ಏಪ್ರಿಲ್ 19ರಿಂದ ಕಾರ್ಕಳದಲ್ಲಿ ಅದ್ದೂರಿ ಸಮ್ಮರ್ ಫೆಸ್ಟಿವಲ್!
– ಕಾರ್ಕಳದ ಸ್ವರಾಜ್ ಮೈದಾನದಲ್ಲಿ ವರ್ಣರಂಜಿತ ಕಾರ್ಯಕ್ರಮ
– ಆಹಾರ, ವಾಹನ ಪ್ರದರ್ಶನ, ಫ್ಯಾಷನ್ ಶೋ, ನೃತ್ಯ ವೈವಿಧ್ಯಮಯದ ರಂಗು!
NAMMUR EXPRESS NEWS
ಕಾರ್ಕಳ: ಕಾರ್ಕಳದ ಸ್ವರಾಜ್ ಮೈದಾನದಲ್ಲಿ ಇದೇ ಏಪ್ರಿಲ್ 19ರಿಂದ 27ರವರೆಗೆ ವರ್ಣರಂಜಿತ ಅದ್ಧೂರಿ ಸಮ್ಮರ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿದೆ.
ಈ ಫೆಸ್ಟಿವಲಿನಲ್ಲಿ ಆಹಾರ ಮೇಳ, ವಾಹನ ಪ್ರದರ್ಶನ, ಫ್ಯಾಷನ್ ಶೋ, ನೃತ್ಯ ವೈವಿಧ್ಯ ಮತ್ತು ಇತರೆ ವ್ಯಾಪಾರ ಮಳಿಗೆಗಳು ಇರಲಿದೆ. ಸುಮಾರು 140 ಸ್ಟಾಲ್ ಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಮನರಂಜನೀಯ ಈ ಫೆಸ್ಟಿವಲ್ ನಲ್ಲಿ ನೀವೂ ಭಾಗವಹಿಸಿ, ಕುಟುಂಬದವರನ್ನೂ ಕರೆತನ್ನಿ. ಸ್ಟಾಲ್ ಪಡೆಯಲು ಇಚ್ಛಿಸುವವರು 7259170060 ಈ ನಂಬರ್ ಅಥವಾ 7892744747 ಇದನ್ನು ಸಂಪರ್ಕಿಸಬಹುದು.
