Categories
ಉಡುಪಿ

ಉಡುಪಿ ಜಿಲ್ಲಾ ನೂತನ ಎಸ್ಪಿಯಾಗಿರುವ ಹರಿರಾಮ್ ಶಂಕರ್ ಅವರಿಗೆ ಗೌರವ!

ಉಡುಪಿ ಜಿಲ್ಲಾ ನೂತನ ಎಸ್ಪಿಯಾಗಿರುವ ಹರಿರಾಮ್ ಶಂಕರ್ ಅವರಿಗೆ ಗೌರವ!

* ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕಾರ
* ನೂತನ ಎಸ್ಪಿಯನ್ನು ಗೌರವಿಸಿದ ಧಾರ್ಮಿಕ ಮಾರ್ಗದರ್ಶಕರು ಸಂತೋಷ ಉಡುಪಿ!

NAMMUR EXPRESS NEWS
ಉಡುಪಿ: ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹರಿರಾಮ್ ಶಂಕರ್ ಅಧಿಕಾರ ಸ್ವೀಕರಿಸಿದ್ದಾರೆ.
ಉಡುಪಿ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಹರಿರಾಮ್ ಶಂಕರ್ ಅವರನ್ನು ಧಾರ್ಮಿಕ ಮಾರ್ಗದರ್ಶಕ ಸಂತೋಷ ಉಡುಪಿಯವರು ಭೇಟಿ ಮಾಡಿದರು.  ಐಪಿಎಸ್ ಮಧುಕರ್ ಶೆಟ್ಟಿಯವರ ಭಾವ ನೀಡಿ ಗೌರವಿಸಿ  ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ  ಶಶಿಧರ್ ಕಟಪಾಡಿ ಶಾಲು ಹಾಕಿ ಗೌರವಿಸಿದರು ಮತ್ತು ರವಿಪಾಲಮೆ ಉಪಸ್ಥಿತರಿದ್ದರು.
ನಿರ್ಗಮನ ಎಸ್ಪಿ ಡಾ.ಅರುಣ್ ಕೆ. ಅವರು ಹರಿರಾಮ್‌ಗೆ ಅಧಿಕಾರ ಹಸ್ತಾಂತರಿಸಿದ್ದರು.
ಕಳೆದ ಸುಮಾರು 20 ತಿಂಗಳಿನಿಂದ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದ ಡಾ.ಅರುಣ್ ಕೆ. ಅವರನ್ನು ಕನ್ನಡ ಜಿಲ್ಲೆಯ ಎಸ್ಪಿಯಾಗಿ ರಾಜ್ಯ ಸರಕಾರ ವರ್ಗಾವಣೆ ಮಾಡಿದೆ. ತೆರವಾದ ಸ್ಥಾನಕ್ಕೆ ಪೊಲೀಸ್ ಇಂಟಲಿಜೆನ್ಸ್ ವಿಭಾಗದ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಹರಿರಾಮ್ ಶಂಕರ್ ರನ್ನು ನಿಯುಕ್ತಿಗೊಳಿಸಿ ಸರಕಾರ ಆದೇಶಿಸಿತ್ತು. ಅದರಂತೆ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಕೇರಳದ ತ್ರಿಶೂರ್ ನ ಹರಿರಾಮ್ ಶಂಕರ್, ಕಲ್ಲಿಕೋಟೆ ಎನ್‌ಐಟಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2016ರಲ್ಲಿ ತಮ್ಮ ಐದನೇ ಪ್ರಯತ್ನದಲ್ಲಿ ಅವರು ಯುಪಿಎಸ್ಸಿಯಲ್ಲಿ 145ನೇ ರ್ಯಾಂಕ್ ಪಡೆದು ತಾವು ಬಯಸಿದ ಐಪಿಎಸ್ ಹುದ್ದೆಗೆ ಆಯ್ಕೆಯಾಗಿದ್ದರು.
ಹರಿರಾಮ್ ಶಂಕರ್ ಅವರು ಬೆಳಗಾವಿ, ಕುಂದಾಪುರ ಉಪವಿಭಾಗದ ಎಸಿಪಿ, ಮಂಗಳೂರಿನಲ್ಲಿ ಡಿಸಿಪಿ, ಹಾಸನದಲ್ಲಿ ಎಸ್ಪಿಯಾಗಿಯೂ ಕಾರ್ಯನಿರ್ವಹಿಸಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.