Categories
ತೀರ್ಥಹಳ್ಳಿ

ಸಹಕಾರ ಕ್ಷೇತ್ರದ ಮರೆಯಲಾಗದ ಹೆಜ್ಜೆ…!

ಸಹಕಾರ ಕ್ಷೇತ್ರದ ಮರೆಯಲಾಗದ ಹೆಜ್ಜೆ…!
– ತೀರ್ಥಹಳ್ಳಿಯಲ್ಲಿ ಸಹಕಾರಿ ವೇದಿಕೆ ಮಾದರಿ ಕಾರ್ಯಕ್ರಮ
– 5000ಕ್ಕೂ ಹೆಚ್ಚು ಮಂದಿ ಆಗಮನ: ಕಿಮ್ಮನೆ ಹೇಳಿದ್ದೇನು?
– ಡಾ. ಆರ್. ಎಂ. ಮಂಜುನಾಥ ಗೌಡರಿಗೆ ತವರೂರು ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ಸೋಮವಾರ ಸಹಕಾರ ನಾಯಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್. ಎಂ. ಮಂಜುನಾಥ ಗೌಡ ಅವರ ತವರೂರು ಸನ್ಮಾನ ಕಾರ್ಯಕ್ರಮಕ್ಕೆ ಭರ್ಜರಿ ಜನ ಸೇರಿತು. ಸುಮಾರು 5000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ಇಡೀ ಸಭಾಂಗಣ ತುಂಬಿ ಹೋಗಿತ್ತು. ತೀರ್ಥಹಳ್ಳಿ ಪಟ್ಟಣದ ಅನಂತಮೂರ್ತಿ ಶಾಲೆ ಮೈದಾನದಲ್ಲಿ ನೂರಾರು ಬೈಕ್ ಮೆರವಣಿಗೆ ನಡೆಯಿತು.

ಸಭೆ ಕಾರ್ಯಕ್ರಮದಲ್ಲಿ ಅದ್ದೂರಿ ಸನ್ಮಾನ!

ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾಬಲೇಶ್ವರ್ ಹೆಗ್ಡೆ ಸ್ವಾಗತ ಮಾಡಿದರು. ಸಹಕಾರಿ ವೇದಿಕೆ ಅಧ್ಯಕ್ಷ ವಿಜಯದೇವ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖ ನಾಯಕರಾದ ಕಿಮ್ಮನೆ ರತ್ನಾಕರ್, ಬೇಳೂರು ಗೋಪಾಲಕೃಷ್ಣ, ಆಯನೂರು ಮಂಜುನಾಥ್, ಕಾಂಗ್ರೆಸ್ ಅಧ್ಯಕ್ಷರಾದ ಸುಂದರೇಶ್, ಷಡಕ್ಷರಿ ಉಪಾಧ್ಯಕ್ಷರು ಡಿಸಿಸಿ ಬ್ಯಾಂಕ್, ಗೀತಾ ರಮೇಶ್, ರಾಜಣ್ಣ ರೆಡ್ಡಿ, ಕೆ ರತ್ನಾಕರ್, ಕಲಗೋಡು ರತ್ನಾಕರ್, ಶ್ರೀಪಾದ್ ಹೆಗಡೆ ಶಿಮುಲ್ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ಸದಸ್ಯರಾದ ದುಗ್ಗಪ್ಪ ಗೌಡ, ಸುಧೀರ್, ತೀರ್ಥಹಳ್ಳಿ ಪ್ರಮುಖರಾದ ನಾರಾಯಣರಾವ್, ಮುಡುಬ ರಾಘವೇಂದ್ರ, ವಿದ್ಯಾಧರ್, ಕೆಸ್ತೂರು ಮಂಜುನಾಥ್, ಮಣಿ ಹೆಗ್ಡೆ ಸೇರಿ ಅನೇಕರು ಹಾಜರಿದ್ದರು. ಉಷಾ ಪ್ರಾರ್ಥನೆ ಮಾಡಿದರು.
ರಾಘವೇಂದ್ರ ಶೆಟ್ಟಿ, ಸಚ್ಚಿದ್ರ ಹೆಗ್ಡೆ, ನಾಗರಾಜ್ ಕುರುವಳ್ಳಿ ಸೇರಿದಂತೆ ಅನೇಕರು ಹಾಜರಿದ್ದರು.

ತೀರ್ಥಹಳ್ಳಿಗೆ ಮಂಜುನಾಥ ಗೌಡರ ಸೇವೆ ಅಪಾರ

ಮನೆ ಮಗನ ಸನ್ಮಾನ ಇದು. ನಾವು ಪ್ರಚಾರಕ್ಕಾಗಿ ಕಾರ್ಯಕ್ರಮ ಮಾಡುವುದಲ್ಲ. ಸಹಕಾರಿ ಸಂಸ್ಥೆ ಅಭಿವೃದ್ಧಿಗಾಗಿ ಕೊಡುಗೆ ನೀಡಿದ್ದಾರೆ. ಈ ಹಿಂದೆ ಸಹಕಾರ ನೀಡಿದ್ದಾರೆ. ಹಾಗಾಗಿ ಗೌರವಿಸಲಾಗಿದೆ ಎಂದು ಸಹಕಾರಿ ನಾಯಕ ವಿಜಯ ದೇವ್ ಹೇಳಿದರು. ಫೈನಾನ್ಸ್ ಹಾವಳಿಯಿಂದ ಕಂಗೆಟ್ಟಿದ್ದ ಜನ ಸಹಕಾರಿ ವ್ಯವಸ್ಥೆಯಿಂದ ಅನುಕೂಲ ಪಡೆದಿದ್ದಾರೆ. ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ಅತೀ ಹೆಚ್ಚು ರಿಸ್ಕ್ ತೆಗೆದುಕೊಂಡ ನಾಯಕ ಮಂಜುನಾಥ ಗೌಡರು. 6000ಕ್ಕೂ ಹೆಚ್ಚು ಕೋಟಿ ತೀರ್ಥಹಳ್ಳಿ ಕ್ಷೇತ್ರಕ್ಕೆ ಹಣ ಕೊಟ್ಟಿದ್ದಾರೆ. ದಿವಾಳಿಯಾಗಿದ್ದ ಬ್ಯಾಂಕ್ ಇಂದು ನಂಬರ್ 1 ಬ್ಯಾಂಕ್ ಆಗಿದೆ. ಅವರ ಶಕ್ತಿ ಮುಗಿದಿಲ್ಲ. ಯಾರೇ ವಿರೋಧ ಮಾಡಿದರೂ ನಾವು ಅವರಿಂದ ಬೆಳೆದಿದ್ದೇವೆ ಎಂದರು.

ಜನ ನೋಡುವಂತೆ ಎದ್ದು ನಿಂತರು!

ಬಿದ್ದು ಎದ್ದರೆ ಎಲ್ಲರೂ ನೋಡುವಂತೆ ಎದ್ದು ನಿಲ್ಲಬೇಕು. ಮಂಜುನಾಥ ಗೌಡರ ಸಾಧನೆ ಎಲ್ಲರೂ ಮೆಚ್ಚುವಂತಹದ್ದು. ಜಿಲ್ಲೆಯ ಸಹಕಾರ ವ್ಯವಸ್ಥೆಗೆ ಹೊಸ ತಿರುವು ತಂದು ಕೊಟ್ಟವರು ಮಂಜುನಾಥ ಗೌಡ. ಬೆಳೆಯುವ ಬೆಳೆಸುವ ಮನಸು ಇರಬೇಕು. ಇದು ಮಂಜುನಾಥ ಗೌಡರ ಆತ್ಮೀಯತೆಯ ಸಭೆಯಾಗಿದೆ ಎಂದು ಹಿರಿಯ ಸಹಕಾರಿ ನಾರಾಯಣ ರಾವ್ ಹೇಳಿದರು.

ಎಂದೂ ಬೆನ್ನಿಗೆ ಚೂರಿ ಹಾಕಲ್ಲ..!

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಮಂಜುನಾಥ ಗೌಡ ಅವರು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವವರು. ಸಹಕಾರ ಕ್ಷೇತ್ರದಲ್ಲಿ ಸಕ್ರಿಯ ಆಗಿಲ್ಲ. ಸಹಕಾರ ರಂಗದಲ್ಲಿ ಸಾಲ ಪಡೆದ್ದೇನೆ. ರಾಜ್ಯ ಮಟ್ಟದಲ್ಲಿ ಸಹಕಾರ ನಾಯಕರಾಗಿದ್ದಾರೆ. ಅವರು ಮತ್ತೆ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷರಾಗಬಹುದು ಎಂದರು. ಒಟ್ಟಾಗಿ ಪಕ್ಷ ಕಟ್ಟಿದ್ದೇವೆ. ಪಕ್ಷಕ್ಕೆ ತೊಂದರೆ ಕೆಲಸ ಮಾಡಿಲ್ಲ. ನಮ್ಮ ಜೊತೆ ಬಂದಾಗ ಅತ್ಯಂತ ಪ್ರೀತಿ ಗೌರವ ಕೊಟ್ಟಿದ್ದೇವೆ. ಅವರ ಬೆಳೆವಣಿಗೆಗೆ ಅವರ ಜತೆ ಇದ್ದೇನೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಇರಬಾರದು.
ಸಹಕಾರ ಕ್ಷೇತ್ರದಲ್ಲಿ ಶಿವಮೊಗ್ಗ ಮತ್ತು ತೀರ್ಥಹಳ್ಳಿಗೆ ಮಂಜುನಾಥ ಗೌಡರ ಕೊಡುಗೆ ಅಪಾರ.
ರಾಜಕೀಯ ಹೆಜ್ಜೆಯಲ್ಲೂ ನಿಮ್ಮ ಜತೆ ಇದ್ದೇನೆ ಎಂದು ಅಭಯ ನೀಡಿದರು.
ಎಂತಹ ಕಷ್ಟ ಬಂದ್ರೂ ನಾನು ಬೆನ್ನಿಗೆ ಚೂರಿ ಕೆಲಸ ಮಾಡಿಲ್ಲ.ಬಿಜೆಪಿ ವಿರುದ್ಧ ರಾಜಕೀಯ ವ್ಯವಸ್ಥೆಯಲ್ಲಿ ವಿರೋಧ ಮಾಡಿದ್ದೇವೆ. ವಯುಕ್ತಿಕ ವಿರೋಧ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಬಡವರಿಗೆ ಸಹಾಯ ಮಾಡೋಣ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಹೇಳಿದ್ದೇನು?

ಬಡವರು, ಕೃಷಿಕರಿಗೆ ಸಹಕಾರ ಕ್ಷೇತ್ರದಲ್ಲಿ ಅನುಕೂಲ ಮಾಡಿಕೊಟ್ಟ ನಾಯಕ ಮಂಜುನಾಥ ಗೌಡ. ಅವರು ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಶಾಸಕರಾಗೋದು ಬಾಕಿ…!

ಆಯನೂರು ಮಂಜುನಾಥ ಅವರು ಮಾತನಾಡಿ, ಅನೇಕ ಪೆಟ್ಟು ತಿಂದು ಶಕ್ತಿಯಾಗಿ ಬೆಳೆದು ನಿಂತಿದೆ. ಮಂಜುನಾಥ ಗೌಡ ಇತಿಹಾಸ ಮುಗಿಯುತ್ತೆ ಅಂದವರು ಈಗ ತಣ್ಣಗಾಗಿದ್ದಾರೆ. ನಾನು ಕೂಡ ಅಂದು ಒಂದು ಕಲ್ಲು ಹೊಡೆದಿದ್ದೇನೆ. ಒಂದು ಬಾರಿ ತೀರ್ಥಹಳ್ಳಿ ಶಾಸಕರಾಗೋದು ಒಂದೇ ಬಾಕಿ ಎಂದರು.

ಮಂಜುನಾಥ ಗೌಡ್ರ ತುಳಿಯಲು ಸಾಧ್ಯವಿಲ್ಲ

ಶಿವಮೊಗ್ಗ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ ಕಾರಣಕ್ಕೆ ಮಂಜುನಾಥ ಗೌಡರ ಕೊಡುಗೆ ಅಪಾರ. ಮಂಜುನಾಥ ಗೌಡರನ್ನು ತುಳಿಯಲು ಸಾಧ್ಯವಿಲ್ಲ. ಎಲ್ಲಾ ತನಿಖೆ ಆದ್ರೂ ಎದೆಗುಂದಿಲ್ಲ. ತೀರ್ಥಹಳ್ಳಿ ಅಂದರೆ ಹೋರಾಟ ಎಂದು ಸಾಗರ ಶಾಸಕ ಗೋಪಾಲ ಕೃಷ್ಣ ಬೇಳೂರು ಹೇಳಿದರು.

[embedyt] https://www.youtube.com/watch?v=0aTVED7lK4k%5B/embedyt%5D

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.