ಬ್ರಹ್ಮಾವರದಲ್ಲಿ ಪ್ರೇಮಿಯ ಹಲ್ಲೆ: ಯುವತಿ ಗಂಭೀರ ಗಾಯ
ಬ್ರಹ್ಮಾವರ: ಕೊಕ್ಕರ್ಣೆಯಲ್ಲಿ ಪ್ರೇಮಿಯೊಬ್ಬ ಯುವತಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಕೊಕ್ಕರ್ಣೆ ಪೂಜಾರಿಬೆಟ್ಟು ನಿವಾಸಿ ರಕ್ಷಿತಾ (20) ಎಂದು ಗುರುತಿಸಲಾಗಿದೆ.
ರಕ್ಷಿತಾ ಮಣಿಪಾಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ, ಕಾರ್ತಿಕ್ ಪೂಜಾರಿ ಎಂಬಾತ ಬೈಕಿನಲ್ಲಿ ಬಂದು ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಯುವತಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ.
ಗಾಯಗೊಂಡ ರಕ್ಷಿತಾಳಿಗೆ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ಆಕೆಯ ಹುಟ್ಟಿದ ದಿನವೇ ನಡೆದಿರುವುದು ವಿಷಾದನೀಯ. ಪ್ರಕರಣದ ಕುರಿತು ಬ್ರಹ್ಮಾವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.