ಗ್ರ್ಯಾವಿಟಿ ಆಂಗ್ಲ ಮಾಧ್ಯಮ ಶಾಲೆ ನಡೂರು ಅಬಾಕಸ್ ತರಗತಿ ಉದ್ಘಾಟನೆ.
ಪಠ್ಯಚಟುವಟಿಕೆಗಳಿಗೆ ಪೂರಕವಾಗಿ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಅಬಾಕಸ್ ತರಗತಿಯನ್ನು ಪ್ರಾರಂಭಿಸಲಾಯ್ತು. ನುರಿತ ಹಾಗೂ ಅನುಭವಿ ಶಿಕ್ಷಕರನ್ನು ಒಳಗೊಂಡು ಜಹು ಜನರ ಮೆಚ್ಚುಗೆ ಪಡೆದ ‘ರಾಪಿಡ್ ಇನ್ಸ್ಟಿಟ್ಯೂಟ್ ಆಫ್ ಅಬಾಕಸ್ ಎಂಡ್ ವೇದಿಕ್ ಮ್ಯಾತ್ಸ್ ‘ಸಂಸ್ಥೆಯ ಶ್ರೀಮತಿ ಸುನೀತಾ ಹೆಬ್ಬಾರ್ ಹಾಗೂ ಶ್ರೀಮತಿ ಶಿಲ್ಪಾ ರಾವ್ ತರಗತಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಪರವಾಗಿ ಕಾರ್ಯದರ್ಶಿ ಪಾವನಾ ಎಮ್a ಹೆಗ್ಡೆ, ವಿಭಾಗಿಯ ಮುಖ್ಯಸ್ಥೆಯರಾದ ಶ್ರೀಮತಿ ಸಂಗಿತಾ ಅಡಿಗ,ಶ್ರೀಮತಿ ಸರಸ್ವತಿ , ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.