ಇಂದು ನೀಲಾವರ ಮಹತೋಭಾರ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಮನ್ಮಹಾರಥೋತ್ಸವ!
– ಏ. 11ರಿಂದ 18ರವರೆಗೆ ವರ್ಷಾವಧಿ ಮಹೋತ್ಸವ
– ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ: ಸರ್ವರಿಗೂ ಸ್ವಾಗತ
NAMMUR EXPRESS NEWS
ಉಡುಪಿ: ನೀಲಾವರ ಮಹತೋಭಾರ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಏ. 16ರಂದು ಮನ್ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಇಲ್ಲಿ ವರ್ಷಾವಧಿ ಮಹೋತ್ಸವವು ಎಪ್ರಿಲ್ 11ರಂದು ಮೊದಲ್ಗೊಂಡು ಇದೇ ಎಪ್ರಿಲ್ ಹದಿನೆಂಟರವರೆಗೆ ಜರುಗಲಿದೆ.
ನಡೆಯಲಿರುವ ಮನ್ಮಹಾರಥೋತ್ಸವದಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ಪ್ರಸಾದವನ್ನು ಸ್ವೀಕರಿಸಿ ಜಗನ್ಮಾತೆಯ ಕೃಪೆಗೆ ಪಾತ್ರರಾಗುವಂತೆ ದೇಗುಲದ ಆಡಳಿತ ಸಮಿತಿ ವಿನಂತಿಸಿದೆ.
ಎಪ್ರಿಲ್ 18ರವರೆಗೆ ದೇಗುಲದಲ್ಲಿ ವಿವಿದ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದ್ದು, ಏ. 16ರಂದು ನಡೆಯಲಿರುವ ಮನ್ಮಹಾರಥೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ದೇಗುಲದ ಮಹಾ ಉತ್ಸವಕ್ಕೆ ಭಕ್ತರು ತನು ಮನ ಧನಗಳಿಂದ ಸಹಕರಿಸಿ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಆಡಳಿತ ಸಮಿತಿ ಮನವಿ ಮಾಡಿದೆ.
