Categories
ಉಡುಪಿ

ಪೆರ್ಡೂರು ದೇಗುಲದಲ್ಲಿ 15ನೇ ಶತಮಾನದ ದೀಪ ಪತ್ತೆ!

ಪೆರ್ಡೂರು ದೇಗುಲದಲ್ಲಿ 15ನೇ ಶತಮಾನದ ದೀಪ ಪತ್ತೆ!
– ಏನಿದು ದೀಪ… ವಿಶೇಷ ಏನು..? ಸಿಕ್ಕಿದ್ದು ಹೇಗೆ…?

– ಉಡುಪಿ: ನರ್ಮ್ ಬಸ್ ಚಾಲನೆಗೆ ಮತ್ತೆ ಹೋರಾಟ!
– ಚಿಕ್ಕಮಗಳೂರು ಮತ್ತು ಉಡುಪಿ ನಡುವಿನ ರೈಲ್ವೆ ಸೇವೆಗೆ ಬೇಡಿಕೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್, ಉಡುಪಿ

ಉಡುಪಿ: ಕಳೆದ ಒಂಭತ್ತು ವರ್ಷಗಳ ಹಿಂದೆ ಉಡುಪಿಯ ಜನರ ಓಡಾಟಕ್ಕೆ ಅನುಕೂಲವಾಗಲೆಂದು ಆರಂಭಿಸಿದ್ದ ನರ್ಮ್ ಬಸ್ ಗಳು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು.‌ ಆದರೆ ಇದರಲ್ಲಿ ಹದಿಮೂರು ಬಸ್ ಗಳನ್ನು ಸ್ಥಗಿತಗೊಳಿಸಲಾಯಿತು. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಗಿತಗೊಂಡ 13 ಬಸ್ ಗಳನ್ನು ಪುನಃ ಪ್ರಾರಂಭಿಸುವ ಜೊತೆಗೆ, ಪ್ರಯಾಣಿಕರ ಓಡಾಟದ ಸಂಖ್ಯೆಗೆ ಅನುಗುಣವಾಗಿ, ವಿವಿಧ ಮಾರ್ಗಗಳಲ್ಲಿ ಕನಿಷ್ಠ 80 ನೂತನ ಬಸ್ ಗಳನ್ನು ಹೆಚ್ಚಿಸಬೇಕೆಂದು ಉಡುಪಿ ನಗರದ ಯುವ ಮೋರ್ಚಾ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಉಡುಪಿ: ಚಿಕ್ಕಮಗಳೂರು ಮತ್ತು ಉಡುಪಿ ನಡುವಿನ ರೈಲ್ವೆ ಸೌಲಭ್ಯಗಳ ಅಭಿವೃದ್ಧಿಗಾಗಿ ಕೋಟ ಸಂಸದ ಶ್ರೀನಿವಾಸ ಪೂಜಾರಿ ಅವರು ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಿ ನಾಲ್ಕು ಪ್ರಮುಖ ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದಾರೆ. ಚಿಕ್ಕಮಗಳೂರಿನಿಂದ ತಿರುಪತಿಗೆ ಹೊಸ ರೈಲ್ ಗೆ ಚಾಲನೆ , ಬೆಂಗಳೂರು ಕಾರವಾರ ನಡುವೆ ರಾತ್ರಿಯ ವೇಳೆಗೆ ಹೆಚ್ಚುವರಿ ರೈಲ್ ಗಳ‌ ಸೌಲಭ್ಯ ಸೇರಿದಂತೆ ನಾಲ್ಕು ಬೇಡಿಕೆಗಳನ್ನಿಟ್ಟಿದ್ದಾರೆ. ವಿ.ಸೋಮಣ್ಣ ಅವರು ಬೇಡಿಕೆಗಳನ್ನು ಪರಿಶೀಲಿಸಿ ಅವಕಾಶ ಕಲ್ಪಿಸಿ ಕೊಡುವ ಭರವಸೆ ನೀಡಿದ್ದಾರೆ.

ಪೆರ್ಡೂರು: ಉಡುಪಿ ಜಿಲ್ಲೆಯ ಪೆರ್ಡೂರು ಅನಂತ ಪದ್ಮನಾಭ ದೇವಾಲಯದಲ್ಲಿ ಹದಿನೈದನೇ ಶತಮಾನಕ್ಕೆ ಸೇರಿದ ಅಪರೂಪದ ದೀಪವೊಂದು ಪತ್ತೆಯಾಗಿದೆ. ಇದು ಶೈವ ಮತ್ತು ವೈಷ್ಣವ ಶಿಲ್ಪಗಳನ್ನು ಹೊಂದಿರುವ ಅತ್ಯಂತ ಪ್ರಾಚೀನ ದೀಪವಾಗಿದೆ.‌ ಈ ಶೈಲಿಯು ದೇವಾಲಯದಲ್ಲಿ ಪ್ರತಿದಿನ ನಡೆಯುತ್ತಿದ್ದ ಎರಡೂ ಪಂಥದ ಆಚರಣೆಗಳನ್ನು ಬಿಂಬಿಸುತ್ತಿದೆ ಎಂದು ಶಿರ್ವದ ಮುಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರಾದ ಟಿ.ಮುರುಗೇಶಿ ತಿಳಿಸಿದ್ದಾರೆ. ಒಂದೇ ತುಂಡು ಎರಡು ಮುಖಗಳನ್ನು ಹೊಂದಿರುವುದು ಈ ದೀಪದ ವೈಶಿಷ್ಟ್ಯವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.