Categories
ಶಿವಮೊಗ್ಗ

ಪಟ್ಟಣ ಪಂಚಾಯ್ತಿ ಅಧ್ಯಕ್ಷರ ವಿರುದ್ಧ ಯುವಮೋರ್ಚಾ ಆಕ್ರೋಶ !!

ಪಟ್ಟಣ ಪಂಚಾಯ್ತಿ ಅಧ್ಯಕ್ಷರ ವಿರುದ್ಧ ಯುವಮೋರ್ಚಾ ಆಕ್ರೋಶ !!

* ನಗರದಲ್ಲಿ ಕಸದ ರಾಶಿ,ಮರೀಚಿಕೆಯಾದ ಸ್ವಚ್ಛತೆ
* ನಗರದ ಸಮಸ್ಯೆ ಪ್ರಶ್ನಿಸಿದರೆ ಪೊಲೀಸ್ ದೂರು ಆರೋಪ
* ಅಧ್ಯಕ್ಷರಿಗೆ ಚುನಾವಣಾ ಸಂದರ್ಭದ ಆಶ್ವಾಸನೆ ನೆನಪಿಸಿದ ಬಿಜೆಪಿ ಯುವ ಮೋರ್ಚಾ

NAMMUR EXPRESS NEWS
ಎನ್.ಆರ್ ಪುರ: ನಗರದ ಪಟ್ಟಣ ಪಂಚಾಯ್ತಿ ಅಧ್ಯಕ್ಷರ ವಿರುದ್ಧ ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ನಗರದ ಸಮಸ್ಯೆ ವಿಚಾರವಾಗಿ ಪ್ರಶ್ನಿಸಿದವರ ವಿರುದ್ಧ ಪೊಲೀಸ್ ದೂರು ನೀಡಿದ ಆರೋಪ ಕೇಳಿಬಂದಿದೆ.
ಎನ್.ಆರ್ ಪುರ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಜುಬೇದಾ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡಿದ್ದು ಚುನಾವಣಾ ಸಮಯದಲ್ಲಿ ಅವರ ನೀಡಿದ ಭರವಸೆಗಳನ್ನು ಈಗ ಮತ್ತೆ ನೆನಪಿಸುತ್ತಿದ್ದಾರೆ,ಈ ಮಧ್ಯೆ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು ಎಲ್ಲೆಂದರಲ್ಲಿ ಕಸ ಹಾಗೂ ಹಲವು ಮೂಲಭೂತ ಸೌಕರ್ಯಗಳಿಲ್ಲದೇ ಪಟ್ಟಣದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದೆ.

ಯುವ ಮೋರ್ಚಾದ ಆರೋಪವೇನು ??
ಈ ಹಿಂದೆ 2023ರ ವಿಧಾನಸಭಾ ಚುನಾವಣ ಸಂದರ್ಭದಲ್ಲಿ ನರಸಿಂಹರಾಜಪುರ ಪಟ್ಟಣದಲ್ಲಿ 450ಕ್ಕೂ ಹೆಚ್ಚು ಕುಟುಂಬಗಳಿಗೆ ನಾಗರೋತ್ಥಾನ ಯೋಜನೆ ಅಡಿಯಲ್ಲಿ ಮಂಜೂರಾತಿ ಪತ್ರವನ್ನು ಹಂಚಿರುತ್ತಾರೆ. ಈ ರೀತಿಯ ಮಂಜೂರಾತಿಯ ಪತ್ರಕ್ಕೆ ಕ್ಷೇತ್ರದ ಶಾಸಕರು ಹಾಗೂ ಅಧ್ಯಕ್ಷೆ ಜುಬೇಧಾರವರು ಸಹಿ ಹಾಕಿ, ಹಂಚಿಕೆ ಮಾಡಿ ಪುನಃ ಶಾಸಕರು ಬಂದಲ್ಲಿ ಈ ಭರವಸೆ ಈಡೇರಿಸುತ್ತಾರೆ ಮತ ನೀಡಿ ಎಂದು ಹೇಳಿಕೊಂಡಿದ್ದರು. ಈಗ ಶಾಸಕರು ಪುನರಾಯ್ಕೆಯಾಗಿ, ಜುಬೇಧರವರು ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ ಆದರೆ ಇನ್ನೂ ಕೂಡ ಕೊಟ್ಟ ಭರವಸೆ ಈಡೇರಿಸಿಲ್ಲ.
ಈ ಬಗ್ಗೆ ಜುಬೇಧಾರವರನ್ನ ಪ್ರಶ್ನಿಸಿದಕ್ಕೆ ಪ್ರಶ್ನಿಸಿದವರ ವಿರುದ್ಧ ಪೊಲೀಸ್ ಕಂಪ್ಲೇಂಟ್ ನೀಡಿರುತ್ತಾರೆ. ಜನಪ್ರತಿನಿಧಿ ಸ್ಥಾನದಲ್ಲಿದ್ದುಕೊಂಡು ತಮ್ಮ ಕಾರ್ಯವೈಖರಿಯನ್ನು ಪ್ರಶ್ನಿಸಿದಕ್ಕೆ,ನಗರದ ಸಮಸ್ಯೆಗಳನ್ನು ಹೇಳಿದಕ್ಕಾಗಿ ಉತ್ತರಿಸುವುದನ್ನು ಬಿಟ್ಟು ಯಾರು ತಮ್ಮನ್ನು ಪ್ರಶ್ನಿಸಬಾರದೆಂದು ಪೊಲೀಸ್ ಕಂಪ್ಲೇಂಟ್ ನೀಡುರುತ್ತಾರೆ, ಇದು ಸಾಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರವನ್ನು ಹರಣ ಮಾಡಿದಂತೆ,
ಈ ಹಿಂದೆಯೂ ಸಹ ಕಸ ವಿಲೇವಾರಿ ಸಮಸ್ಯೆಯನ್ನು ಪ್ರಶ್ನಿಸಿದಕ್ಕೆ ಸಹ ಪೊಲೀಸ್ ಕಂಪ್ಲೇಂಟ್ ನೀಡಿರುತ್ತಾರೆ. ತಮ್ಮನ್ನು ಯಾರು ಸಹ ಪ್ರಶ್ನಿಸಬಾರದು ಎಂಬ ಈ ಧೋರಣೆ ಸಾರ್ವಜನಿಕ ಜೀವನರಲ್ಲಿರುವವರಿಗೆ ಶೋಭೆ ತರುವುದಿಲ್ಲ. ತಮ್ಮ ವೈಫಲ್ಯವನ್ನು ಮುಚ್ಚಿಟುಕೊಳ್ಳಲು ಈ ರೀತಿಯ ಪೊಲೀಸ್ ಕಂಪ್ಲೇಂಟ್ ನೀಡಿ ಹೆದರಿಸುವುದನ್ನು ಬಿಟ್ಟು ಕೊಟ್ಟಿರುವ ಭರವಸೆ ಈಡೇರಿಸಿ.
ಪಟ್ಟಣದಲ್ಲಿ ಕಸ ವಿಲೇವಾರಿ ಸಮಸ್ಯೆ ದಿನೆ ದಿನೆ ಹೆಚ್ಚುತ್ತಿದ್ದು ಸಂಭಂದಪಟ್ಟವರಿಗೆ ತಿಳಿಸಿದರು ಸಹ ಯಾವುದೇ ಉತ್ತರ ನೀಡಿರುವುದಿಲ್ಲ. ಪಟ್ಟಣದಲ್ಲಿ ಬೀದಿ ದೀಪದ ಸಮಸ್ಯೆಗೆ ಪಟ್ಟಣ ಪಂಚಾಯತಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದನೆಲ್ಲ ಪ್ರಶ್ನಿಸಿದಕ್ಕೆ ಪೊಲೀಸ್ ಕಂಪ್ಲೇಂಟ್ ನೀಡುತ್ತ ದ್ವೇಷದ ರಾಜಕಾರಣ ಮಾಡುವುದು,ಹೆದರಿಸುವುದು ಒಳ್ಳೆಯದಲ್ಲ ಇಂತಹ ಪ್ರಯತ್ನಕ್ಕೆ ಯಾರು ಹೆದರುವುದಿಲ್ಲ ಹಾಗೂ
ಪಟ್ಟಣ ಪಂಚಾಯಿತಿಯ ಈ ಕಾರ್ಯವೈಖರಿ ಸರಿ ಹೋಗದಿದ್ದಲ್ಲಿ ಸಾರ್ವಜನಿಕರ ಪರವಾಗಿ ಪಟ್ಟಣ ಪಂಚಾಯತಿ ಎದುರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಯುವ ಮೋರ್ಚಾ ನರಸಿಂಹರಾಜಪುರ ತಾಲೂಕು ಅಧ್ಯಕ್ಷ ಸೇರಿದಂತೆ ವಿವಿಧ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.