Categories
ಕೊಪ್ಪ

ಕೊಪ್ಪ: ನೀರಿನ ಬಕೆಟ್‌ಗೆ ಬಿದ್ದ ಮಗು ಸಾವು..!

ಕೊಪ್ಪ: ನೀರಿನ ಬಕೆಟ್‌ಗೆ ಬಿದ್ದ ಮಗು ಸಾವು..!
– ಆಟ ಆಡುವಾಗ ನೀರಿನ ಬಕೆಟಿಗೆ ಬಿದ್ದು ದುರ್ಮರಣ
– ತೀರ್ಥಹಳ್ಳಿಯಲ್ಲಿ ಜಿಂಕೆ ಭೇಟೆ: ಮುಚ್ಚಿಹಾಕ್ತಾರಾ ಕೇಸ್?
– ಕುಡಿದ ಮತ್ತಿನಲ್ಲಿ ಅಪ್ಪನನ್ನೇ ಕಲ್ಲು ಹೊತ್ತು ಹಾಕಿ ಕೊಂದ ಪಾಪಿ ಮಗ!

NAMMUR EXPRESS NEWS
ಕೊಪ್ಪ ತಾಲೂಕಿನ ಕುದುರೆಗುಂಡಿಯ ಗೌರಿಹಳ್ಳ ಸಮೀಪದ ಮನೆಯಲ್ಲಿ ಮಗುವೊಂದು ನೀರು ತುಂಬಿದ ಬಕೆಟ್‌ಗೆ ಬಿದ್ದು ಮರಣ ಹೊಂದಿದ ಘಟನೆ ಭಾನುವಾರ ನಡೆದಿದೆ. ರಿಜಾ (4) ಮೃತಪಟ್ಟ ಮಗು. ರಿಯಾಜ್, ಸಾಹಿನಾ ದಂಪತಿ ಪತ್ನಿ ರಿಜಾ ಆಟವಾಡುವಾಗ ನೀರು ತುಂಬಿದ ಬಕೆಟ್‌ಗೆ ಬಿದ್ದು ಮೃತಪಟ್ಟಿದ್ದಾಳೆ. ದೂರು ದಾಖಲಾಗಿಲ್ಲ ಎನ್ನಲಾಗಿದೆ.

ತೀರ್ಥಹಳ್ಳಿಯಲ್ಲಿ ಜಿಂಕೆ ಬೇಟೆ

ತೀರ್ಥಹಳ್ಳಿ ತಾಲೂಕಿನ ಸಿಂಗನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಕೈ ಬಳಿ ಅರಣ್ಯ ಅಧಿಕಾರಿಗಳು ಜಿಂಕೆ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಜಿಂಕೆ ಕೊಂದ ವ್ಯಕ್ತಿಗಳನ್ನ ರಾಜಕೀಯ ಪ್ರಭಾವದ ಒತ್ತಡಕ್ಕೆ ಮಣಿದು ಅರಣ್ಯ ಅಧಿಕಾರಿಗಳು ಪರಾರಿಯಾಗುವುದಕ್ಕೆ ಬಿಟ್ಟು ಕಳಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಕುಡಿದ ಮತ್ತಿನಲ್ಲಿ ಅಪ್ಪನನ್ನೇ ಕಲ್ಲು ಹೊತ್ತು ಹಾಕಿ ಕೊಂದ ಪಾಪಿ ಮಗ!

ಕುಡಿತದ ಮತ್ತಿನಲ್ಲಿ ಮಗನೊಬ್ಬ ತಂದೆಯನ್ನೇ ತಲೆಗೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯನ್ನು ಇಟ್ಟುಕೊಂಡು ಜಗಳ ಮಾಡಿಕೊಂಡು ಆತ ಈ ಕೃತ್ಯವನ್ನು ಎಸಗಿದ್ದಾನೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ವರವು ಕಾವಲು ಬಳಿ ಘಟನೆ ನಡೆದಿದೆ. ಬತ್ತಯ್ಯನ ಹಟ್ಟಿ ಗ್ರಾಮದ ನಿವಾಸಿಯಾಗಿರುವ ಸೂರಯ್ಯ (55) ಎಂಬವರೇ ಕೊಲೆಯಾದವರು. ಅವರನ್ನು ಕೊಂದಿದ್ದು ಅವರ ಸ್ವಂತ ಮಗ ಮೋಹನ. ಕೌಟುಂಬಿಕ ಕಲಹ, ಆಸ್ತಿ ವಿಚಾರದಲ್ಲಿ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು.

ಇದರ ಮುಂದುವರಿದ ಭಾಗ ಸೋಮವಾರ ರಾತ್ರಿಯೂ ನಡೆದಿತ್ತು. ಚೆನ್ನಾಗಿ ಕುಡಿದು ಬಂದಿದ್ದ ಮೋಹನ ಅಪ್ಪನ ಜತೆ ಖ್ಯಾತೆ ತೆಗೆದಿದ್ದ. ಅದೆಲ್ಲ ಮುಗಿದು ಎಲ್ಲರೂ ಮಲಗಿದ್ದರೂ ಅಪ್ಪ-ಮಗನ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ಆಗ ಮತ್ತಿನಲ್ಲಿದ್ದ ಮೋಹನ ದೊಡ್ಡ ಕಲ್ಲನ್ನು ತಂದು ತಂದೆಯ ತಲೆ ಮೇಲೆ ಎತ್ತಿಹಾಕಿದ್ದಾನೆ. ಸೂರಯ್ಯ ಅವರು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ.ಹೀಗೆ ಕೊಲೆ ಮಾಡಿದ ಬಳಿಕ ಮೋಹನ ನೇರವಾಗಿ ಚಳ್ಳಕೆರೆ ಠಾಣೆಗೆ ಬಂದು ವಿಷಯ ತಿಳಿಸಿದ್ದಾನೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.