Categories
ತೀರ್ಥಹಳ್ಳಿ

ಕಮ್ಮರಡಿಯಲ್ಲಿ ಮಾ.20ಕ್ಕೆ ಪಟ್ಲ ಮೇಳದಿಂದ ಯಕ್ಷಗಾನ

ಕಮ್ಮರಡಿಯಲ್ಲಿ ಮಾ.20ಕ್ಕೆ ಪಟ್ಲ ಮೇಳದಿಂದ ಯಕ್ಷಗಾನ
– ಪಟ್ಲ ಫೌಂಡೇಶನ್ ಗೌರವಾಧ್ಯಕ್ಷ ಕಿಮ್ಮನೆ ಆದಿತ್ಯ ಸಾರಥ್ಯ
– ಮಾ.20ಕ್ಕೆ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಪೌರಾಣಿಕ ಯಕ್ಷಗಾನ
– ಮೇ 26 ರಂದು ಉಚಿತ ನೇತ್ರ, ಆರೋಗ್ಯ ತಪಾಸಣಾ ಶಿಬಿರ

NAMMUR EXPRESS NEWS
ತೀರ್ಥಹಳ್ಳಿ: ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಮ್ಮರಡಿ ಘಟಕದ ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮಾ.17ರ ಭಾನುವಾರ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಮ್ಮರಡಿ ಘಟಕ ಮತ್ತು ಭಾರತೀಯ ಯೋಗ ಶಿಕ್ಷಣ ಪುರುಷ ಮತ್ತು ಮಹಿಳಾ ಘಟಕ ಕಮ್ಮರಡಿ ವತಿಯಿಂದ ಸ್ವಚ್ಛ ಕಮ್ಮರಡಿ ಅಭಿಯಾನವನ್ನು ಕಮ್ಮರಡಿಯ ಎಲ್ಲ ಸಂಘ-ಸಂಸ್ಥೆಗಳು ಹಾಗೂ ನಾಗರೀಕರ ಸಹಕಾರದೊಂದಿಗೆ ನಡೆಸಲಾಯಿತು.

ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು, ಶ್ರೀಮಠ ಹರಿಹರ ಪುರ ಇವರ ಕೃಪಾರ್ಶಿರ್ವಾದದೊಂದಿಗೆ ದಿನಾಂಕ : 20-03-2024 ರ ಬುಧವಾರ ಸಂಜೆ 6.30 ರಿಂದ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಪೌರಾಣಿಕ ಯಕ್ಷಗಾನವನ್ನು ಕಮ್ಮರಡಿಯ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಈಗಾಗಲೇ ಸಿದ್ಧತೆ ನಡೆದಿದೆ.

ಪಟ್ಲ ಫೌಂಡೇಶನ್ ಗೌರವಾಧ್ಯಕ್ಷರಾದ ಕಿಮ್ಮನೆ ಆದಿತ್ಯ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಲಿದ್ದು, ಯಕ್ಷದ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಪೋಲಿಸ್ ಅಧೀಕ್ಷಕ ಮಿಥುನ್ ಹೆಚ್ ಎ, ಭೂದಾಖಲೆ ಜಂಟಿ ನಿರ್ದೇಶಕ ಸಿ ಎನ್ ರಮೇಶ್, ಕೇಂದ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಕೆ ಭಂಡಾರಿ, ಕೇಂದ್ರೀಯ ಸಮಿತಿ ಖಜಾಂಚಿ ಸುದೇಶ್ ಕುಮಾರ್, ಪಟ್ಲ ಫೌಂಡೇಶನ್ ಗೌರವ ಅಧ್ಯಕ್ಷ ಶೇಷಾದ್ರಿ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ನಾಟಿ ವೈದ್ಯರಾದ ನೀಲಕಂಠ ಭಟ್ ಹಾಗೂ ಯಕ್ಷಗಾನ ಭಾಗವತರಾದ ಹೆಚ್ ಜಿ ಶಿವಶಂಕರ್ ಇವರಿಗೆ ಗೌರವಿಸಿ ಸನ್ಮಾನಿಸಲಾಗುವುದು.

ಉಚಿತ ಅರೋಗ್ಯ ತಪಾಸಣೆ ಶಿಬಿರ

ಯಕ್ಷದ್ರುವ ಪಟ್ಲ ಫೌಂಡೇಶನ್ ಕಮ್ಮರಡಿ ಘಟಕದ ಆಶ್ರಯದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ನೇತ್ರ ತಪಾಸಣೆ ಶಿಬಿರ ಲೋಕಸಭಾ ಚುನಾವಣೆ ನೀತಿ ಸಂಹಿತೆಯ ಹಿನ್ನೆಲೆ 26-05-2024 ರ ಭಾನುವಾರ ನಡೆಯಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.