ಯುವ ಜನಾಂಗ ರಾಜಕೀಯಕ್ಕೆ ಬರಬೇಕು – ರಂಭಾಪುರಿ ಶ್ರೀಗಳು
* ವಿಜಯೇಂದ್ರ ಸ್ಥಾನದ ಅಪಸ್ವರಕ್ಕೆ ರಾಷ್ಟ್ರ,ರಾಜ್ಯ ನಾಯಕರು ಕೂತು ಮಾತಾಡೋದು ಒಳಿತು
* ಗ್ಯಾರಂಟಿಗೆ ಹಣ ಖರ್ಚು ಮಾಡಿದ್ರೆ ಆಡಳಿತ ಕಷ್ಟ – ಶ್ರೀಗಳ ಅಸಮಾಧಾನ
NAMMUR EXPRESS NEWS
ಬಾಳೆಹೊನ್ನೂರು: ರಾಜ್ಯದಲ್ಲಿ ನಡೆಯುತ್ತಿರುವ ವೀರಶೈವ ಲಿಂಗಾಯತರ ಸಭೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ರಂಭಾಪುರಿ ಶ್ರೀಗಳು ವಿಜಯೇಂದ್ರ ಅಭಿಮಾನಿಗಳು ಸಭೆ ಮಾಡುತ್ತಿರಬಹುದು, ವಿಜಯೇಂದ್ರ ಮಾಡಿಸ್ತಾರೆ ಅನ್ನೋ ಭಾವನೆ ನನಗಿಲ್ಲ. ಅಭಿಮಾನಿಗಳು ತಮ್ಮ ಅಭಿಮಾನದಿಂದ ಮಾಡಬಹುದು, ಒಳ್ಳೆಯ ನಾಯಕತ್ವ ರಾಜ್ಯದ ಹಿತ ಚಿಂತನೆ ಕಾಪಾಡಲು ಜನರ ಸಹಕಾರ ಅವಶ್ಯಕತೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಅಲ್ಲದೇ ಸೈದ್ಧಾಂತಿಕ ನೆಲೆಗಟ್ಟಿನ ಹೋರಾಟಕ್ಕೆ ಮಠ, ಪಕ್ಷ, ಜಾತಿಮೀರಿ ಗಟ್ಟಿ ಧ್ವನಿಯಲ್ಲಿ ತಮ್ಮ ವಿಚಾರ ಹೇಳುತ್ತೆ. ವಿಜಯೇಂದ್ರ ವಿಚಾರದಲ್ಲೂ ಒಳ್ಳೇದು ಮಾಡಿದಾಗ ಹೆಮ್ಮೆಯಿಂದ ಹೇಳ್ತಿವಿ. ಅಲ್ಲದ ಮಾರ್ಗ ತುಳಿದಾಗ ತಿದ್ದಿಕೊಳ್ಳಲು ಸೂಚನೆ ನೀಡೋದಕ್ಕೂ ಹಿಂದೇಟು ಹಾಕೋದಿಲ್ಲ, ಯುವ ಜನಾಂಗ ರಾಜಕೀಯಕ್ಕೆ ಬಂದು ಜನರಿಗೆ ಒಳ್ಳೇದು ಮಾಡಬೇಕು ವಿಜಯೇಂದ್ರ ಸ್ಥಾನದ ಅಪಸ್ವರಕ್ಕೆ ರಾಷ್ಟ್ರ ರಾಜ್ಯ ನಾಯಕರು ಕೂತು ಮಾತಾಡೋದು ಒಳ್ಳೇದು ಎಂದು ರಂಭಾಪುರಿ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.
ಗ್ಯಾರಂಟಿಗೆ ಹಣ ಖರ್ಚು ಮಾಡಿದ್ರೆ ಆಡಳಿತ ಕಷ್ಟ – ಶ್ರೀಗಳ ಅಸಮಾಧಾನ
ಗ್ಯಾರಂಟಿಗೆ ಮುಕ್ಕಾಲು ಭಾಗ ಹಣ ಖರ್ಚು ಮಾಡಿದ್ರೆ ಆಡಳಿತ ನಡೆಸುವುದು ಕಷ್ಟ ಎಂದು ರಂಭಾಪುರಿ ಶ್ರೀಗಳು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಹಿಂದಿನ ಸರ್ಕಾರದ ಹಲವು ಯೋಜನೆಗಳನ್ನು ತಡೆಹಿಡಿದಿದ್ದು, ಬಜೆಟ್‌ನಲ್ಲೂ ಮಠ ಮಂದಿರಗಳಿಗೆ ವಿಶೇಷವಾದ ಅನುದಾನ ಕೊಟ್ಟಿಲ್ಲ. ಆಡಳಿತ ಪಕ್ಷದ ಶಾಸಕರು ಕೂಡ ಅಭಿವೃದ್ಧಿಗೆ ಹಣ ಇಲ್ಲದೆ ಕೊರಗುತ್ತಿದ್ದಾರೆ. ಜನರ ಬಳಿ ಹೋಗುವುದು ಕಷ್ಟವಾಗಿದೆ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಾರೆ ಎಂದಿದ್ದಾರೆ ಸೋಮವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ಅನುದಾನದ ಬಗ್ಗೆ ಚರ್ಚೆ ಆಗಿರಬಹುದು. ಜಾಸ್ತಿ ಅಲ್ಲದಿದ್ದರೂ. ಆಯಾ ಕ್ಷೇತ್ರದ ಶಾಸಕರಿಗೆ ವಿಶೇಷ ಅನುದಾನ ಕೊಡಬಹುದು ಎನ್ನುವ ನಂಬಿಕೆ ಇದೆ ಎಂದಿದ್ದಾರೆ.
