Categories
ಉಡುಪಿ

ಧರ್ಮಸ್ಥಳ ವಿರುದ್ಧ ಅಪಪ್ರಚಾರ ಯೂ ಟ್ಯೂಬರ್‌ಗಳಿಗೆ ವಿದೇಶಿ ಹಣ ಆರೋಪ

ಧರ್ಮಸ್ಥಳ ವಿರುದ್ಧ ಅಪಪ್ರಚಾರ ಯೂ ಟ್ಯೂಬರ್‌ಗಳಿಗೆ ವಿದೇಶಿ ಹಣ ಆರೋಪ

* ಇ ಡಿ ತನಿಖೆಗೆ ಆಗ್ರಹಿಸಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿಯಿಂದ ಪತ್ರ
* ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಪತ್ರ ಬರೆದ ಸಂಸದ ಕೋಟಾ, ಪತ್ರದಲ್ಲೇನಿದೆ ಇಲ್ಲಿದೆ ಮಾಹಿತಿ

NAMMMUR EXPRESS NEWS
ಉಡುಪಿ: ಹಲವು ದಿನಗಳಿಂದ ನಿರಂತರ ಧರ್ಮಸ್ಥಳದ ಮೇಲಾಗುತ್ತಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ಈ ಅಪಪ್ರಚಾರದಲ್ಲಿ ಯೂಟ್ಯೂಬರ್‌ಗಳ ಪಾತ್ರ ಎದ್ದು ಕಾಣುತ್ತಿದ್ದು ಇದರ ಹಿಂದೆ ವಿದೇಶಿ ಹಣ ಸ್ವೀಕರಿಸಿದ ಮಾಹಿತಿ ಇರುವ ಹಿನ್ನೆಲೆಯಲ್ಲಿ ಯೂ ಟ್ಯೂಬರ್‌ಗಳ ಮೇಲೆ ಇ ಡಿ ತನಿಖೆ ನಡೆಸುವಂತೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.

* ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರ ಪತ್ರದಲ್ಲೇನಿದೆ
ಸಂಸದರು ಬರೆದಿರುವ ಪತ್ರದಲ್ಲಿ ಕರ್ನಾಟಕ ರಾಜ್ಯದ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಮೇಲೆ ಕೆಲವು ಮಂದಿ ಯೂಟ್ಯೂಬರ್‌ಗಳ ಅಪಪ್ರಚಾರದಿಂದ ಹಿಂದೂ ಧಾರ್ಮಿಕ ಕೇಂದ್ರದ ಮೇಲಿರುವ ಪಾವಿತ್ರತೆಗೆ ಧಕ್ಕೆಯಾಗುತ್ತಿದ್ದು, ಇದರ ಹಿಂದೆ ವಿದೇಶಿ ಹಣ ಹರಿದು ಬಂದ ಗುಮಾನಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇ.ಡಿ ಮೂಲಕ ತನಿಖೆ ನಡೆಸಿ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಶ್ರೀಮಂಜುನಾಥ ಸ್ವಾಮಿ ದೇವಸ್ಥಾನದ ವಿರುದ್ಧ ಬಾರಿ ಷಡ್ಯಂತರ ನಡೆದಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಬಹಿರಂಗ ಹೇಳಿಕೆ ನೀಡಿದ್ದು, ಎಡಪಂಥಿಯರ ಒತ್ತಡಕ್ಕೆ ಎಸ್.ಐ.ಟಿ ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಅನಾಮಧೇಯ ಆರೋಪಿಯನ್ನು ನಂಬಿ ಎಸ್.ಐ.ಟಿ ಮೂಲಕ ಆತ ಕೈ ತೋರಿಸಿದೆಡೆ ಹೊಂಡ ಗುಂಡಿಗಳನ್ನು ತೋಡಿ ಗೊಂದಲ ನಿರ್ಮಿಸಿದೆ. ಆರಾಧ್ಯ ದೈವ ಬಾಹುಬಲಿ ಬುಡಕ್ಕು ಜೆಸಿಬಿ ನುಗ್ಗಿಸಿ ಭಕ್ತಾದಿಗಳು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಅನಾಮಧೇಯ ಆರೋಪಿ, ನನಗೆ ತಲೆ ಬುರುಡೆ ಕೊಟ್ಟು ಇಂತಹ ಕೆಲಸಗಳಿಗೆ ನಿಯೋಜಿಸಲಾಗಿದೆ ಎಂದು ಪೊಲೀಸರಿಗೆ ತಿಳಿಸಿದ ಬಗ್ಗೆ ಸುದ್ದಿ ಬರುತ್ತಿದೆ.
ಈ ಹಿನ್ನೆಲೆಯಲ್ಲಿ ನನ್ನ ಪತ್ರವನ್ನು ಗಂಭೀರವಾಗಿ ಗಮನಿಸಿ. ಈ ಷಡ್ಯಂತ್ರದ ಹಿಂದೆ ವಿದೇಶಿ ಹಣ ಸಂಗ್ರಹಿಸಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಕಳಂಕ ತರಲು ಯತ್ನಿಸಿದ ವ್ಯಕ್ತಿಗಳ ಬಗ್ಗೆ ಇ.ಡಿ ಮೂಲಕ ತನಿಖೆ ನಡೆಸಿ, ಕ್ರಮ ಜರುಗಿಸಬೇಕೆಂದು ಸಂಸದ ಕೋಟ, ಕೇಂದ್ರ ಗ್ರಹ ಮಂತ್ರಿ ಅಮಿತ್‌ ಷಾ ರವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.