ತೀರ್ಥಹಳ್ಳಿಯಲ್ಲಿ ಹಾಸ್ಯೋತ್ಸವ ಸಂಗೀತ ಕಾರ್ಯಕ್ರಮ
– ಮೇ 19ರಂದು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ
– ಹಾಸ್ಯ, ಸಂಗೀತದ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತಿಸಿದ ಗಾನಾಂಜಲಿ ಸಂಸ್ಥೆಯ ಶಶಿಕುಮಾರ್ ಕಾರಂತ್
NAMMUR EXPRESS NEWS
ತೀರ್ಥಹಳ್ಳಿ: ಗಾನಾಂಜಲಿ ಪ್ರಸ್ತುತಿಯಲ್ಲಿ ಗೀತೋತ್ಸವ ಹಾಸ್ಯೋತ್ಸವ ಸಂಗೀತ ಕಾರ್ಯಕ್ರಮ ಹಾಸ್ಯ ವೈವಿಧ್ಯಮಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮೇ 19 ರಂದು ಸೋಮವಾರದಂದು ಸಂಜೆ 6 ರಿಂದ ಶಾಂತವೇರಿ ಗೋಪಾಲಗೌಡ ರಂಗಮಂದಿರ ಸೊಪ್ಪುಗುಡ್ಡೆ ತೀರ್ಥಹಳ್ಳಿಯಲ್ಲಿ ನೆರವೇರಲಿದೆ.
ಮಲೆನಾಡು ಮತ್ತು ಕರಾವಳಿ ಪ್ರತಿಭಾವಂತ ಕಲಾವಿದರಿಂದ ಭಾವ ಸಂಗೀತ, ಚಿತ್ರ ಸಂಗೀತ ನಡೆಯಲಿದೆ. ನಾಡಿನ ಹೆಸರಾಂತ ನಗೆ ಹಬ್ಬ ಖ್ಯಾತಿಯ ಹಾಸ್ಯ ಕಲಾವಿದ ಮೈಸೂರು ಆನಂದ್ ಇವರಿಂದ ಹಾಸ್ಯ ವೈವಿಧ್ಯಮಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತವನ್ನು ಕೆ. ಜಿ ಶಶಿಕುಮಾರ ಕಾರಂತ್ ಗಾನಾಂಜಲಿ ಇವರು ಕೋರಿದ್ದಾರೆ.
