ತೀರ್ಥಹಳ್ಳಿಯಲ್ಲಿ ಜ.18ಕ್ಕೆ ಕರೆಂಟ್ ಇಲ್ಲ!
– ವಿದ್ಯುತ್ ಲೈನ್ ತುರ್ತು ಕಾಮಗಾರಿ
– ಎಲ್ಲೆಲ್ಲಿ ವಿದ್ಯುತ್ ಇಲ್ಲ..? ಇಲ್ಲಿದೆ ಮಾಹಿತಿ
NAMMUR EXPRESS NEWS
ತೀರ್ಥಹಳ್ಳಿ: ಜನವರಿ 18ರಂದು ಹಾಲಾಡಿಯಿಂದ ಹೆಗ್ಗುಂಜೆಯವರೆಗೆ ಲೈನ್ ಕಂಡಕ್ಟರ್ ಬದಲಾವಣೆ ತುರ್ತು ಕಾಮಗಾರಿ ಇರುವುದರಿಂದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ, 110/11ಕೆವಿ ಬೆಟ್ಟಮಕ್ಕಿ, ತೀರ್ಥಹಳ್ಳಿ ಮತ್ತು 110/11ಕೆವಿ ಕಮ್ಮರಡಿ ವಿದ್ಯುತ್ ವಿತರಣಾ ಕೇಂದ್ರಗಳಿಗೆ-ವಿದ್ಯುತ್ ಅಡಚಣೆ ಉಂಟಾಗುವುದರಿಂದ ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ, ಕುಡುಮಲ್ಲಿಗೆ, ಅರಳಸುರಳಿ, ಆರಗ, ನೆರಟೂರು, ನೊಣಬೂರು, ಸಾಲೂರು, ಆಗುಂಬೆ, ಹೆಗ್ಗೋಡು, ಅರೇಹಳ್ಳಿ, ಮೇಗರವಳ್ಳಿ, ನಾಲೂರು, ಬಿದರಗೋಡು ತೀರ್ಥಮುತ್ತೂರು, ಅರಳಾಪುರ, ಬಸವಾನಿ, ದೇವಂಗಿ, ಹಾರೋಗೊಳಿಗೆ, ಹೆದ್ದೂರು, ಮೇಳಿಗೆ, ಮೇಲಿನ ಕುರುವಳ್ಳಿ, ಮುಳುಬಾಗಿಲು, ಸಾಲ್ಗಡಿ, ಶೇಡ್ಗರ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು/ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.