ಕಮ್ಮರಡಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವಾರ್ಷಿಕ ಸಂಭ್ರಮ
– ಕಟೀಲು ಮಹಾತ್ಮೆ ಯಕ್ಷಗಾನ: ಕಾರ್ಯಕ್ರಮಕ್ಕೆ ಮೆಚ್ಚುಗೆ
– ಕಿಮ್ಮನೆ ಆದಿತ್ಯ, ಸತೀಶ್ ರೈ ನೇತೃತ್ವದಲ್ಲಿ 2ನೇ ವರ್ಷದ ರಂಗು
NAMMUR EXPRESS NEWS
ತೀರ್ಥಹಳ್ಳಿ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು – ಕಮ್ಮರಡಿ ಘಟಕದ 2ನೇ ವಾರ್ಷಿಕೋತ್ಸವ ಬೆಣ್ಣೆಗುಡ್ಡ ಸುಭಾಷ್ ಚಂದ್ರಬೋಸ್ ಕ್ರೀಡಾಂಗಣದಲ್ಲಿ ಕಮ್ಮರಡಿ ಘಟಕದ ಗೌರವಾಧ್ಯಕ್ಷರಾದ ಕಿಮ್ಮನೆ ಆದಿತ್ಯ ಇವರ ಸಭಾಧ್ಯಕ್ಷತೆಯಲ್ಲಿ ನಡೆಯಿತು. ಸಾವಿರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮುಖ್ಯ ಅತಿಥಿಗಳಾಗಿ ಸ್ಥಾಪಕಾಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಕೇಂದ್ರೀಯ ಫಟಕದ ಪುರುಷೋತ್ತಮ.ಕೆ. ಭಂಡಾರಿ, ಸುದೇಶ್ ಕುಮಾರ್ ರೈ, ರವಿಚಂದ್ರ ಶೆಟ್ಟಿ ಅಶೋಕನಗರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ದಂಪತಿಗಳನ್ನು ಮತ್ತು ಉಪಸ್ಥಿತ ಕೇಂದ್ರೀಯ ಫಟಕದ ಅಭ್ಯಾಗತರನ್ನು ಗೌರವಿಸಲಾಯಿತು. ಹಿರಿಯ ನಾಟಿ ವೈದ್ಯರಾದ ನೀಲಕಂಠ ಭಟ್ ಮತ್ತು ಭಾಗವತರಾದ ಹೆಚ್. ಜಿ. ಶಿವಶಂಕರ ಇವರಿಗೆ ಗೌರವ ಸಂಮಾನ ನಡೆಯಿತು. ಕಾರ್ಯಕ್ರಮ ಸ್ಥಳೀಯರನ್ನು ರಂಜಿಸಿತು.
