Categories
Uncategorized ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಬೀದರಗೋಡು ಕ್ರಷರ್ ಮಾಫಿಯಾಕ್ಕೆ ಅರಣ್ಯ ಲೂಟಿ?

ಬೀದರಗೋಡು ಕ್ರಷರ್ ಮಾಫಿಯಾಕ್ಕೆ ಅರಣ್ಯ ಲೂಟಿ?
– ಕುವೆಂಪು ನಾಡಲ್ಲಿ ಅರಣ್ಯ ಭೂಮಿ ಲೂಟಿಗೆ ಹುನ್ನಾರ?
– ಅರಣ್ಯ ಲೂಟಿಗೆ ಎಲ್ಲಾ ಪಕ್ಷದ ನಾಯಕರ ಕೈ…!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಬಿದರಗೋಡು ಸರ್ವೇ ನಂ 73ರಲ್ಲಿ ಸ್ಟೋನ್ ಕ್ರಷರ್( ಕಪ್ಪು ಕಲ್ಲು ಕ್ವಾರಿ ) ಇದೀಗ ಶುರುವಾಗುವ ಹಂತದಲ್ಲಿದೆ. ಇಲ್ಲಿ ಒಟ್ಟು 239 ಎಕರೆ ಜಮೀನಿದ್ದು, ಇದರಲ್ಲಿ 100 ಎಕರೆ ಪರಿಭಾವಿತ ಅರಣ್ಯವಿದೆ. ಇದನ್ನು ಗುರುತಿಸದೇ ಈ ಭೂಮಿಯಲ್ಲಿ 17 ಎಕರೆಯನ್ನು ಕ್ರಷರ್ ಗೆ ನೀಡಲು ಕಂದಾಯ & ಅರಣ್ಯ ಇಲಾಖೆ ಅಧಿಕಾರಿಗಳೇ ಆಸಕ್ತರಾಗಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.

ಅವಿರತ ಹೋರಾಟ ನಿರತ ಬಿದರಗೋಡು ಜನರು, ಈ ಕುರಿತು ಮಾನ್ಯ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಅವರ ಕಚೇರಿಗೂ ಪತ್ರ ಬರೆದಿದ್ದಾರೆ. ಅರಣ್ಯ ಭೂಮಿ ಉಳಿಸಲು ಸಚಿವರಿಗೆ ಮನವಿ ಮಾಡಿದ್ದಾರೆ.
ಬಿದರಗೋಡು ಗುಡ್ಡದಲ್ಲಿ ಅರಣ್ಯ ನಾಶ ಪ್ರಕರಣಗಳಿವೆ. ಸಮೀಪವೇ ಸೋಮೇಶ್ವರ ವೈಲ್ಡ್ ಲೈಫ್ ಪರಿಮಿತಿ ಇದೆ. ಆಗುಂಬೆ ನಿತ್ಯಹರಿದ್ವರ್ಣ ಕಾಡು ಸಮೀಪವಿದೆ. ಕಾಡು ಪ್ರಾಣಿಗಳ ಓಡಾಟವಿದೆ. ಸುತ್ತಲ ಹಳ್ಳಿಯ ನೀರಿನ ಟ್ಯಾಂಕ್ ಎಂದೇ ಕರೆಯಲಾಗುತ್ತದೆ. ದಶಕದ ಹಿಂದೆಯೇ ನಿಂತಿದ್ದ ಕ್ವಾರಿ ಪುನಾರಂಭಕ್ಕೆ ಇಲ್ಲಿದ್ದ ಅಮೂಲ್ಯ ಮರಗಳನ್ನು ಲೂಟಿ ಮಾಡಿ, ಅರಣ್ಯ ಸ್ವರೂಪವನ್ನೇ ಬದಲಿಸಲಾಗಿದೆ. ಪಕ್ಷಾತೀತ ಲಾಭಿ ಇದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಅರಣ್ಯ ಲೂಟಿಗೆ ಎಲ್ಲಾ ಪಕ್ಷದ ನಾಯಕರ ಕೈ…!

ಅರಣ್ಯ ಲೂಟಿ ಮತ್ತು ಅವ್ಯವಹಾರಕ್ಕೆ ಎಲ್ಲಾ ಪಕ್ಷದ ಕೆಲವು ನಾಯಕರ ಕೈ ಇದೆ. ಬಲಾಡ್ಯರ ಪ್ರಭಾವ ಇದೆ. ಹಣದ ಕರಾಮತ್ತು ಇದೆ. ಅಧಿಕಾರಿಗಳ ಒಳ ಟೇಬಲ್ ವ್ಯವಹಾರ ಇದೆ. ಕೂಡಲೇ ಈ ಅಕ್ರಮ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.