Categories
ತೀರ್ಥಹಳ್ಳಿ

ಮಾನಸಿಕ ಖಿನ್ನತೆಯಿಂದ ಯುವತಿ ನೇಣಿಗೆ!

ಮಾನಸಿಕ ಖಿನ್ನತೆಯಿಂದ ಯುವತಿ ನೇಣಿಗೆ!
– ನಾಲೂರು ಬಳಿ ಘಟನೆ: ಮದುವೆಯಾಗಿ 10 ತಿಂಗಳಾಗಿತ್ತು!
– ಮನೆಯಲ್ಲೇ ನೇಣಿಗೆ ಶರಣು
– ಕೆರೆಗೆ ಹಾರಿದ ವೃದ್ದೆ!
– ತೀರ್ಥಹಳ್ಳಿ ತಾಲೂಕು ಕಟ್ಟೆಹಕ್ಕಲು ಸಮೀಪ ನಡೆಸಲು ಘಟನೆ

NAMMUR EXPRESS NEWS
ತೀರ್ಥಹಳ್ಳಿ: ಯುವತಿಯೊಬ್ಬಳು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಶ್ಮಿತಾ (23) ಮೃತ ವ್ಯಕ್ತಿ. ನಾಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದಾಸನಕೊಡಿಗೆ ವಿದ್ಯಾರ್ಥ್ ಅವರ ಪತ್ನಿ. ದಾಸನಕೊಡಿಗೆಯ ಮನೆಯಲ್ಲಿ ಮಂಗಳವಾರ ರಾತ್ರಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ. ಮದುವೆಯಾಗಿ 10 ತಿಂಗಳು ಆಗಿತ್ತು. ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರ್ಥ್ ಉತ್ತಮ ವ್ಯಕ್ತಿ ಆಗಿದ್ದು ಸಾಮಾಜಿಕವಾಗಿ ಉತ್ತಮ ಹೆಸರು ಹೊಂದಿದ್ದರು. ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಬಿಜ್ಜಳ ಉಮೇಶ್ ಅವರ ಪುತ್ರಿ. ವಿದ್ಯಾರ್ಥ್ ಫಾರೆಸ್ಟ್ ಇಲಾಖೆ ವಾಚರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ವಿದ್ಯಾರ್ಥ್ ಕೆಲಸಕ್ಕೆ ಹೋಗಿದ್ದರು.

ಕೆರೆಗೆ ಹಾರಿದ ವೃದ್ದೆ!
– ತೀರ್ಥಹಳ್ಳಿ ತಾಲೂಕು ಕಟ್ಟೆಹಕ್ಕಲು ಸಮೀಪ ನಡೆಸಲು ಘಟನೆ

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಕಟ್ಟೆ ಹಕ್ಕಲು ಸಮೀಪದ ಹುಲ್ಕುಳಿ ಬಳಿ ವೃದ್ಧೆ ಒಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಕಟಗಾರು ಸಮೀಪ ಸರ್ಕಾರಿ ಕೆರೆಯಲ್ಲಿ ಶವ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದು ಬರಬೇಕಿದೆ. ದೀಪು ಭಟ್ ಎಂಬುವರ ತಾಯಿ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.