Categories
ಉಡುಪಿ

ಕಾಪು: ಮಾರಿಯಮ್ಮನ ದರ್ಶನ ಪಡೆದ ಬಾಲಿವುಡ್‌ ಹೀರೋ

ಕಾಪು: ಮಾರಿಯಮ್ಮನ ದರ್ಶನ ಪಡೆದ ಬಾಲಿವುಡ್‌ ಹೀರೋ

– ಮಾರಿಗುಡಿಗೆ ಬಾಲಿವುಡ್‌ ನಟ ಸುನಿಲ್ ಶೆಟ್ಟಿ ಭೇಟಿ!
– ಕುಟುಂಬ ಸಮೇತ ದೇವರ ದರ್ಶನ

NAMMUR EXPRESS NEWS
ಕಾಪು: ಬಾಲಿವುಡ್‌ ನಟ ಸುನಿಲ್ ಶೆಟ್ಟಿ ಅವರು ಕುಟುಂಬ ಸಮೇತ ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾರಿಯಮ್ಮನ ದರ್ಶನ ಪಡೆದರು.
ಇತ್ತೀಚೆಗಷ್ಟೇ ಬ್ರಹ್ಮಕಲಶೋತ್ಸವದ ಮೂಲಕ ಹೊಸ ಮೆರುಗು ಪಡೆದಿರುವ ದೇವಾಲಯದಲ್ಲಿ ಶಿಲ್ಪಗಳ ರಚನೆಯನ್ನು ವೀಕ್ಷಿಸಿದರು. ದೇಗುಲದ ಅಭಿವೃದ್ಧಿ ಸಮಿತಿ, ವ್ಯವಸ್ಥಾಪನಾ ಸಮಿತಿ ವತಿಯಿಂದ ಅವರನ್ನು ಗೌರವಿಸಲಾಯಿತು.
ಮೂಲತಃ ಮುಲ್ಕಿಯವರಾದ ಸುನಿಲ್ ಅವರು ಬಪ್ಪನಾಡು ದುರ್ಗಾಪರಮೇಶ್ವರಿ ದೇವಳದಲ್ಲಿ ನಡೆಯುತ್ತಿರುವ ಉತ್ಸವದ ಪ್ರಯುಕ್ತ ತಾಯಿ ಜೊತೆ ಬಂದಿದ್ದರು. ಸಂಬಂಧಿಕರು ಜೊತೆಗಿದ್ದರು.
ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯಾ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.