Categories
ಕಾರ್ಕಳ

ಕಾರ್ಕಳ: ಜಿಲ್ಲಾಮಟ್ಟದ ಕ್ರೀಡಾಕ್ಷೇತ್ರದಲ್ಲಿ ಕ್ರೈಸ್ಟ್ ಕಿಂಗ್ ವಿದ್ಯಾರ್ಥಿಗಳ ಸಾಧನೆ

ಕಾರ್ಕಳ: ಜಿಲ್ಲಾಮಟ್ಟದ ಕ್ರೀಡಾಕ್ಷೇತ್ರದಲ್ಲಿ ಕ್ರೈಸ್ಟ್ ಕಿಂಗ್ ವಿದ್ಯಾರ್ಥಿಗಳ ಸಾಧನೆ
* ರಿಹಾನ್ ಶೇಖ್ ಕರಾಟೆ ಸ್ಪರ್ಧೆಯಲ್ಲಿ ಬೆಳ್ಳಿಪದಕ
* ವಾಲಿಬಾಲ್‌ನಲ್ಲಿ ಕ್ರೈಸ್ಟ್ ಕಿಂಗ್ ಬಾಲಕಿಯರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

NAMMUR EXPRESS NEWS
ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಕರಾಟೆ ಸ್ಪರ್ಧೆಯಲ್ಲಿ ಕ್ರೈಸ್ಟ್ ಕಿಂಗ್ ಪ.ಪೂ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ರಿಹಾನ್ ಶೇಖ್ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

ಅದೇ ರೀತಿ, ಕಾರ್ಕಳದ ಕೆ.ಎಂ.ಇ.ಎಸ್ ಪ.ಪೂ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕ್ರೈಸ್ಟ್ ಕಿಂಗ್ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದೆ.

ತಂಡವನ್ನು ಪ್ರತಿನಿಧಿಸಿದವರು:

ಪ್ರಥಮ ವಾಣಿಜ್ಯ ವಿಭಾಗ: ವರುಣ ಶೆಟ್ಟಿ, ರಕ್ಷಾ, ರುಫಿಯಾ ಬಾನು, ಸಾಚಿ ಶೆಟ್ಟಿ

ಪ್ರಥಮ ವಿಜ್ಞಾನ ವಿಭಾಗ: ಪ್ರೀತಾ, ಅದಿತಿ ಆಚಾರ್ಯ, ಶ್ರಾವ್ಯ ಶೆಟ್ಟಿ

ದ್ವಿತೀಯ ವಾಣಿಜ್ಯ ವಿಭಾಗ: ನೇಹಾ ವಿ, ರವೀನಾ

ದ್ವಿತೀಯ ವಿಜ್ಞಾನ ವಿಭಾಗ: ಶ್ರುತ

ಅದರ ಜೊತೆಗೆ, ವರುಣ ಶೆಟ್ಟಿ “ಬೆಸ್ಟ್ ಅಟಾಕರ್” ಪ್ರಶಸ್ತಿ ಹಾಗೂ ಶ್ರಾವ್ಯ ಶೆಟ್ಟಿ “ಬೆಸ್ಟ್ ಪಾಸರ್” ಪ್ರಶಸ್ತಿ ಗಳಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಪ್ರಸಾದ್, ಪ್ರಕಾಶ್ ಹಾಗೂ ಲಾವಣ್ಯ ತಂಡಕ್ಕೆ ತರಬೇತಿ ನೀಡಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.