಸ ಹಲ್ಲೆ ಮಾಡಿದ ಸಂಜಯ್ ಕುಮಾರ್ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಶಿವಮೊಗ್ಗದ ನವವಧುವಿಗೆ ಒಂದೇ ದಿನ ಎರಡು ಪರೀಕ್ಷೆ
ಶಿವಮೊಗ್ಗ: ಹಸೆಮಣೆ ಏರಿದ್ದ ನವವಧು ನೇರವಾಗಿ ಮದುವೆ ಮಂಟಪದಿಂದ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದಾಳೆ. ಬೆಳಗ್ಗೆ ಜೀವನ ಪರೀಕ್ಷೆಗೆ ಕಾಲಿಟ್ಟ ನವವಧು ತಮ್ಮ ಶೈಕ್ಷಣಿಕ ಪರೀಕ್ಷೆಯನ್ನ ಬರೆದಿದ್ದಾಳೆ.
ಬೆಳಗ್ಗೆ ಮಾಂಗಲ್ಯಧಾರಣೆ ಮಾಡಿಕೊಂಡು ಸತ್ಯಾವತಿ ಎಂಬ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದಾಳೆ ವಧು ಸಹ ವಧುವನ್ನ ಪರೀಕ್ಷೆ ಕೇಂದ್ರದ ವರೆಗೆ ಬಿಟ್ಟು ಹೋಗಿದ್ದಾನೆ. ಪರೀಕ್ಷೆ ಬರೆದು ಮತ್ತೆ ಕಲ್ಯಾಣ ಮಂಟಪಕ್ಕೆ ವಧು ವಾಪಾಸ್ ಅಗಿದ್ದಾಳೆ. ಪರೀಕ್ಷೆ ಮುಗಿದ ನಂತರ ಮುಂದಿನ ಮದುವೆಯ ವಿಧಿ ವಿಧಾನ ನೆರವೇರಿದಿದೆ. ಶಿವಮೊಗ್ಗದ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಸತ್ಯವತಿಗೆ ಒಂದೇ ದಿನ ಎರಡು ಪರೀಕ್ಷೆ ಎದುರಿಸಿದ್ದಾರೆ.
