Categories
ಉಡುಪಿ

ಮಲ್ಪೆ: ಶೌಚಾಲಯದಲ್ಲಿ ಶಿಶುವಿನ ಮೃತದೇಹ  ಪತ್ತೆ!

ಉಡುಪಿ ಟಾಪ್ ನ್ಯೂಸ್

ಮಲ್ಪೆ: ಶೌಚಾಲಯದಲ್ಲಿ ಶಿಶುವಿನ ಮೃತದೇಹ  ಪತ್ತೆ!

– ಉಡುಪಿ: ಮನೆ ಮೇಲೆ ಬಿದ್ದ ಭಾರಿ ಗಾತ್ರದ ಅಶ್ವತ್ಥ ಮರ, ಗಂಭೀರ ಗಾಯ!
– ಹೆಬ್ರಿ: ಎರಡು ಕಾರುಗಳು ಮುಖಾಮುಖಿ ಢಿಕ್ಕಿ, ಹಲವರಿಗೆ ಗಾಯ!

NAMMUR EXPRESS NEWS
ಮಲ್ಪೆ: ಮಸೀದಿಗೆ ಸಂಬಂಧಿಸಿದ ಕಟ್ಟಡವೊಂದರ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಘಟನೆ ನಡೆದಿದೆ.
ಆಶ್ರಮದ ವ್ಯವಸ್ಥಾಪಕ ಸುಹೇಲ್ ಅವರು ಶೌಚಾಲಯಕ್ಕೆ ಹೋದಾಗ ನವಜಾತ ಶಿಶು ಮೃತದೇಹ ಬಿದ್ದಿತ್ತು.
ತಕ್ಷಣವೇ ಅವರು ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು, ಶಿಶು ಜನನಕ್ಕೆ ಮುಂಚೆ ಅಥವಾ ಆ ತರುವಾಯ ಅಥವಾ ಜನನದ ಕಾಲದಲ್ಲಿ ಮರಣ ಹೊಂದಿದ್ದು, ಯಾರೋ ಅಪರಿಚಿತರು ಆ ಮಗುವಿನ ಮೃತದೇಹವನ್ನು ರಹಸ್ಯವಾಗಿ ವಿಲೇ ಮಾಡಿ, ಮಗುವಿನ ಜನನವನ್ನು ಮರೆಮಾಚಲು ಯತ್ನಿಸಿರುವ ಸಾಧ್ಯತೆಯಿದೆ ಎಂದು ತಿಳಿಸುತ್ತಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.

– ಉಡುಪಿ: ಮನೆ ಮೇಲೆ ಬಿದ್ದ ಭಾರಿ ಗಾತ್ರದ ಅಶ್ವತ್ಥ ಮರ, ಗಂಭೀರ ಗಾಯ!

ಉಡುಪಿ: ಉಡುಪಿ ನಗರದ ಕಡಿಯಾಳಿ ವಾರ್ಡಿನಲ್ಲಿ ಡಾ. ವಿ. ಎಸ್. ಆಚಾರ್ಯ ಮನೆ ಪರಿಸರದ ಕಟ್ಟೆ ಆಚಾರ್ಯ ಮಾರ್ಗದಲ್ಲಿ ಭಾರೀ ಪ್ರಮಾಣದ ಸುಂಟರ ಗಾಳಿಗೆ ಬೃಹತ್ ಗಾತ್ರದ ಅಶ್ವತ್ಥ ಮರ ಮನೆಯ ಮೇಲೆ ಬಿದ್ದು ಪೂರ್ಣ ಪ್ರಮಾಣದ ಹಾನಿಯಾದ ಘಟನೆ ಸಂಭವಿಸಿದೆ.
ಮನೆಯೊಳಗೆ‌‌ ಸಿಳುಕಿಕೊಂಡಿರುವ ದಂಪತಿಗಳನ್ನು ಸಮಾಜಸೇವಕ ನಿತ್ಯಾನಂದ‌ ಒಳಕಾಡುರವರು ಸ್ಥಳೀಯರ ಸಹಕಾರದಿಂದ ಹೊರ ತೆಗೆದಿದ್ದಾರೆ.
ಬಾಣಸಿಗ ರಾಘವೇಂದ್ರ‌ ಭಟ್ (60) ಪತ್ನಿ ನೀರಜಾ ಭಟ್ (49) ಗಾಯಾಳುಗಳಾಗಿದ್ದಾರೆ. ಇರ್ವರಿಗೂ ಗಂಭೀರ ಸ್ವರೂಪದ ಗಾಯಗಳಾರುವುದರಿಂದ ಖಾಸಗಿ ಆಸ್ಪತ್ರೆಗೆ ದಾಖಲುಪಡಿಸಿದ್ದಾರೆ.
ಮನೆ ಸಂಪೂರ್ಣ ಜಖಂಗೊಂಡಿದ್ದು, ಅಪಾರ‌ ನಷ್ಟ ಸಂಭವಿಸಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು, ಮರ ಕಡಿದು ರಸ್ತೆ ಸಂಚಾರವನ್ನು ಸುಗಮಗೊಳಿಸಿದ್ದಾರೆ.

– ಹೆಬ್ರಿ: ಎರಡು ಕಾರುಗಳು ಮುಖಾಮುಖಿ ಢಿಕ್ಕಿ, ಹಲವರಿಗೆ ಗಾಯ!

ಹೆಬ್ರಿ: ಹೆಬ್ರಿ ಅಲ್ಬಾಡಿ ಬಳಿ ಎರಡು ಕಾರುಗಳು ಮುಖಾಮುಖಿ ಢಿಕ್ಕಿಯಾದ ಘಟನೆ ಸಂಭವಿಸಿದ್ದು, ಹಲವರಿಗೆ ಗಾಯಗಳಾಗಿವೆ.
ಮಂಗಳೂರು ದೇರಳಕಟ್ಟೆಯ ಸುನೀಲ್‌(54) ಕುಂದಾಪುರದ ಆನಗಳ್ಳಿಯಿಂದ ಪತ್ನಿ ಶೈಲಜ ಹಾಗೂ ಸ್ನೇಹಿತ ಮೋಹನ್‌ಕುಮಾರ ಅವರನ್ನು ಎ. 13ರಂದು ಕಾರಿನಲ್ಲಿ ಕುಳ್ಳಿರಿಸಿಕೊಂಡು ಬೆಂಗಳೂರು ಕಡೆಗೆ ಹೋಗುತ್ತಿದ್ದರು. ಹೆಬ್ರಿ ತಾಲೂಕು ಅಲ್ಬಾಡಿ ಗ್ರಾಮದ 9ನೇ ಮೈಲುಕಲ್ಲು ಬಳಿ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆಯಿತು. ಎರಡು ಕಾರುಗಳು ಜಖಂಗೊಂಡು ಕಾರಿನಲ್ಲಿದ್ದ ಸುನೀಲ್‌ ಮತ್ತು ಮೋಹನ್‌ಕುಮಾರ್‌ ಅವರಿಗೆ ಗಾಯಗಳಾಗಿವೆ.
ಢಿಕ್ಕಿ ಹೊಡೆದ ಕಾರಿನ ಚಾಲಕ ಚೌಡ, ಪ್ರಯಾಣಿಕರಾದ ಪ್ರಜ್ವಲ್‌, ಧೀರಜ್‌, ಲಕ್ಷ್ಮಮ್ಮ, ಪ್ರೇಮಾ ಸಿರಿ ಅವರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.