Categories
ಉಡುಪಿ

ನಾಲ್ಕನೇ ತರಗತಿ ಬಾಲಕಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ!

ನಾಲ್ಕನೇ ತರಗತಿ ಬಾಲಕಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ!

– ಜಿಮ್ನಾಸ್ಟಿಕಿನಲ್ಲಿ 65 ರೌಂಡು ಮುಗಿಸಿ ಸೈ ಎನಿಸಿಕೊಂಡ ಆಪ್ತಿ ಆಚಾರ್ಯ!
– ಹೆಬ್ರಿಯ ಎಸ್ಆರ್ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿ ಎಲ್ಲೆಡೆ ಮಿಂಚಿಂಗ್!

NAMMUR EXPRESS NEWS
ಉಡುಪಿ: ಹೆಬ್ರಿಯ ಎಸ್ಆರ್ ಪಬ್ಲಿಕ್ ಸ್ಕೂಲಿನ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಆಪ್ತಿ ಆಚಾರ್ಯ ಇವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಬ್ರೇಕ್ ಮಾಡುವ ಮೂಲಕ ಸಾಧನೆಯನ್ನು ಮಾಡಿದ್ದಾರೆ.
ಹೌದು ಸತತ ಎರಡು ವರ್ಷಗಳಿಂದ ಜಿಮ್ನಾಸ್ಟಿಕ್ ತರಬೇತಿಯನ್ನು ಪಡೆದಿದ್ದು,  2025 ಮಾರ್ಚ್ 1 ರಂದು ಜಿಮ್ನಾಸ್ಟಿಕ್ ನ ಒಂದು ಭಾಗವಾದ ಹೈಡ್ರೋಲ್ ಅನ್ನು  ಗರಿಷ್ಟ 4 ನಿಮಿಷ 40 ಸೆಕೆಂಡಿನಲ್ಲಿ 65 ರೌಂಡು ಮುಗಿಸಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಹೆಬ್ರಿ ತಾಲೂಕಿನ ಮುನಿಯಾಲು ಗ್ರಾಮದ  ಲತಾ ಹಾಗೂ ಶಿವಾನಂದ ಆಚಾರ್ಯ ಅವರ ಮಗಳು.

ಆಪ್ತಿ ಆಚಾರ್ಯ ಸುಮಾರು ಎರಡು ವರುಷದಿಂದ ಜಿಮ್ನಸ್ಟಿಕ್ ಗುರು ಶ್ರೀ ಅವಿನಾಶ್ ಪೆರ್ಡೂರು ರವರಿಂದ ನೃತ್ಯ ಹಾಗೂ ಜಿಮ್ನಾಸ್ಟಿಕ್ ತರಬೇತಿಯನ್ನು ಪಡೆಯುತ್ತಿದ್ದಾಳೆ.
ಇವಳು ಭಟ್ಕಳ, ಮಡಂತ್ಯಾರು, ಕಾರ್ಕಳ, ಹೆಬ್ರಿ, ಕುಚ್ಚೂರು, ಮತ್ತು ಮುನಿಯಾಲು ಮುಂತಾದ ಇನ್ನೂ ಹಲವಾರು ಕಡೆಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದ್ದು, ಪೆರ್ಡೂರು ಹಾಗೂ ಹೆಬ್ರಿ ಹಾಗೂ ಶಾಲಾ ಮಟ್ಟದಲ್ಲಿ ನಡೆದ ಛದ್ಮವೇಷ ಸ್ಪರ್ಧೆಗಳಲ್ಲೂ ಜನರ ಮೆಚ್ಚುಗೆ ಹಾಗೂ ಬಹುಮಾನಗಳನ್ನು ಪಡೆದಿರುತ್ತಾಳೆ.
ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಬಹುಮಾನಗಳನ್ನು ಪಡೆದಿರುತ್ತಾಳೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.