ಕರಾವಳಿ ಟಾಪ್ ನ್ಯೂಸ್
ಬೆಳ್ತಂಗಡಿ: ಸುರಿದ ಭಾರೀ ಮಳೆಗೆ ಯುವಕನ ಮೇಲೆ ಬಿದ್ದ ಮರ, ಯುವಕರಿಂದ ರಕ್ಷಣೆ!
– ತುಂಬೆ: ಕಾರು ಟಿಪ್ಪರ್ ಡಿಕ್ಕಿ, ಕಾರಿನ ಹಿಂಭಾಗ ಸಂಪೂರ್ಣ ಜಖಂ!
– ಉಡುಪಿ: ಗರುಡ ಗ್ಯಾಂಗ್‌ನ ಇಸಾಕ್ ಮೇಲೆ ಫೈರಿಂಗ್
NAMMUR EXPRESS NEWS
ಬೆಳ್ತಂಗಡಿ: ಮೂಡಬಿದಿರೆ ರಸ್ತೆಯ ಪದಂಗಡಿ ಎಂಬಲ್ಲಿ ಮಾ. 12ರಂದು ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಯುವಕನೋರ್ವ ಮರವೊಂದು ಬಿದ್ದು ಗಂಭೀರ ಘಟನೆ ಘಟನೆ ನಡೆದಿದೆ.
ಗಂಭೀರ ಯುವಕನನ್ನು ಕೂಡಲೇ ಯುವಕರಾದ ಹರೀಶ್ ಶಾಂತಿಬೆಟ್ಟು ಗರ್ಡಾಡಿ ಸಮಂತ್ ಕುಮಾರ್ ಜೈನ್, ಕೃಷ್ಣಪ್ಪ ಕನ್ನಡಿಕಟ್ಟೆ ಇವರುಗಳು ತಮ್ಮ ಪ್ರಾಣವನ್ನು ಲೆಕ್ಕಿಸದೇ ಯುವಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಯುವಕ ಪ್ರಾಣಪಾಯದಿಂದ ಪಾರಾಗಿದ್ದಾನೆ.
– ತುಂಬೆ: ಕಾರು ಟಿಪ್ಪರ್ ಡಿಕ್ಕಿ, ಕಾರಿನ ಹಿಂಭಾಗ ಸ೦ಪೂರ್ಣ ಜಖಂ!
ತುಂಬೆ: ಕಾರು ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ ಘಟನೆ ಮಾ. 12ರಂದು ರಾತ್ರಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆ ಎಂಬಲ್ಲಿ ನಡೆದಿದೆ.
ಮಂಗಳೂರಿನಿಂದ ಬಿ. ಸಿ ರೋಡ್ ಕಡೆಗೆ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಕಾರಿನ ಹಿಂಭಾಗ ಸ೦ಪೂರ್ಣ ಜಖಂಗೊಂಡಿದೆ.ಕಾರಿನ ಸವಾರ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ.