Categories
ಉಡುಪಿ

ಏ.16ರಿಂದ ಏ.21ರವರೆಗೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಜಾತ್ರಾ ಮಹೋತ್ಸವ!

ಏ.16ರಿಂದ ಏ.21ರವರೆಗೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಜಾತ್ರಾ ಮಹೋತ್ಸವ!

– ಉಡುಪಿ ದೇವಸ್ಥಾನ ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಆಯೋಜನೆ
– ನಡೆಯಲಿದೆ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮ: ಸರ್ವರಿಗೂ ಸ್ವಾಗತ

NAMMUR EXPRESS NEWS
ಉಡುಪಿ: ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಏ.16ರಿಂದ ಏ.21ರವರೆಗೆ ಶ್ರೀ ಅಮ್ಮನವರ ಮಹಾ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ.

ಕಾರ್ಯಕ್ರಮಗಳ ವಿವರ ಹೀಗಿದೆ!

ಏ. 16ರಂದು ಬುಧವಾರ ಅಂಕುರಾರೋಪಣ, ಧ್ವಜಾರೋಹಣ, ರಾತ್ರಿ ಭೇರಿ ತಾಡನ, ಯಾಗಶಾಲಾ ಪ್ರವೇಶ, ಕೌತುಕ ಬಂಧನ, ಶಿಬಿಕಾಯನೋತ್ಸವ.
ಏ.17 ಗುರುವಾರ ಸಿಂಹವಾಹನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಏ.18ರಂದು ಶುಕ್ರವಾರ ಮಹಾ ರಂಗಪೂಜೆ ಮತ್ತು ಪುಷ್ಪಕವಾಹನೋತ್ಸವ ಏ. 19 ಶನಿವಾರ “ಶ್ರೀ ಮನ್ಮಹಾರಥೋತ್ಸವ” ಅದ್ದೂರಿಯಾಗಿ ಜರುಗಲಿದೆ.
ಏ.20ರಂದು ಭಾನುವಾರ ಚೂರ್ಣೋತ್ಸವ ಏ.21ರಂದು ಸೋಮವಾರ ಪ್ರಾತಃ ಅವಭ್ರತ, ಮೃಗಯಾ ವಿಹಾರ, ಪೂರ್ಣಾಹುತಿ, ಧ್ವಜಾವರೋಹಣ, ಕುಂಭಾಭಿಷೇಕ ನಡೆಯಲಿವೆ.
ಅನುವಂಶಿಕ ಮೊತ್ತೇಸರರು ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ ಆಡಳಿತ , ಅನುವಂಶಿಕ ಮೊಕ್ತಸರರು ಆಜ್ರಿ ಚಂದ್ರಶೇಖರ ಶೆಟ್ಟಿ ಮತ್ತು ಗ್ರಾಮಸ್ಥರು ಈ ಮೂಲಕ ತಮಗೆಲ್ಲರಿಗೂ ಸ್ವಾಗತ ಕೋರುತ್ತಿದ್ದಾರೆ.

ವಿಶೇಷ ಸೂಚನೆ!

ಏ. 19ನೇ ಶನಿವಾರ ರಥೋತ್ಸವದ ರಾತ್ರಿ ಗಂಟೆ 10-00ಕ್ಕೆ ಶ್ರೀ ಕ್ಷೇತ್ರದ ದಶಾವತಾರ ಮೇಳದವರಿಂದ ಸೇವೆ ಆಟ ಜರುಗಲಿರುವುದು.
ಏ.20ರಂದು ತುಲಾಭಾರ ಸೇವೆ ಇರುವುದರಿಂದ ಸೇವೆ ಮಾಡಲಿಚ್ಚಿಸುವವರು ಏ. 19ರ ಸಂಜೆ ಒಳಗೆ ತಿಳಿಸತಕ್ಕದ್ದು. ವರ್ಷದ ಎಲ್ಲಾ ದಿನಗಳಲ್ಲಿ ಬಂದಂತ ಭಕ್ತಾದಿಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಇದೆ.
ಪ್ರತೀ ದಿನ ಪ್ರಸಾದ ಸೀರೆಗಳ ಮಾರಾಟ ಇರಲಿದೆ ಹಾಗೂ ರಥೋತ್ಸವ ಹಾಗೂ ಓಕಳಿ ದಿನಗಳಲ್ಲಿ ಸಿದ್ದಾಪುರದಿಂದ ವಿಶೇಷ ಬಸ್ಸಿನ ವ್ಯವಸ್ಥೆ ಇರುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.