ಅಮೃತಭಾರತಿ ಆಂಗ್ಲ ಮಾಧ್ಯಮ ವಿದ್ಯಾಲಯದಲ್ಲಿ ಯೋಗ ದಿನಾಚರಣೆ ವಿಜೃಂಭಣೆಯಿಂದ ಆಚರಣೆ
ಹೆಬ್ರಿ: ಪಿ.ಆರ್.ಎನ್ ಅಮೃತಭಾರತಿ ಆಂಗ್ಲ ಮಾಧ್ಯಮ ವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21ರಂದು ಉತ್ಸಾಹದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಮುದ್ರಾಡಿ ಗಣಪತಿ ಪೈ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಯೋಗದ ಮಹತ್ವದ ಬಗ್ಗೆ ಭಾಷಣ ನೀಡಿದರು.
“ಯೋಗಾತ್ ರೋಗ ನಿವಾರಣಮ್” ಎಂಬ ಘೋಷವಾಕ್ಯವನ್ನು ಉಲ್ಲೇಖಿಸಿದ ಅವರು, ಯೋಗವೆಂದರೆ ಕೇವಲ ಶಾರೀರಿಕ ಅಭ್ಯಾಸವಷ್ಟೇ ಅಲ್ಲ, ಅದು ದೈಹಿಕ ಹಾಗೂ ಮಾನಸಿಕ ಸಮತೋಲನಕ್ಕೆ ನಂಬಿಕೆಯಾದ ಮಾರ್ಗ ಎಂದು ಹೇಳಿದರು. ನಿತ್ಯ ಯೋಗಾಭ್ಯಾಸದಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಹಾಗೂ ಜೀವನದಲ್ಲಿ ಶಾಂತಿ, ಏಕಾಗ್ರತೆ ಸಿಗುತ್ತದೆ ಎಂಬುದಾಗಿ ಅವರು ಸಲಹೆ ನೀಡಿದರು. ನಂತರ ಅವರು ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಸ್ಥೆ ಅಪರ್ಣಾ ಆಚಾರ್, ದೈಹಿಕ ಶಿಕ್ಷಣ ಶಿಕ್ಷಕ ನಿಶಾನ್ ಶೆಟ್ಟಿ ಹಾಗೂ ಗುರುಬೃಂದದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಹೆಗ್ಡೆ ಆತಿಥ್ಯವಹಿಸಿ, ವೇದವ್ಯಾಸ ತಂತ್ರಿ ಮಡಾಮಕ್ಕಿ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಯೋಗದ ಪ್ರಾಮುಖ್ಯತೆಯ ಅರಿವು ಮೂಡಿಸಿ, ಆರೋಗ್ಯದತ್ತ ಗಮನ ಹರಿಸುವ ಪ್ರೇರಣೆಯಾಯ್ತು. ಗುರುವೃಂದ ದವರು ಉಪಸ್ಥಿತರಿದ್ದರು